ETV Bharat / bharat

ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ ಜತೆಗೆ ಮಸೀದಿ ನಿರ್ಮಾಣಕ್ಕೂ ಅಡಿಪಾಯ ಹಾಕಿ: ಮೋದಿಗೆ ಮುಸ್ಲಿಂ ಮುಖಂಡರ ಮನವಿ - ಭಗವಾನ್ ರಾಮನ ವಿಗ್ರಹ

2024 ರ ಜನವರಿ 22ರಂದು ರಾಮಮಂದಿರದಲ್ಲಿ ರಾಮನಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಮಂದಿರ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವಸ್ಥಾನ ಮಂಡಳಿ ಔಪಚಾರಿಕೆ ಆಹ್ವಾನ ನೀಡಿದೆ. ಈ ನಡುವೆ ರಾಮಮಂದಿರ ಉದ್ಘಾಟನೆಗೂ ಮುನ್ನ ಬಾಬರಿ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಎಂದು ಪ್ರಧಾನಿ ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ.

Etv BharatPM to attend Ram Temple inauguration, Muslim leaders want him to also lay mosque's foundation
Etv Bharatಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ ಜತೆಗೆ ಮಸೀದಿ ನಿರ್ಮಾಣಕ್ಕೂ ಅಡಿಪಾಯ ಹಾಕಿ: ಮೋದಿಗೆ ಮುಸ್ಲಿಂ ಮುಖಂಡರ ಮನವಿ
author img

By ETV Bharat Karnataka Team

Published : Oct 26, 2023, 6:49 AM IST

ಅಯೋಧ್ಯಾ(ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22, 2024 ರಂದು ಅಯೋಧ್ಯೆಯ ರಾಮಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾಪನಾ' ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ರಾಮ ಮಂದಿರ ದೇವಸ್ಥಾನದ ಟ್ರಸ್ಟ್‌ ಸದಸ್ಯರು ಬುಧವಾರ ದೆಹಲಿಯಲ್ಲಿ ಪ್ರಧಾನಿಗೆ ಔಪಚಾರಿಕವಾಗಿ ಆಹ್ವಾನ ನೀಡಿದ್ದಾರೆ.

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರದ 'ಗರ್ಭಗೃಹ' ದಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ದಿನಾಂಕವನ್ನು ಅಧಿಕೃತಗೊಳಿಸಿದ್ದಾರೆ. ಜನವರಿ 22, 2024 ರಂದು ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಈ ದಿನದಂದೇ ರಾಮನ ವಿಗ್ರಹವನ್ನು ದೇವಾಲಯದ ಒಳಗೆ ಇಡಲಾಗುತ್ತದೆ. ಜನವರಿ 22 ರಂದು ಅಯೋಧ್ಯಾ ದೇವಸ್ಥಾನದಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಘೋಷಿಸಿದ ಒಂದು ದಿನದ ನಂತರ ಪ್ರಧಾನಿ ಮೋದಿಗೆ ಆಹ್ವಾನವನ್ನ ನೀಡಲಾಗಿದೆ. ಇನ್ನು ದೇಶದ ಎಲ್ಲ ದೇವಾಲಯಗಳಲ್ಲಿ ಈ ಸಂಬಂಧಿ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಜನರಿಗೆ ಕರೆ ನೀಡಿದ್ದಾರೆ. ಈ ಮೂಲಕ ರಾಮನ ನಾಮ ಸ್ಮರಣೆಗೆ ಒತ್ತಾಯಿಸಿದ್ದಾರೆ.

ಮಸೀದಿ ಅಡಿಗಲ್ಲು ಸಮಾರಂಭಕ್ಕೂ ಬನ್ನಿ- ಪ್ರಧಾನಿಗೆ ಮುಸ್ಲಿಂ ಮುಖಂಡರ ಮನವಿ: ಇದು ರಾಮಮಂದಿರ ಉದ್ಘಾಟನೆಯ ಮಾಹಿತಿ ಆದರೆ, ಇನ್ನು ಕೆಲವು ಮುಸ್ಲಿಂ ಮುಖಂಡರು ಹೊಸ ಬಾಬರಿ ಮಸೀದಿ ಶಂಕುಸ್ಥಾಪನೆಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಅಯೋಧ್ಯೆ ಭೂ ವಿವಾದದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿತ್ತು. 2.77 ಎಕರೆ ವಿವಾದಿತ ಪ್ರದೇಶ ರಾಮನ ಜನ್ಮಭೂಮಿ ಎಂದು ಹೇಳಿತ್ತು. 2019 ರಲ್ಲಿ ಈ ಬಗ್ಗೆ ಐತಿಹಾಸಿಕ ತೀರ್ಪು ನೀಡಿದ್ದ ಕೋರ್ಟ್​ , 2.77 ಎಕರೆ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿತ್ತು. ಇದೇ ವೇಳೆ ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ 5 ಎಕರೆ ಭೂಮಿ ನೀಡುವಂತೆ ತೀರ್ಪಿನಲ್ಲಿ ಆದೇಶ ನೀಡಿತ್ತು.

