ETV Bharat / bharat

Putin's India Visit : ಪುಟಿನ್​​ ಬರಮಾಡಿಕೊಂಡ ನಮೋ.. ಉಭಯ ನಾಯಕರ ನಡುವೆ ಮಾತುಕತೆ, ಹಲವು ಒಪ್ಪಂದಗಳಿಗೆ ಸಹಿ - Indo-Russia summit

21ನೇ ಇಂಡೋ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನ ಸ್ವಾಗತಿದ್ದಾರೆ..

Modi receives Vladimir Putin
Modi receives Vladimir Putin
author img

By

Published : Dec 6, 2021, 6:52 PM IST

ನವದೆಹಲಿ : ಭಾರತ-ರಷ್ಯಾ ನಡುವಿನ 21ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್​ ಪುಟಿನ್​​ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ದೆಹಲಿಯಲ್ಲಿರುವ ಹೈದರಾಬಾದ್​​ ಹೌಸ್​ನಲ್ಲಿ ಉಭಯ ನಾಯಕರ ನಡುವೆ ಮಹತ್ವದ ಮಾತುಕತೆ ನಡೆದಿದೆ. ಅನೇಕ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.

ಪ್ರಮುಖವಾಗಿ ದ್ವಿಪಕ್ಷೀಯ ಸಂಬಂಧ ಹಾಗೂ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳು, ಅಂತಾರಾಷ್ಟ್ರೀಯ, ರಾಜಕೀಯ ಮತ್ತು ರಕ್ಷಣಾ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ರಷ್ಯಾ ಅಧ್ಯಕ್ಷ ಪುಟಿನ್​ ಬರಮಾಡಿಕೊಂಡ ಪ್ರಧಾನಿ..

ಯಾವೆಲ್ಲ ಒಪ್ಪಂದಗಳಿಗೆ ಸಹಿ?

ಭಾರತ ಮತ್ತು ರಷ್ಯಾ ದೇಶಗಳ ನಡುವೆ ಸಂಪರ್ಕ, ಹಡಗು, ಬಾಹ್ಯಾಕಾಶ, ಮಿಲಿಟರಿ-ತಾಂತ್ರಿಕ ಸಹಕಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ಸಂಸ್ಕೃತಿ ಸೇರಿದಂತೆ 10ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಇದರ ಜತೆಗೆ, ಉಭಯ ದೇಶಗಳು 7.5 ಲಕ್ಷ AK-203 ಅಸಾಲ್ಟ್ ರೈಫಲ್‌ಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಇದರ ಜೊತೆಗೆ ಶೃಂಗಸಭೆಯಲ್ಲಿ ರಕ್ಷಣಾ ವಿಷಯ ಸೇರಿ ಅನೇಕ ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಭಾರತ-ರಷ್ಯಾ ನಡುವೆ ಅಸಾಲ್ಟ್ ರೈಫಲ್ ಎಕೆ-203 ತಯಾರಿಕೆಗೆ ಒಪ್ಪಂದ ಆಗಲಿದೆ. ಇನ್ನು, ಈ ಹಿಂದೆ 2018ರಲ್ಲಿ ಭಾರತದಲ್ಲಿ ನಡೆದಿದ್ದ ವಾರ್ಷಿಕ ಶೃಂಗಸಭೆಗಾಗಿ ಪುಟಿನ್​ ಭಾರತಕ್ಕೆ ಬಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.