ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಗುಜರಾತ್ ಮುಖ್ಯಮಂತ್ರಿ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಅವರು ಒಂದೆರೆಡು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ವೈದ್ಯರ ಪ್ರಕಾರ, ಅವರಿಗೆ ಈಗ ದ್ರವ ಆಹಾರವನ್ನು ನೀಡಲಾಗುತ್ತಿದೆ.
-
PM Modi's mother Heeraben Modi's health condition is recovering, says UN Mehta Institute of Cardiology & Research Centre, Ahmedabad pic.twitter.com/4ZC3GH6IjB
— ANI (@ANI) December 29, 2022 " class="align-text-top noRightClick twitterSection" data="
">PM Modi's mother Heeraben Modi's health condition is recovering, says UN Mehta Institute of Cardiology & Research Centre, Ahmedabad pic.twitter.com/4ZC3GH6IjB
— ANI (@ANI) December 29, 2022PM Modi's mother Heeraben Modi's health condition is recovering, says UN Mehta Institute of Cardiology & Research Centre, Ahmedabad pic.twitter.com/4ZC3GH6IjB
— ANI (@ANI) December 29, 2022
ಆಸ್ಪತ್ರೆಗೆ ಭೇಟಿ ನೀಡಿದ್ದ ಮೋದಿ: ಅನಾರೋಗ್ಯದಿಂದ ಬಳಲುತ್ತಿರುವ ತಾಯಿ ಹೀರಾಬೆನ್ ಅವರನ್ನು ನೋಡಲು ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ಆಸ್ಪತ್ರೆಗೆ ಬಂದಿದ್ದರು. ಅವರ ತಾಯಿಯನ್ನು ಸ್ಥಳೀಯ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರಧಾನಿ ಆಸ್ಪತ್ರೆಯಲ್ಲಿ ಇದ್ದು, ಅವರ ಆರೋಗ್ಯವನ್ನು ವಿಚಾರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಗುಜರಾತ್: ಆಸ್ಪತ್ರೆಗೆ ದಾಖಲಾದ ಅಮ್ಮನ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಮೈಸೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರಿಗೆ ಸ್ವಲ್ಪ ಗಾಯವಾಗಿದೆ. ಅವರ ಜೊತೆಯಲ್ಲಿ ಪತ್ನಿ, ಮಗಳು ಮತ್ತು ಸೊಸೆ ಇದ್ದರು. ಮಾಹಿತಿ ಪ್ರಕಾರ ಅವರನ್ನು ಮೈಸೂರಿನ ಜೆಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಆಸ್ಪತ್ರೆಗೆ ಭೇಟಿ: ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯವನ್ನು ವಿಚಾರಿಸಲು ಸಿಎಂ ಭೂಪೇಂದ್ರ ಪಟೇಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಜ್ಞ ವೈದ್ಯರನ್ನೂ ಭೇಟಿ ಮಾಡಿದ್ದರು. ಇದೀಗ ಅಧಿಕೃತವಾಗಿ ಹೆಲ್ತ್ ಬುಲೆಟಿನ್ನನ್ನು ವೈದ್ಯರು ಬಿಡುಗಡೆ ಮಾಡಿದ್ದಾರೆ.
ಹೀರಾಬೆನ್ ಆರೋಗ್ಯ ಸುಧಾರಿಸುತ್ತಿದೆ: ಯುಎನ್ ಮೆಹ್ತಾ ಆಸ್ಪತ್ರೆಯ ಅಧಿಕೃತ ಬುಲೆಟಿನ್ ಹೊರ ಬಂದಿದೆ. ಅದರಲ್ಲಿ ಹೀರಾಬೆನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿಸಲಾಗಿದೆ. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ಆರೋಗ್ಯ ಹದಗೆಟ್ಟಿತ್ತು. ಆಗ ಅವರನ್ನು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಅವರನ್ನು ಸಾಮಾನ್ಯ ರೋಗಿಗಳಂತೆ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಪರೀಕ್ಷಿಸಲಾಯಿತು.
ರಾಹುಲ್ ಗಾಂಧಿ ಟ್ವೀಟ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ಆರೋಗ್ಯ ಬೇಗ ಸುಧಾರಿಸಲಿ ಮತ್ತು ಪ್ರಧಾನಿ ಮೋದಿ ಜೊತೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ಮಾಡಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು.
ಅಲ್ಲದೇ, ಪ್ರಿಯಾಂಕಾ ಗಾಂಧಿ ಸಹ ಟ್ವೀಟ್ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಅಸ್ವಸ್ಥರಾಗಿದ್ದಾರೆ. ಈ ಸಮಯದಲ್ಲಿ ನಾವೆಲ್ಲರೂ ಅವನೊಂದಿಗಿದ್ದೇವೆ. ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ವಿವಿಧ ರಾಜಕೀಯ ಪಕ್ಷದ ಪ್ರಮುಖರು ಸಹ ಪ್ರಧಾನಿ ತಾಯಿ ಅವರ ಆರೋಗ್ಯದ ಬಗ್ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ವಿಶೇಷ ವಿಮಾನದ ಮೂಲಕ ಮೈಸೂರಿನಿಂದ ಅಹಮದಾಬಾದ್ಗೆ ತೆರಳಿದ ಪ್ರಹ್ಲಾದ್ ಮೋದಿ ಕುಟುಂಬ
ದೊರೆತ ಮಾಹಿತಿ ಪ್ರಕಾರ ಕೈಲಾಸನಾಥನ್ ಯುಎನ್ ಮೆಹ್ತಾ ಆಸ್ಪತ್ರೆಗೆ ರಾಜ್ಯ ಆರೋಗ್ಯ ಸಚಿವ ರಿಷಿಕೇಶ್ ಪಟೇಲ್ ಕೂಡ ಆಸ್ಪತ್ರೆಗೆ ಬಂದು, ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಲ್ಲದೆ, ಬಿಜೆಪಿ ಶಾಸಕ ದರ್ಶನಾಭೇನ್ ವಘೇಲಾ, ಶಾಸಕ ಕೋಶಿಕ್ ಜೈನ್ ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲದೇ, ರಾಜ್ಯಸಭಾ ಸಂಸದ ಪರಿಮಲ್ ನಾಥ್ವಾನಿ ಯುಎನ್ ಮೆಹ್ತಾ ಆಸ್ಪತ್ರೆಗೆ ಆಗಮಿಸಿ ಹೀರಾ ಬೆನ್ ಅವರ ಆರೋಗ್ಯ ವಿಚಾರಿಸಿದರು.