ETV Bharat / bharat

ಬಿಜೆಪಿ 44ನೇ ಸಂಸ್ಥಾಪನಾ ದಿನ: ಪಕ್ಷ ಹನುಮನಂತೆ ನಿಸ್ವಾರ್ಥ ಸೇವೆ ಮಾಡುತ್ತಿದೆ.. ಪ್ರಧಾನಿ ಮೋದಿ - PM Narendra Modi addresses party workers

ಬಿಜೆಪಿ ಪಕ್ಷದ 44 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By

Published : Apr 6, 2023, 11:55 AM IST

ನವದೆಹಲಿ: ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸವಾಲುಗಳನ್ನು ಎದುರಿಸಲು ಬಿಜೆಪಿ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು. ಪಕ್ಷದ 44 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಹನುಮಾನ್​ ಜಯಂತಿ ಮತ್ತು ಪಕ್ಷದ ಸಂಸ್ಥಾಪನಾ ದಿನವಾಗಿದೆ. ಹನುಮನಂತೆ ನಿಸ್ವಾರ್ಥ ಸೇವೆಯನ್ನು ಪಕ್ಷ ಮಾಡುತ್ತದೆ. ಎಲ್ಲ ದಾರ್ಷ್ಟ್ಯವನ್ನು ತೊಡೆದು ಹಾಕಿದ ನಂತರ ದೇಶ ಕೂಡ ಭಗವಾನ್ ಹನುಮಂತನಂತೆ ಬಲಾಢ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

"ಭಗವಾನ್ ಹನುಮಂತನು ತನ್ನ ಸಂಪೂರ್ಣ ಜೀವನದಲ್ಲಿ ಯಾವುದನ್ನಾದರೂ ಮಾಡಬಲ್ಲೆನು ಎಂಬ ಮನೋಭಾವ ಹೊಂದಿದ್ದ. ಅದು ದೊಡ್ಡ ಯಶಸ್ಸು ಸಾಧಿಸಲು ಸಹಾಯ ಮಾಡಿತು. ಅದರಂತೆ ನಾವು ಕೂಡ ಎಲ್ಲವನ್ನೂ ಸಾಧಿಸುತ್ತೇವೆ ಎಂಬ ಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಹನುಮ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಉಚಿತ ಪಡಿತರ ಯೋಜನೆ, ಆರೋಗ್ಯ ವಿಮೆ ಮತ್ತು ಇತರ ಉತ್ತಮ ಯೋಜನೆಗಳನ್ನು ಇದೇ ವೇಳೆ ಮೋದಿ ಉಲ್ಲೇಖಿಸಿ ಸಾಮಾಜಿಕ ನ್ಯಾಯವು ಬಿಜೆಪಿಗೆ ನಂಬಿಕೆಯಾಗಿದೆ ಎಂದು ಪ್ರತಿಪಾದಿಸಿದರು.

ವಿರೋಧ ಪಕ್ಷಗಳು ದೊಡ್ಡದಾಗಿ ಯೋಚಿಸಲು ಸಾಧ್ಯವಿಲ್ಲ. ಸಣ್ಣತನದಿಂದಲೇ ಅವರು ತೃಪ್ತರಾಗಿದ್ದಾರೆ ಎಂದು ಆರೋಪಿಸಿದ ಪ್ರಧಾನಿ, "ಬಿಜೆಪಿ ದೊಡ್ಡ ಕನಸುಗಳನ್ನು ಮತ್ತು ಇನ್ನೂ ದೊಡ್ಡ ಗುರಿಗಳನ್ನು ಸಾಧಿಸಲು ಯೋಜಿಸುತ್ತದೆ. 2014 ರಿಂದ ನಮ್ಮ ಸರ್ಕಾರ ಬಡವರು, ಹಿಂದುಳಿದವರು ಮತ್ತು ವಂಚಿತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಾಶ್ಮೀರಕ್ಕೆ ವಿಶೇಷಾಧಿಕಾರಿವನ್ನು ತೆಗೆದು ಹಾಕಿದ್ದು, ಇತಿಹಾಸವಾಗಲಿದೆ ಎಂದು ವಿರೋಧ ಪಕ್ಷಗಳು ಊಹಿಸಿರಲಿಲ್ಲ. ಬಿಜೆಪಿ ಮಾಡುತ್ತಿರುವ ಕೆಲಸವನ್ನು ಅವರು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ವಿಪಕ್ಷಗಳು ನನ್ನ ಸಾವನ್ನು ಕೂಡ ಬಯಸುತ್ತಿವೆ. ಇದು ಅವರ ಹತಾಶ ಮನೋಭಾವವನ್ನು ತೋರಿಸುತ್ತದೆ ಎಂದ ಮೋದಿ, ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಉತ್ತಮ ರೀತಿಯಲ್ಲಿ ಬಳಸುವಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ನೀಡಲು ಪ್ರಧಾನಿ ಇದೇ ವೇಳೆ ಸಲಹೆ ನೀಡಿದರು.

10 ಲಕ್ಷ ಕಡೆ ಮೋದಿ ಭಾಷಣ ಭಿತ್ತರ: ಪಕ್ಷದ ಸಂಸ್ಥಾಪನಾ ದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ದೇಶದಾದ್ಯಂತ 10 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಮಾಡಲು ಕರೆ ನೀಡಿದರು.

ಗೋಡೆಗಳ ಮೇಲೆ ಬಿಜೆಪಿ ಬರಹ: ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ರಾಷ್ಟ್ರ ರಾಜಧಾನಿಯಿಂದ ಚುನಾವಣಾ ಪ್ರಚಾರ ಪ್ರಾರಂಭಿಸಿದ ನಂತರ ಪಕ್ಷದ ಸದಸ್ಯರು 10.72 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಗೋಡೆಗಳ ಮೇಲೆ 'ಮತ್ತೆ ಮೋದಿ ಸರ್ಕಾರ' ಮತ್ತು ' ಮತ್ತೊಮ್ಮೆ ಬಿಜೆಪಿ ಸರ್ಕಾರ' ಎಂಬ ಘೋಷಣೆಗಳನ್ನು ಬರೆಯಲಿದ್ದಾರೆ. ಪಕ್ಷದ 44ನೇ ಸಂಸ್ಥಾಪನಾ ದಿನದ ನಿಮಿತ್ತ ಏಪ್ರಿಲ್ 6 ರಿಂದ ಏಪ್ರಿಲ್ 14 ರವರೆಗೆ ವಿಶೇಷ ವಾರ ಆಚರಿಸಲಾಗುತ್ತಿದೆ.

1984ರ ಏಪ್ರಿಲ್​ 6 ರಂದು ಬಿಜೆಪಿ ಪಕ್ಷ ಕಾರ್ಯಾರಂಭಗೊಂಡಿತ್ತು. ಅಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದರೆ, 2019ರ ಲೋಕಸಭೆ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆದ್ದು, ಏಕಪಕ್ಷವಾಗಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ.

ಓದಿ: ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ.. ಭಕ್ತರ ಇಷ್ಟಾರ್ಥ ಈಡೇರಿಸುವ ಆಂಜನೇಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.