ETV Bharat / bharat

ದೆಹಲಿಯಲ್ಲಿ ಪ್ರಧಾನಿ ರೋಡ್ ಶೋ; ಕಾರ್ಯಕಾರಿಣಿಗೂ ಮುನ್ನ ಬಿಜೆಪಿ ಶಕ್ತಿ ಪ್ರದರ್ಶನ - ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ರೋಡ್ ಶೋ

ಇಂದಿನಿಂದ ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ರೋಡ್ ಶೋ ಆಯೋಜಿಸಲಾಗಿದೆ.

PMs Roadshow In Delhi Today Ahead Of Mega BJP Meet

author img

By

Published : Jan 16, 2023, 12:49 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಬೃಹತ್ ರೋಡ್ ಶೋ ನಡೆಸಲಿದೆ. ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಂದಿನಿಂದ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ರೋಡ್​ ಶೋ ಜರುಗಲಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪಕ್ಷದ ಇತರ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಟೇಲ್ ಚೌಕ್‌ನಿಂದ ಪಾರ್ಲಿಮೆಂಟ್ ಸ್ಟ್ರೀಟ್‌ವರೆಗೆ ಪ್ರಧಾನಿ ಮೋದಿ ರೋಡ್‌ಶೋ ನಡೆಸಲಿದ್ದಾರೆ. ಪಕ್ಷದ ವೇಳಾಪಟ್ಟಿಯ ಪ್ರಕಾರ ಈ ಮುನ್ನ ರೋಡ್‌ಶೋ ಮಂಗಳವಾರ ನಡೆಯಬೇಕಿತ್ತು. ಆದರೆ ಅದನ್ನು ಬದಲಾಯಿಸಿ ರೋಡ್ ಶೋ ಇವತ್ತೇ ನಡೆಯಲಿದೆ.

ದೆಹಲಿಯ ಕೆಲವು ಭಾಗಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಆದಾಗ್ಯೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ವಿಶೇಷ ಸಂಚಾರ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಗುಜರಾತ್‌ನಲ್ಲಿ ಭರ್ಜರಿ ಗೆಲುವಿನ ನಂತರ ಪಕ್ಷದ ಮೊದಲ ಪ್ರಮುಖ ಸಭೆ ಇದಾಗಿದೆ. ಇದಕ್ಕೂ ಮೊದಲು, ತಮ್ಮ ತವರು ರಾಜ್ಯವಾದ ಗುಜರಾತ್‌ನಲ್ಲಿ, ಪ್ರಧಾನಿ ಮೋದಿ ಐದು ಗಂಟೆಗಳಿಗೂ ಹೆಚ್ಚು ಕಾಲ 50 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದ ಮೆಗಾ ರೋಡ್ ಶೋ ನಡೆಸಿದ್ದರು.

ಭಾರತೀಯ ಜನತಾ ಪಕ್ಷ (ಬಿಜೆಪಿ) ಜನವರಿ 16 ರಂದು ಮಧ್ಯಾಹ್ನ 3 ರಿಂದ ಪಟೇಲ್ ಚೌಕ್‌ನಿಂದ ಸಂಸದ್ ಮಾರ್ಗ್-ಜೈ ಸಿಂಗ್ ರಸ್ತೆ ಜಂಕ್ಷನ್‌ವರೆಗೆ ಸಂಸದ್ ಮಾರ್ಗದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ರೋಡ್ ಶೋ ಆಯೋಜಿಸುತ್ತಿದೆ. ಭಾರತದ ಪ್ರಧಾನ ಮಂತ್ರಿಗಳು ಈ ರೋಡ್​ ಶೋನಲ್ಲಿ ಭಾಗವಹಿಸಲಿದ್ದಾರೆ. ರೋಡ್‌ಶೋ ಸಾಗುವ ಮಾರ್ಗದ ಸುತ್ತಮುತ್ತ ಸುಗಮ ಟ್ರಾಫಿಕ್ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಸಂಚಾರ ವ್ಯವಸ್ಥೆಗಳು ಜಾರಿಯಲ್ಲಿರುತ್ತವೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟ್ರಾಫಿಕ್ ಬದಲಾವಣೆ ಹೀಗಿರಲಿದೆ: ಅಶೋಕ ರಸ್ತೆ (ವಿಂಡ್ಸರ್ ಪ್ಲೇಸ್‌ನಿಂದ ಜೈ ಸಿಂಗ್ ರಸ್ತೆ ಜಿಪಿಒ ಎರಡೂ ಕ್ಯಾರೇಜ್‌ವೇಗಳು), ಸಂಸದ್ ಮಾರ್ಗ, ಟಾಲ್‌ಸ್ಟಾಯ್ ರಸ್ತೆ (ಜನಪಥ್‌ನಿಂದ ಸಂಸದ್ ಮಾರ್ಗ್), ರಫಿ ಮಾರ್ಗ (ರೈಲ್ ಭವನದಿಂದ ಸಂಸದ್ ಮಾರ್ಗ), ಜಂತರ್ ಮಂತರ್ ರಸ್ತೆ, ಇಮ್ತಿಯಾಜ್ ಖಾನ್ ಮಾರ್ಗ ಮತ್ತು ಬಾಂಗ್ಲಾ ಸಾಹಿಬ್ ಲೇನ್ ಮಾರ್ಗಗಳನ್ನು ಜನವರಿ 16 ರಂದು ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ ಮುಚ್ಚಲಾಗುತ್ತದೆ.

