ನವದೆಹಲಿ: ದೇಶವನ್ನುದ್ದೇಶಿಸಿ ದಿಢೀರ್ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜನವರಿ 3ರರಿಂದ ದೇಶದ ಎಲ್ಲ ಮಕ್ಕಳಿಗೂ ಲಸಿಕೆ ನೀಡುವುದಾಗಿ ಮಹತ್ವದ ಘೋಷಣೆ ಮಾಡಿದರು. ಏಕಾಏಕಿ ಲೈವ್ಗೆ ಬಂದ ಪ್ರಧಾನಿ ಆರಂಭದಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದರು. ಒಮಿಕ್ರಾನ್ ಬಗ್ಗೆ ಯಾವುದೇ ರೀತಿಯಿಂದಲೂ ಆತಂಕಕ್ಕೊಳಗಾದಂತೆ ನಮೋ ಮನವಿ ಮಾಡಿದರು.
ಕೊರೊನಾ ಹೋಗಲಾಡಿಸಲು ಹೋರಾಡುತ್ತಿರುವ ಎಲ್ಲ ಸಿಬ್ಬಂದಿಗೆ(ಕೊರೊನಾ ವಾರಿಯರ್ಸ್ಗೆ) ಮುಂಜಾಗ್ರತೆಗಾಗಿ ಪ್ರಿಕಾಷನರಿ ಡೋಸ್ ನೀಡುವುದಾಗಿಯೂ ಪ್ರಧಾನಿ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ದೇಶದ ಎಲ್ಲ ಮಕ್ಕಳಿಗೆ ಅಂದರೆ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದಾಗಿ ಪ್ರಕಟಿಸಿದರು.
ದೇಶದಲ್ಲಿ ಒಮಿಕ್ರಾನ್ ಸೋಂಕಿನ ಭೀತಿ ಇದೆ, ಮಾಸ್ಕ್ ಬಳಕೆ ಕಡ್ಡಾಯಗೊಳಿಸಿ ಎಂದು ನಮೋ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದರು. 18 ಲಕ್ಷ ಐಸೋಲೇಷನ್ ಬೆಡ್ಗಳಿವೆ, ಕೊರೊನಾ ರೂಪಾಂತರಿಯಾಗಿ ಪರಿವರ್ತನೆಯಾಗ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪ್ರಧಾನಿ ಇದ್ಕಕ್ಕಿದ್ದಂತೆ ರಾಷ್ಟ್ರವನ್ನುದ್ದೇಶಿಸಿ ಮಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದ್ದು, 15 ನಿಮಿಷಗಳಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆಂದು ತಿಳಿಸಿತ್ತು.
-
In about 15 minutes, PM @narendramodi will address the nation.
— PMO India (@PMOIndia) December 25, 2021 " class="align-text-top noRightClick twitterSection" data="
">In about 15 minutes, PM @narendramodi will address the nation.
— PMO India (@PMOIndia) December 25, 2021In about 15 minutes, PM @narendramodi will address the nation.
— PMO India (@PMOIndia) December 25, 2021