ETV Bharat / bharat

ರಾಜ್​​​ಘಾಟ್​ಗೆ ಪ್ರಧಾನಿ, ರಾಷ್ಟ್ರಪತಿ ಭೇಟಿ: ಮಹಾತ್ಮ ಗಾಂಧಿಗೆ ನಮನ.. ಗಣ್ಯರಿಂದ ರಾಷ್ಟ್ರಪಿತನ ಸ್ಮರಣೆ! - PM Narendra Modi pays tribute to Gandhiji on his birth anniversary

ರಾಜ್​ಘಾಟ್​​ನಲ್ಲಿರುವ ಗಾಂಧೀಜಿ ಸಮಾಧಿ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ನಮಿಸಿದ್ದಾರೆ. ಜೊತೆಗೆ ಇಂದು ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

pm-narendra-modi-pays-tribute-to-gandhiji-on-his-birth-anniversary
ರಾಜ್​​​ಘಾಟ್​ಗೆ ಪ್ರಧಾನಿ, ರಾಷ್ಟ್ರಪತಿ ಭೇಟಿ
author img

By

Published : Oct 2, 2021, 8:15 AM IST

Updated : Oct 2, 2021, 8:55 AM IST

ನವದೆಹಲಿ: ಇಂದು ಮಹಾತ್ಮ ಗಾಂಧೀಜಿಯ 152ನೇ ಜನ್ಮದಿನ ಹಿನ್ನೆಲೆ ರಾಜ್​ಘಾಟ್​​ನಲ್ಲಿರುವ ಗಾಂಧೀಜಿ ಸಮಾಧಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪುಷ್ಪಾರ್ಚನೆ ಸಲ್ಲಿಸಿ ನಮಿಸಿದರು.

ರಾಜ್​ಘಾಟ್​ಗೆ ಆಗಮಿಸಿದ ಅವರು, ಭಾರತಕ್ಕೆ ಶಾಂತಿ ಮತ್ತು ಅಹಿಂಸೆಯ ಮೂಲಕ ಸ್ವಾತಂತ್ರ್ಯ ಕೊಡಿಸಿದ ಧೀಮಂತ ನಾಯಕನ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಇದಕ್ಕೂ ಮೊದಲು ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನದಂದು ಅವರಿಗೆ ವಿನಮ್ರ ನಮನಗಳು. ಪೂಜ್ಯ ಬಾಪು ಅವರ ಜೀವನ ಮತ್ತು ಆದರ್ಶಗಳು ದೇಶದ ಪ್ರತಿಯೊಂದು ಪೀಳಿಗೆಯನ್ನು ಕರ್ತವ್ಯದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ ಎಂದಿದ್ದಾರೆ.

  • राष्ट्रपिता महात्मा गांधी को उनकी जन्म-जयंती पर विनम्र श्रद्धांजलि। पूज्य बापू का जीवन और आदर्श देश की हर पीढ़ी को कर्तव्य पथ पर चलने के लिए प्रेरित करता रहेगा।

    I bow to respected Bapu on Gandhi Jayanti. His noble principles are globally relevant and give strength to millions.

    — Narendra Modi (@narendramodi) October 2, 2021 " class="align-text-top noRightClick twitterSection" data=" ">

ಜೊತೆಗೆ ಅವರ ಜನ್ಮ ದಿನ ಹಿನ್ನೆಲೆ ಜಲ ಶಕ್ತಿ ಮತ್ತು ಗ್ರಾಮೀಣ ಸಬಲೀಕರಣಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಂವಹನ ನಡೆಸುತ್ತೇನೆ. ಜಲ ಜೀವನ ಮಿಷನ್ ಆಪ್ ಮತ್ತು ರಾಷ್ಟ್ರೀಯ ಜಲ ಜೀವನ್ ಕೋಶ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

ರಾಷ್ಟ್ರಪಿತನ ಸಮಾಧಿಗೆ ಪುಷ್ಪಾರ್ಚನೆ ಮಾಡಿದ ರಾಷ್ಟ್ರಪತಿ ಕೋವಿಂದ್, ಸ್ಪೀಕರ್​​ ಓಂ ಬಿರ್ಲಾ

ರಾಜ್​ಘಾಟ್​ಗೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಸಮಾಧಿಗೆ ನಮಿಸಿದ್ದಾರೆ. ಜೊತೆಗೆ ಲೋಕಸಭಾ ಸ್ಪೀಕರ್​​ ಓಂ ಬಿರ್ಲಾ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಕಾಂಗ್ರೆಸ್​​​ ಹಂಗಾಮಿ ಅಧ್ಯಕ್ಷರಿಂದಲೂ ಪುಷ್ಪನಮನ

ಇನ್ನು ಇಂದು ಬೆಳಗ್ಗೆ ರಾಜ್​ಘಾಟ್​ಗೆ ಭೇಟಿ ನೀಡಿದ ರಾಷ್ಟ್ರೀಯ ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮೋಹನ್​ ದಾಸ್​ ಕರಮಚಂದ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಅವರಿಗೆ ನಮನ ಸಲ್ಲಿಸಿದರು. ಅವರಿಗೆ ಜನ್ಮದಿನೋತ್ಸವದ ಶುಭಾಶಯಕೋರಿದರು. ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಇನ್ನು ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಹಾಗೂ ಸಿಎಂ ಅರವಿಂದ್​ ಕೇಜ್ರಿವಾಲ್​ ಸಹ ಗಾಂಧೀಜಿ ಅವರಿಗೆ ನಮನ ಸಲ್ಲಿಕೆ ಮಾಡಿದರು.

Last Updated : Oct 2, 2021, 8:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.