ETV Bharat / bharat

ಭಾರತದ ನಿಜವಾದ ಸಾಮರ್ಥ್ಯವನ್ನು ಜಗತ್ತು ಕಂಡಿದೆ: 'ಆತ್ಮ ನಿರ್ಭರ'​ ಕೇವಲ ದೃಷ್ಟಿಕೋನವಲ್ಲ ಎಂದ ನಮೋ! - ಪ್ರಧಾನಿ ನರೇಂದ್ರ ಮೋದಿ ಮಾತು

ಆತ್ಮ ನಿರ್ಭರ​ ಯೋಜನೆಯಲ್ಲಿ ಈಗಾಗಲೇ ಅನೇಕ ಅಭಿವೃದ್ಧಿಪರ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದು ಕೇವಲ ದೃಷ್ಟಿಕೋನವಲ್ಲ ಬದಲಾಗಿ ಯೋಜಿತ ಆರ್ಥಿಕ ತಂತ್ರವಾಗಿದೆ ಎಂದು ನಮೋ ಹೇಳಿದ್ದಾರೆ.

PM Narendra Modi
PM Narendra Modi
author img

By

Published : Nov 5, 2020, 7:50 PM IST

ನವದೆಹಲಿ: ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ ಟೇಬಲ್ (ವಿಜಿಐಆರ್) ಸಮಾವೇಶದ ಅಧ್ಯಕ್ಷತೆ ವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಭಾರತದ ನಿಜವಾದ ಸಾಮರ್ಥ್ಯವನ್ನು ಇದೀಗ ಜಗತ್ತು ಕಂಡಿದೆ ಎಂದು ನಮೋ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ವರ್ಷದಲ್ಲಿ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಧೈರ್ಯದಿಂದ ಹೋರಾಡುತ್ತಿದ್ದು, ಇದರಿಂದ ಪ್ರಪಂಚಕ್ಕೆ ಭಾರತದ ಪಾತ್ರ ಏನು ಎಂಬುದು ಗೊತ್ತಾಗಿದೆ. ಭಾರತದ ನಿಜವಾದ ಸಾಮರ್ಥ್ಯವನ್ನು ಇದೀಗ ಜಗತ್ತು ಕಂಡಿದೆ ಎಂದ ನಮೋ, ಸಾಂಕ್ರಾಮಿಕ ರೋಗದ ವೇಳೆ ಭಾರತ ಗಮನಾರ್ಹವಾಗಿ ನಡೆದುಕೊಂಡಿದೆ. ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಹಾಗೂ ವೈರಸ್​ ವಿರುದ್ಧ ಯಶಸ್ವಿ ಹೋರಾಟ ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ. ಈ ಸಮಯದಲ್ಲಿ ನಾವು ನಡೆದುಕೊಂಡಿರುವ ಕ್ರಮಗಳು ನಿಜಕ್ಕೂ ಮೆಚ್ಚುವಂತಹದ್ದು. ನಮ್ಮ ವ್ಯವಸ್ಥೆಗಳ ಶಕ್ತಿ, ಜನರ ಬೆಂಬಲ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ ಟೇಬಲ್​ನಲ್ಲಿ ನಮೋ ಭಾಷಣ

ಭಾರತ 'ಆತ್ಮ ನಿರ್ಭರ'​ ಆಗಬೇಕೆಂಬುವುದು ಕೇವಲ ಅನ್ವೇಷಣೆ ದೃಷ್ಟಿಯಿಂದಲ್ಲ. ಇದೊಂದು ಯೋಜಿತ ಆರ್ಥಿಕ ತಂತ್ರವಾಗಿದೆ. ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿಯನ್ನಾಗಿ ಮಾಡಲು ನಮ್ಮ ವ್ಯವಹಾರ ಸಾಮರ್ಥ್ಯ ಮತ್ತು ನಮ್ಮ ಕಾರ್ಮಿಕರ ಕೌಶಲ್ಯಗಳನ್ನ ಬಳಸುವ ಗುರಿ ಹೊಂದಿರುವ ತಂತ್ರ ಎಂದು ತಿಳಿಸಿದ್ದಾರೆ.

ಈ ಸಮಾವೇಶವನ್ನು ಭಾರತ ಸರ್ಕಾರದ ಹಣಕಾಸು ಸಚಿವಾಲಯ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲ ಸೌಕರ್ಯ ನಿಧಿ ಆಯೋಜಿಸಿದೆ. ಮಹಾಮಾರಿ ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆ ಕೂಡ ಭಾರತ ಗಮನಾರ್ಹ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಆರ್ಥಿಕ ಸ್ಥಿರತೆಯನ್ನು ಖಾತರಿಪಡಿಸಿದೆ. ಇದಕ್ಕೆ ನಮ್ಮ ವ್ಯವಸ್ಥೆಯ ಶಕ್ತಿ, ಜನರ ಬೆಂಬಲ ಮತ್ತು ನಮ್ಮ ನೀತಿಗಳು ಪ್ರಮುಖ ಕಾರಣವಾಗಿವೆ ಎಂದರು.

ತಮ್ಮ ಭಾಷಣದಲ್ಲಿ ಭಾರತದಲ್ಲಿ ವಿದೇಶಿ ಬಂಡವಾಳದಾರರಿಗೆ ಮುಕ್ತ ಆಹ್ವಾನ ನೀಡಿದ ನಮೋ, ಭಾರತ ಸದ್ಯ ಆರ್ಥಿಕವಾಗಿ ಮುಂಚೂಣಿಯಲ್ಲಿದೆ. ಕೊರೋನಾ ಸಂದರ್ಭದಲ್ಲಿ ದೇಶದ ಆರ್ಥಿಕತೆ ಹಿನ್ನಡೆ ಅನುಭವಿಸಿದೆ. ಆದರೆ ಇದೀಗ ನಾವು ಗಮನಾರ್ಹ ಸ್ಥಿತಿಸ್ಥಾಪಕತ್ವ ಪ್ರದರ್ಶನ ಮಾಡಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.