ETV Bharat / bharat

Watch.. ಕಾಂಗ್ರೆಸ್​ ಅಧ್ಯಕ್ಷರ ಟೀಕೆಗೆ ಕಲಬುರಗಿ ಅಭಿವೃದ್ಧಿ ಅಂಕಿ - ಅಂಶ ನೀಡುವ ಮೂಲಕ ತಿರುಗೇಟು ನೀಡಿದ ಮೋದಿ - ರಾಜ್ಯಸಭೆಯಲ್ಲಿ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ

ಪ್ರತಿಪಕ್ಷಗಳ ಗದ್ದಲಕ್ಕೆ ರಾಜ್ಯಸಭೆಯಲ್ಲಿ ಮೋದಿ ಉತ್ತರ - ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸದನಕ್ಕೆ ವಿವರಣೆ ನೀಡಿದ ಪ್ರಧಾನಿ - ತಮ್ಮ ಮಾತುಗಳನ್ನು ಕಡತದಿಂದ ತೆಗೆದು ಹಾಕಿದ್ದರ ಕುರಿತು ಖರ್ಗೆ ಆಕ್ಷೇಪ

ಖರ್ಗೆಗೆ ಪ್ರಧಾನಿ ತಿರುಗೇಟು
ಖರ್ಗೆಗೆ ಪ್ರಧಾನಿ ತಿರುಗೇಟು
author img

By

Published : Feb 9, 2023, 3:37 PM IST

Updated : Feb 9, 2023, 4:32 PM IST

ಅಂಶ ನೀಡುವ ಮೂಲಕ ಖರ್ಗೆಗೆ ತಿರುಗೇಟು ನೀಡಿದ ಮೋದಿ

ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಮೇಲೆ ಇರುವ ಆರೋಪಗಳ ಕುರಿತು ತನಿಖೆಗೆ ಸಂಸದೀಯ ಸಮಿತಿ ರಚಿಸಬೇಕು ಎಂಬ ವಿಪಕ್ಷಗಳ ಆಗ್ರಹಕ್ಕೆ ರಾಜ್ಯಸಭೆಯಲ್ಲಿ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ, ನಾನು ಕಲಬುರ್ಗಿಗೆ ಭೇಟಿ ನೀಡಿದ ವಿಚಾರ ಕುರಿತು ನೀವು ಟೀಕಿಸಿದ್ದೀರಿ. ಅದಕ್ಕೆ ನಾನು ಈಗ ಉತ್ತರ ಕೊಡುತ್ತಿದ್ದೇನೆ ಎನ್ನುವ ಮೂಲಕ ಕೇಂದ್ರ ಸರ್ಕಾರ ಏನೇನು ಮಾಡಿದೆ ಎಂದು ಉತ್ತರ ಕೊಟ್ಟರು.

ಕಲಬುರ್ಗಿಯಲ್ಲಿ ತಮ್ಮ ಸರ್ಕಾರ ನಡೆಸಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ನೋಡಬೇಕು. ಮತ್ತು ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆಯೂ ಅವರಿಗೆ ಗೊತ್ತಿದೆ. ಕರ್ನಾಟಕದಲ್ಲಿ 1.20 ಕೋಟಿ ಜನ್​ ಧನ್​ ಬ್ಯಾಂಕ್​ ಖಾತೆ ಮಾಡಿಸಲಾಗಿದೆ. ಕಲಬುರ್ಗಿ ಒಂದರಲ್ಲೇ 8 ಲಕ್ಷ ಜನ್​ ಧಾನ್​ ಖಾತೆ ತೆರೆಯಲಾಗಿದೆ. ಅನೇಕ ಜನರ ಸಬಲೀಕರಣ ನಡೆಯುತ್ತಿರುವಾಗ ಕೆಲವರ ಖಾತೆ ಮುಚ್ಚಲಾಗಿದೆ. ಇದರಿಂದ ಅವರಿಗೆ ಎಷ್ಟು ನೋವು ಆಗುತ್ತಿದೆ ಎಂದು ತಿಳಿಯುತ್ತಿದೆ ಎಂದು ಖರ್ಗೆ ಅವರಿಗೆ ತಿರುಗೇಟು ನೀಡಿದರು.

ಕಳೆದ 3-4 ವರ್ಷಗಳಲ್ಲಿ 11 ಕೋಟಿ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸಾಮಾನ್ಯ ಜನರ ಸಬಲೀಕರಣದ ಕುರಿತು ಮಾತನಾಡುವುದಾದರೆ, ನಾವು ಜನ್​ ಧನ್​ ಖಾತೆ ಅಭಿಯಾನ ಮಾಡಿದ್ದೇನೆ. ಕಳೆದ 9 ವರ್ಷದಲ್ಲಿ ದೇಶಾದ್ಯಂತ 48 ಕೋಟಿ ಜನ್​ಧನ್​ ಖಾತೆ ತೆರೆಯಲಾಗಿದೆ ಎಂದು ಅಂಕಿ- ಅಂಶ ಸಮೇತ ಎದಿರೇಟು ನೀಡಿದರು. ಕೆಸರು ಎರಚಿದಷ್ಟು ಕಮಲ ಮತ್ತಷ್ಟು ಹುಲುಸಾಗಿ ಅರಳಲಿದೆ ಎಂಬುದನ್ನು ನಾನು ಪ್ರತಿಪಕ್ಷದ ಸಂಸದರಿಗೆ ತಿಳಿಸಬೇಕಿದೆ. ಸದನದಲ್ಲಿ ಏನು ಮಾತನಾಡಿದ್ದೀರಾ ಎಂಬುದನ್ನು ದೇಶದ ಜಾಗೃತವಾಗಿ ಆಲಿಸುತ್ತಿದೆ. ಕೆಲವು ಸಂಸದರು ಸದನಕ್ಕೆ ಅಗೌರವ ತರುತ್ತಿದ್ದಾರೆ ಎಂದು ಮಾತಿನ ಏಟು ನೀಡಿದರು.

