ETV Bharat / bharat

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಜೊತೆ ಪ್ರಧಾನಿ ಮೋದಿ ಫೋನ್​​ ಸಂಭಾಷಣೆ - ಫೋನ್​ ಮೂಲಕ ರಷ್ಯಾ ಭಾರತ ಮುಖ್ಯಸ್ಥರ ಚರ್ಚೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇಂದು ಫೋನ್​ ಮೂಲಕ ಸಂಭಾಷಣೆ ನಡೆಸಿದರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಸಂಭಾಷಣೆ
ಸಂಭಾಷಣೆ
author img

By

Published : Dec 20, 2021, 10:51 PM IST

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇಂದು ಫೋನ್​ ಮೂಲಕ ಸಂಭಾಷಣೆ ನಡೆಸಿದರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

  • Spoke with my friend, President Putin, to follow up on our discussions during his recent visit to India. We agreed on the way forward for enhancing India-Russia cooperation, including in supply of fertilizers. We also discussed recent international developments. @KremlinRussia_E

    — Narendra Modi (@narendramodi) December 20, 2021 " class="align-text-top noRightClick twitterSection" data=" ">

ಈ ವೇಳೆ, ಪುಟಿನ್​ ಮತ್ತು ಮೋದಿ ಅವರು ಭಾರತ ಮತ್ತು ರಷ್ಯಾದ ನಡುವಿನ ಸಂಬಂಧ ಸುಧಾರಣೆ ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು ನಿರಂತರವಾಗಿ ಶ್ರಮಿಸುವ ಬಗ್ಗೆ ಚರ್ಚೆ ನಡೆಸಿದರು.

ಇದಲ್ಲದೇ, ರಷ್ಯಾ ಅಧ್ಯಕ್ಷ ಪುಟಿನ್​ ಅವರ ಈ ಹಿಂದಿನ ಭಾರತ ಭೇಟಿಯ ಬಗ್ಗೆಯೂ ಪ್ರಸ್ತಾಪವಾಗಿದೆ. ಭಾರತದ ಕೈಗಾರಿಕೆಗಳನ್ನು ಪ್ರತಿ ವಲಯದಲ್ಲಿ ವಿಶ್ವದ ಅಗ್ರ ಐದು ಸ್ಥಾನಗಳಲ್ಲಿ ಕಾಣಲು ಸರ್ಕಾರ ಬಯಸಿದೆ ಎಂದು ಇದೇ ವೇಳೆ, ಮೋದಿ ಅವರು ಹೇಳಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

ಇದನ್ನೂ ಓದಿ: ‘ರಾಜಾ ರಾಣಿ’ ಸಿನಿಮಾ ಖ್ಯಾತಿಯ ನಜ್ರಿಯಾ ನಜೀಮ್​ಗೆ ಹುಟ್ಟುಹಬ್ಬದ ಸಂಭ್ರಮ

ರಕ್ಷಣಾ ಕ್ಷೇತ್ರ, ರಸಗೊಬ್ಬರಗಳ ಪೂರೈಕೆಯಲ್ಲಿ ಸಹಕಾರದ ಬಗ್ಗೆಯೂ ಉಭಯ ನಾಯಕರು ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಅಭಿಪ್ರಾಯಗಳ ವಿನಿಮಯವಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.