ETV Bharat / bharat

ಕರ್ನಾಟಕದ 13 ಸೇರಿ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ.. I.N.D.I.A ಒಕ್ಕೂಟದ ವಿರುದ್ಧ ಟೀಕೆ - ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ಮೋದಿ ಚಾಲನೆ

ಅಮೃತ ಯೋಜನೆಯಡಿ ದೇಶಾದ್ಯಂತ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದೇ ವೇಳೆ ಅಭಿವೃದ್ಧಿ ಕಾರ್ಯಗಳನ್ನು ಟೀಕಿಸಿರುವ ವಿಪಕ್ಷಗಳ ಇಂಡಿಯಾ ಒಕ್ಕೂಟವನ್ನು ತರಾಟೆಗೆ ತೆಗೆದುಕೊಂಡರು.

ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ಮೋದಿ ಚಾಲನೆ

author img

By

Published : Aug 6, 2023, 2:22 PM IST

ನವದೆಹಲಿ: ಅಮೃತ್​ ಯೋಜನೆಯಡಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಮೂಲಕ ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಲಾಯಿತು. ದೇಶದ ಜನರಿಗೆ ರೈಲ್ವೇ ಆದ್ಯತೆಯ ಸಾರಿಗೆಯಾಗಿದೆ ಎಂದು ಇದೇ ವೇಳೆ ಪ್ರಧಾನಿ ಮೋದಿ ಹೇಳಿದರು.

ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರ ಒತ್ತು ನೀಡುತ್ತಿದ್ದು, ಅದರಂತೆ ದೇಶಾದ್ಯಂತ 1309 ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಭಾರತವು ಈಗ ಅಭಿವೃದ್ಧಿಯ ಗುರಿಯತ್ತ ಸಾಗುತ್ತಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ, ಹೊಸ ಸಂಕಲ್ಪಗಳನ್ನು ಹೊಂದಿದೆ. ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಓಲೈಕೆ ರಾಜಕಾರಣ ತೊಲಗಲಿ: ಇದೇ ವೇಳೆ ವಿಪಕ್ಷಗಳ ಇಂಡಿಯಾ ಒಕ್ಕೂಟವನ್ನು ಟೀಕಿಸಿದ ಪ್ರಧಾನಿ ಮೋದಿ ಅವರು, ಭ್ರಷ್ಟಾಚಾರ, ರಾಜವಂಶ ಮತ್ತು ಓಲೈಕೆ ರಾಜಕಾರಣ ನಶಿಸಬೇಕಿದೆ. ವಿರೋಧ ಪಕ್ಷಗಳು ತಾವು ಏನನ್ನೂ ಮಾಡಿಲ್ಲ. ಇತರರಿಗೆ ಕೆಲಸ ಮಾಡಲೂ ಬಿಡುತ್ತಿಲ್ಲ ಎಂದು ಆಪಾದಿಸಿದರು.

ದೇಶದಲ್ಲೀಗ ಒಂದೇ ಒಂದು ಪ್ರತಿಧ್ವನಿ ಕೇಳಿಸುತ್ತಿದೆ. ಭ್ರಷ್ಟಾಚಾರ, ರಾಜವಂಶ ಮತ್ತು ತುಷ್ಟೀಕರಣವು ದೇಶದಿಂದ ತೊರೆಯಬೇಕು ಎಂಬುದೇ ಘೋಷಣೆಯಾಗಿದೆ. ಇದು ಸ್ವಾತಂತ್ರ್ಯ ಹೋರಾಟದ ವೇಳೆ ನಡೆದ ಕ್ವಿಟ್ ಇಂಡಿಯಾ ಚಳವಳಿ ಮಾದರಿಯಂತಿದೆ ಎಂದು ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತೆಯ ಪ್ರತಿಮೆಗೆ ಭೇಟಿ ನೀಡದ ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಪ್ರತಿಪಕ್ಷಗಳು ಹೊಸ ಸಂಸತ್ ಭವನ, ನವೀಕರಿಸಲಾದ ಕರ್ತವ್ಯ ಪಥ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸಿದವು. 70 ವರ್ಷಗಳಿಂದ ಅವರು ದೇಶದ ವೀರ ಯೋಧರಿಗೆ ಯುದ್ಧ ಸ್ಮಾರಕವನ್ನು ಸಹ ನಿರ್ಮಿಸಲಿಲ್ಲ. ನಮ್ಮ ಸರ್ಕಾರ ನಿರ್ಮಿಸಿದಾಗ, ಅದನ್ನು ಟೀಕಿಸುತ್ತಾರೆ ಎಂದು ಕಿಡಿಕಾರಿದರು.

ನಗರ ಕೇಂದ್ರಿತ ರೈಲುಗಳು: ಅಮೃತ್ ಯೋಜನೆಯ ಭಾಗವಾಗಿ 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಇವುಗಳನ್ನು 24,470 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಲಾಗುವುದು. ಈ ನಿಲ್ದಾಣಗಳನ್ನು ಎರಡು ನಗರಗಳನ್ನು ಸಂದಿಸುವಂತೆ ‘ನಗರ ಕೇಂದ್ರಿತ’ವಾಗಿ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸಲಾಗಿದೆ.

ಎಲ್ಲೆಲ್ಲಿ, ಎಷ್ಟು ನಿಲ್ದಾಣಗಳು : ನವೀಕರಣಕ್ಕೆ ಚಾಲನೆ ಸಿಕ್ಕಿರುವ 508 ನಿಲ್ದಾಣಗಳು ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಈ ಪೈಕಿ ಉತ್ತರ ಪ್ರದೇಶದಲ್ಲಿ 55, ರಾಜಸ್ಥಾನದಲ್ಲಿ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 32, ಅಸ್ಸೋಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್‌ನಲ್ಲಿ 22, ಗುಜರಾತ್‌ನಲ್ಲಿ 21, ತೆಲಂಗಾಣದಲ್ಲಿ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶದಲ್ಲಿ 18, ತಮಿಳುನಾಡಿನ 18, ಹರಿಯಾಣದ 15, ಕರ್ನಾಟಕದ 13 ನಿಲ್ದಾಣಗಳು ನವೀಕರಣ ಯೋಜನೆಗೆ ಒಳಪಟ್ಟಿರುತ್ತವೆ.

ಇದನ್ನೂ ಓದಿ: ಪ್ರಧಾನಿ ವಚನಭ್ರಷ್ಟರಾಗಲು ಸಾಧ್ಯನಾ... ಮೋದಿ ವಿರುದ್ಧ ಖರ್ಗೆ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.