ಖರ್ಗೆ ಮಾತನಾಡಿ ಕೆಲ ಅಂಶಗಳನ್ನು ಕಡತದಿಂದ ತೆಗೆದು ಹಾಕಿದ ಸಭಾಧ್ಯಕ್ಷರು: ಇನ್ನು ಸದನದಲ್ಲಿ ರಾಹುಲ್​ ಗಾಂಧಿ ಅವರು ಮಾತನಾಡಿದ ಭಾಷಣದ ಕೆಲವು ಅಂಶಗಳನ್ನು ತೆಗೆದು ಹಾಕಿದ ಬೆನ್ನಲ್ಲೇ ಇದೀಗ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ಕೆಲವು ವಿಚಾರಗಳನ್ನು ಕಡತದಿಂದ ತೆಗೆದು ಹಾಕಿಲಾಗಿದೆ. ಇದಕ್ಕೆ ಪ್ರತಿಪಕ್ಷದ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ಸದನದಲ್ಲಿ ಮಾತನಾಡಿದ ಅವರು, ನಾನು ಅಸಂಸದೀಯವಾಗಿ ಯಾವುದೇ ಮಾತುಗಳನ್ನು ಆಡಿಲ್ಲ. ಆದರೆ, ತಮ್ಮ ಭಾಷಣದ ಕೆಲವು ಅಂಶಗಳನ್ನು ಸಂಸದೀಯ ಕಡತದಿಂದ ತೆಗೆದು ಹಾಕಲಾಗಿದೆ.

ಕೆಲವು ಮಾತುಗಳು ಆಚೀಚೆ ಆಗಿರಬಹುದು. ನಿಮಗೆ ಈ ಬಗ್ಗೆ ಏನಾದರೂ ಅನುಮಾನವಿದ್ದರೆ, ಬೇರೆ ವಿಧಾನದ ಮೂಲಕ ನನ್ನನ್ನು ಕೇಳಬಹುದಿತ್ತು. ಆದರೆ, ನನ್ನ ಮಾತಿನ ಕೆಲವು ಪದಗಳನ್ನು ತೆಗೆದು ಹಾಕಲಾಗಿದೆ. ನರಸಿಂಹರ ರಾವ್​ ವಿರುದ್ಧ ಅಟಲ್​ ಬಿಹಾರಿ ವಾಜಪೇಯಿ ಆಡಿದ ಮಾತುಗಳು ಇನ್ನೂ ಕಡತದ ಪುಸ್ತಕದಲ್ಲಿ ಹಾಗೇ ಇದೆ ಎಂದರು. ಈ ವೇಳೆ ಕಾಂಗ್ರೆಸ್​ ನಾಯಕರನ್ನು ಸಮಾಧಾನ ಪಡಿಸಲು ಸಭಾಧ್ಯಕ್ಷರು ಪ್ರಯತ್ನ ಮಾಡಿದರು. ಈ ವೇಳೆ ಮಾತು ಮುಂದುವರೆಸಿದ ಮಲ್ಲಿಕಾರ್ಜುನ ಖರ್ಗೆ ಯಾಕೆ ತಮ್ಮ ಮಾತನ್ನು ತೆಗೆದು ಹಾಕಲಾಗಿದೆ ಎಂದು ಮರು ಪ್ರಶ್ನಿಸಿದರು.

ನಿಮಗೂ ಮತ್ತು ಅದಾನಿಗೆ ಸಂಬಂಧ ಏನು ಎಂದು ನಾನು ಸರಳವಾದ ಪ್ರಶ್ನೆಯನ್ನು ಕೇಳಿದೆ. ಪ್ರಧಾನಿಗಳು ಇದಕ್ಕೆ ಉತ್ತರಿಸಲಿಲ್ಲ. ಇದು ಸತ್ಯಾಂಶವನ್ನು ತಿಳಿಸಿತು. ಅವರು ಗೆಳೆಯರಲ್ಲ ಎಂದ ಮೇಲೆಅವರು ತನಿಖೆಗೆ ಒಪ್ಪಬೇಕು. ರಕ್ಷಣಾ ವಲಯದ ಶೆಲ್​ ಕಂಪನಿಗಳ ಬಗ್ಗೆಯೂ ಅವರು ಏನನ್ನು ಹೇಳಲಿಲ್ಲ ಎಂದರು.

ಅದಾನಿ ಒಡೆತನದ ಬಂದರಿನಿಂದ ಇಂಧನದ ಸಂಸ್ಥೆಗಳ​ ಕುರಿತು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಹಿಂಡನ್​ ಬರ್ಗಗ ವರದಿ ಬಳಿಕ ಅದಾನಿ ಸಮೂಹ ಸಂಸ್ಥೆಗಳ ಷೇರು ವ್ಯವಹಾರದ ಕುರಿತು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದೆ.

ಇದನ್ನೂ ಓದಿ: ಅದಾನಿ ಗ್ರೂಪ್ ವಿರುದ್ಧ ಹಿಂಡೆನ್​ಬರ್ಗ್ ವರದಿ: ನಾಳೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ

Last Updated : Feb 9, 2023, 4:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.