ಬಾಬಾ ಖರಕ್ ಸಿಂಗ್ ರಸ್ತೆ, ಔಟರ್ ಸರ್ಕಲ್ ಕನ್ನಾಟ್ ಪ್ಲೇಸ್, ಪಾರ್ಕ್ ಸ್ಟ್ರೀಟ್/ಶಂಕರ್ ರಸ್ತೆ, ಮಿಂಟೋ ರಸ್ತೆ, ಮಂದಿರ ಮಾರ್ಗ, ಬಾರಾಖಂಬಾ ರಸ್ತೆ, ಪಂಚಕುವೈನ್ ರಸ್ತೆ, ರೈಸಿನಾ ರಸ್ತೆ, ಟಾಲ್‌ಸ್ಟಾಯ್ ರಸ್ತೆ, ಜನಪಥ್, ಫಿರೋಜ್‌ಶಾ ರಸ್ತೆ, ರಫಿ ಮಾರ್ಗ, ರಾಣಿ ಝಾನ್ಸಿ ರಸ್ತೆ, ಡಿಬಿಜಿ ರಸ್ತೆ, ಚೆಲ್ಮ್ಸ್‌ಫೋರ್ಡ್ ರಸ್ತೆ, ಭಾಯಿ ವೀರ್ ಸಿಂಗ್ ಮಾರ್ಗ, ಡಿಡಿಯು ಮಾರ್ಗ, ರಂಜಿತ್ ಸಿಂಗ್ ಮೇಲ್ಸೇತುವೆ, ಟಾಲ್ಕಟೋರಾ ರಸ್ತೆ ಮತ್ತು ಪಂಡಿತ್ ಪಂತ್ ಮಾರ್ಗಗಳಲ್ಲಿ ರೋಡ್‌ಶೋ ಸಮಯದಲ್ಲಿ ಭಾರೀ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗುವ ನಿರೀಕ್ಷೆಯಿದೆ.

ಗೋಲ್ ದಕ್ ಖಾನಾ, ಗುರುದ್ವಾರ ರಕಬ್ ಗಂಜ್, ವಿಂಡ್ಸರ್, ರೈಲ್ ಭವನ, ಔಟರ್ ಸಿಸಿ-ಸಂಸದ್ ಮಾರ್ಗ ಜಂಕ್ಷನ್, ರೈಸಿನಾ ರಸ್ತೆ-ಜಂತರ್ ಮಂತರ್ ರಸ್ತೆ ಜಂಕ್ಷನ್, ಜನಪಥ್-ಟಾಲ್‌ಸ್ಟಾಯ್ ರಸ್ತೆ ಜಂಕ್ಷನ್ ಮತ್ತು ಟಾಲ್‌ಸ್ಟಾಯ್ ರಸ್ತೆ ಕೆಜಿ ಮಾರ್ಗ ಜಂಕ್ಷನ್‌ಗಳಲ್ಲಿ ಸಂಚಾರವನ್ನು ಬದಲಾಯಿಸಲಾಗುವುದು. ಮೇಲೆ ತಿಳಿಸಿದ ರಸ್ತೆಗಳು, ಸ್ಟ್ರೆಚ್‌ಗಳು ಮತ್ತು ರೋಡ್‌ಶೋ ಒಳಗೊಂಡ ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸುವಂತೆ ದೆಹಲಿ ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ದೆಹಲಿ ಹೊರಗೆ ನಡೆದ ಸೇನಾ ದಿನ ಆಚರಣೆಗೆ ಸಾಕ್ಷಿಯಾದ ಬೆಂಗಳೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.