ದೇವಾಲಯದ ನಿರ್ಮಾಣಕ್ಕಾಗಿ 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ' ರಚನೆಯಾದರೆ, ಮಸೀದಿಯ ನಿರ್ಮಾಣದ ಮೇಲ್ವಿಚಾರಣೆಗಾಗಿ 'ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್' ಅನ್ನು ರಚಿಸಲಾಗಿದೆ. ಬಾಬರಿ ಮಸೀದಿ-ರಾಮ ಮಂದಿರ ವಿವಾದದ ಪ್ರಮುಖ ಅರ್ಜಿದಾರರಲ್ಲಿ ಒಬ್ಬರಾಗಿದ್ದ ಇಕ್ಬಾಲ್ ಅನ್ಸಾರಿ, ಮಸೀದಿ ನಿರ್ಮಾಣ ವಿಳಂಬಕ್ಕೆ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ಸದಸ್ಯರನ್ನು ಹೊಣೆಗಾರರನ್ನಾಗಿಸಿದ್ದಾರೆ.

ಮಸೀದಿ ನಿರ್ಮಾಣದ ವೇಗಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ಟ್ರಸ್ಟಿಗಳನ್ನು ಬದಲಾಯಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ. ಜನವರಿಯಲ್ಲಿ ಶ್ರೀರಾಮ ಮಂದಿರ ರಾಮನ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಅಧಿಕೃತವಾಗಿ ಉದ್ಘಾಟನೆ ಆಗಲಿದೆ. ಆದರೆ ಮಸೀದಿ ನಿರ್ಮಾಣಕ್ಕೆ ಇನ್ನೂ ಅಡಿಪಾಯವನ್ನೇ ಹಾಕಲಾಗಿಲ್ಲ.

ಮಸೀದಿ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿ: "ನಮ್ಮ ಪ್ರಧಾನಿಯವರು ಶುಭ ಸಂದರ್ಭದಲ್ಲಿ ಅಯೋಧ್ಯೆಗೆ ಬರುತ್ತಿದ್ದಾರೆ. ಮಸೀದಿಯ ಕಾಮಗಾರಿಯನ್ನು ಸಹ ಪ್ರಾರಂಭಿಸಲು ನಾವು ಅವರಲ್ಲಿ ವಿನಂತಿಸುತ್ತೇವೆ. ಇದು ನಮ್ಮ ಹೃತ್ಪೂರ್ವಕ ಕೋರಿಕೆ" ಎಂದು ಇಂಡಿಯನ್ ಮುಸ್ಲಿಂ ಲೀಗ್ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಅನ್ಸಾರಿ ಹೇಳಿದ್ದಾರೆ. ಜಮಾ ಮಸೀದಿಯ ಇಮಾಮ್ ಅಹ್ಮದ್ ಬುಖಾರಿ ಮತ್ತು ಅಖಿಲ ಭಾರತ ಇಮಾಮ್ ಸಂಘಟನೆಯ ಅಧ್ಯಕ್ಷ ಡಾ ಇಲ್ಯಾಸಿ ಅವರನ್ನು ಕರೆತಂದು ಧನ್ನಿಪುರ ಮಸೀದಿಗೆ ಶಂಕುಸ್ಥಾಪನೆ ಮಾಡುವಂತೆ ಇಂಡಿಯನ್ ಮುಸ್ಲಿಂ ಲೀಗ್‌ನ ಹಂಗಾಮಿ ರಾಜ್ಯ ಅಧ್ಯಕ್ಷ ನಜ್ಮುಲ್ ಹಸನ್ ಘನಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಜಡ್ಜ್​ಗಳಿಗೆ ಶಿಸ್ತು ಮುಖ್ಯ, ತಮಗೆ ವಹಿಸದ ಪ್ರಕರಣ ಕೈಗೆತ್ತಿಕೊಳ್ಳಬಾರದು: ಸುಪ್ರೀಂ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.