ETV Bharat / bharat

ಏಪ್ರಿಲ್‌ 7ರಂದು ವಿದ್ಯಾರ್ಥಿಗಳೊಂದಿಗೆ ಮೋದಿ 'ಪರೀಕ್ಷಾ ಪೆ ಚರ್ಚಾ'

author img

By

Published : Apr 5, 2021, 11:30 AM IST

ನಾಲ್ಕನೇ ಆವೃತ್ತಿಯ 'ಪರೀಕ್ಷಾ ಪೆ ಚರ್ಚಾ' ಸಂವಾದವನ್ನು ಏಪ್ರಿಲ್​ 7 ರಂದು ಪ್ರಧಾನಿ ನರೇಂದ್ರ ಮೋದಿ ನಡೆಸಲಿದ್ದಾರೆ.

Pariksha Pe Charcha
ಪರೀಕ್ಷಾ ಪೆ ಚರ್ಚಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್​ 7 ರಂದು (ಬುಧವಾರ) ಶಾಲಾ -ಕಾಲೇಜು ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಸಂವಾದ ನಡೆಸಲಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಈ ವರ್ಷ ವರ್ಚುವಲ್​ ಆಗಿ ಸಂವಾದ ನಡೆಯಲಿದೆ.

ವಿದ್ಯಾರ್ಥಿಗಳೊಂದಿಗೆ ಮೋದಿಯವರು ನಡೆಸುವ ವಾರ್ಷಿಕ ಸಂವಾದ ಕಾರ್ಯಕ್ರಮ ಇದಾಗಿದ್ದು, ಈ ಬಾರಿ ಹೊಸ ಸ್ವರೂಪದಲ್ಲಿ ನಡೆಸಲಾಗುವುದು ಪ್ರಧಾನಿ ತಿಳಿಸಿದ್ದಾರೆ.

  • A new format, several interesting questions on a wide range of subjects and a memorable discussion with our brave #ExamWarriors, parents and teachers.

    Watch ‘Pariksha Pe Charcha’ at 7 PM on 7th April...#PPC2021 pic.twitter.com/5CzngCQWwD

    — Narendra Modi (@narendramodi) April 5, 2021 " class="align-text-top noRightClick twitterSection" data=" ">

ನಮ್ಮ ಕೆಚ್ಚೆದೆಯ ಪರೀಕ್ಷಾ ಯೋಧರು, ಪೋಷಕರು ಮತ್ತು ಶಿಕ್ಷಕರೊಂದಿಗೆ ವ್ಯಾಪಕ ವಿಷಯಗಳ ಕುರಿತು ಹಲವಾರು ಆಸಕ್ತಿದಾಯಕ ಪ್ರಶ್ನೆಗಳ ಜೊತೆಯಲ್ಲಿ ನಡೆಸುವ ಸ್ಮರಣೀಯ ಚರ್ಚೆ ಇದಾಗಿರಲಿದೆ. ಏಪ್ರಿಲ್ 7 ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ವೀಕ್ಷಿಸಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕೋವಿಡ್​-19 ದೃಷ್ಟಿಯಿಂದ ಈ ವರ್ಷ ಆನ್‌ಲೈನ್‌ ಮೂಲಕ ನಾಲ್ಕನೇ ಆವೃತ್ತಿಯ ವಾರ್ಷಿಕ ಸಂವಾದ ನಡೆಸಲಾಗುವುದು ಎಂದು ಫೆಬ್ರವರಿಯಲ್ಲಿ ಪ್ರಕಟಿಸಲಾಗಿತ್ತು. ಪರೀಕ್ಷಾ ಪೆ ಚರ್ಚಾದ ಮೊದಲ ಆವೃತ್ತಿ 2018ರ ಫೆಬ್ರವರಿ 16ರಂದು ದೆಹಲಿಯ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.