ನವದೆಹಲಿ: ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದ ತೆರಿಗೆ ಇಲಾಖೆ ಅಧಿಕಾರಿಗಳು 350 ಕೋಟಿಗೂ ಹೆಚ್ಚು ನಗದು ಹಾಗೂ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
-
देशवासी इन नोटों के ढेर को देखें और फिर इनके नेताओं के ईमानदारी के 'भाषणों' को सुनें... 😂😂😂
— Narendra Modi (@narendramodi) December 8, 2023 " class="align-text-top noRightClick twitterSection" data="
जनता से जो लूटा है, उसकी पाई-पाई लौटानी पड़ेगी, यह मोदी की गारंटी है।
❌❌❌💵 💵 💵❌❌❌ pic.twitter.com/O2pEA4QTOj
">देशवासी इन नोटों के ढेर को देखें और फिर इनके नेताओं के ईमानदारी के 'भाषणों' को सुनें... 😂😂😂
— Narendra Modi (@narendramodi) December 8, 2023
जनता से जो लूटा है, उसकी पाई-पाई लौटानी पड़ेगी, यह मोदी की गारंटी है।
❌❌❌💵 💵 💵❌❌❌ pic.twitter.com/O2pEA4QTOjदेशवासी इन नोटों के ढेर को देखें और फिर इनके नेताओं के ईमानदारी के 'भाषणों' को सुनें... 😂😂😂
— Narendra Modi (@narendramodi) December 8, 2023
जनता से जो लूटा है, उसकी पाई-पाई लौटानी पड़ेगी, यह मोदी की गारंटी है।
❌❌❌💵 💵 💵❌❌❌ pic.twitter.com/O2pEA4QTOj
ಎಣಿಕೆಗೆ ಸಿಗದಷ್ಟು ನಗದು ದೊರಕಿರುವ ಈ ಪ್ರಕರಣವನ್ನು ಪ್ರಸಿದ್ಧ ವೆಬ್ ಸಿರೀಸ್ 'ಮನಿ ಹೀಸ್ಟ್' ಗೆ ಹೋಲಿಸಿರುವ ಪ್ರಧಾನಿ ಮೋದಿ, ಎಕ್ಸ್ನಲ್ಲಿ ಪೋಸ್ಟ್ನಲ್ಲಿ, "ಕಳೆದ 70 ವರ್ಷಗಳಿಂದ ಭಾರತದಲ್ಲಿ ಕಾಂಗ್ರೆಸ್ ದರೋಡೆ ಮಾಡುತ್ತಿರುವಾಗ, ಯಾರಿಗೆ ಬೇಕು ಈ 'ಮನಿ ಹೀಸ್ಟ್' ಕಾಲ್ಪನಿಕ ಕಥೆ" ಎಂದು ಟಾಂಗ್ ಕೊಟ್ಟಿದ್ದಾರೆ. ಪೋಸ್ಟ್ ಜೊತೆಗೆ ಬಿಜೆಪಿ ತನ್ನ ಖಾತೆಯಲ್ಲಿ 'ಕಾಂಗ್ರೆಸ್ ಪ್ರೆಸೆಂಟ್ಸ್ ದಿ ಮನಿ ಹೀಸ್ಟ್' ಎನ್ನುವ ಕ್ಯಾಪ್ಷನ್ನೊಂದಿಗೆ ಹಂಚಿಕೊಂಡಿರುವ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ.
-
In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023 " class="align-text-top noRightClick twitterSection" data="
">In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023
ಸಂಸದ ಧೀರಜ್ ಸಾಹುಗೆ ಸಂಬಂಧಿಸಿದ ಒಡಿಶಾ ಮೂಲದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಕಚೇರಿಗಳ ಮೇಲೆ ಹಾಗೂ ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಡಿಸೆಂಬರ್ 6ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಲೆಕ್ಕಕ್ಕೆ ಸಿಗದಷ್ಟು ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ದಾಳಿಯ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
-
In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023 " class="align-text-top noRightClick twitterSection" data="
">In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023
ಪ್ರಧಾನಿ ನರೇಂದ್ರ ಮೋದಿ ಅವರೂ ಎಕ್ಸ್ ಪೋಸ್ಟ್ ಮೂಲಕ ವಾಗ್ದಾಳಿ ನಡೆಸಿದ್ದು, "ದೇಶದ ಜನರು ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಬೇಕು. ನಂತರ ತಮ್ಮ ನಾಯಕರ ಪ್ರಾಮಾಣಿಕ ಭಾಷಣಗಳನ್ನು ಕೇಳಬೇಕು. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂತಿರುಗಿಸಬೇಕು. ಇದು ಮೋದಿ ಗ್ಯಾರಂಟಿ" ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ಮಾಡಿದ್ದ ನೋಟು ಅಮಾನ್ಯೀಕರಣದ ಯಶಸ್ಸನ್ನು ಪ್ರಶ್ನಿಸಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರು ಮಾಡಿದ್ದ ಹಳೆಯ ಟ್ವೀಟ್ಗಳನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದು, ನೋಟು ನಿಷೇಧದ ನಂತರವೂ ಜನರು ಇನ್ನೂ ಕಪ್ಪು ಹಣವನ್ನು ಹೇಗೆ ಹೊಂದಿದ್ದಾರೆ." ಎಂದು ಪ್ರಶ್ನಿಸಿದ್ದಾರೆ.
-
In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023 " class="align-text-top noRightClick twitterSection" data="
">In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023
ದೇಶದಲ್ಲಿ ಇದುವರೆಗೆ ನಡೆದ ಕಾರ್ಯಾಚರಣೆಗಳಲ್ಲಿ, ಒಂದೇ ಬಾರಿಗೆ ಅತಿ ಹೆಚ್ಚು ನಗದು ದೊರೆತಿರುವ ದಾಳಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ದಾಳಿ ವೇಳೆ ದೊರೆತ ನಗದನ್ನು 176 ಬ್ಯಾಗ್ಗಳಲ್ಲಿ ತುಂಬಿ ಎಸ್ಬಿಐ ಶಾಖೆಗೆ ತಲುಪಿಸಲಾಗಿತ್ತು. ಎಣಿಕೆಗಾಗಿ ಒಟ್ಟು 40 ಯಂತ್ರಗಳನ್ನು ಹಾಗೂ 60 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿರಂತರವಾಗಿ 5 ದಿನಗಳಿಗೂ ಹೆಚ್ಚು ಕಾಲ ಎಣಿಕೆ ಕಾರ್ಯ ಕೈಗೊಳ್ಳಲಾಗಿತ್ತು. ಎಣಿಕೆ ವೇಳೆ ಯಂತ್ರಗಳು ಕೆಟ್ಟು ಹೋಗುತ್ತಿದ್ದ ಯಂತ್ರಗಳನ್ನು ತಕ್ಷಣ ರಿಪೇರಿ ಮಾಡಲು ಕೆಲ ಮೆಕ್ಯಾನಿಕ್ಗಳನ್ನೂ ಶಾಖೆಯಲ್ಲಿ ಇರಿಸಲಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಸಂಸದ ಸಾಹು ಮೇಲಿನ ಐಟಿ ದಾಳಿ; ಐದನೇ ದಿನವೂ ಮುಂದುವರಿದ ಹಣ ಎಣಿಕೆ