ETV Bharat / bharat

‘ನಮೋ’ಗೆ 71 ವರ್ಷದ ಜನ್ಮದಿನದ ಸಂಭ್ರಮ.. ಅವರ ಆಡಳಿತದ ಹಾದಿಯತ್ತ ಒಂದು ನೋಟ - ನರೇಂದ್ರ ಮೋದಿ

ಪ್ರಧಾನಿ ಮೋದಿಯವರು ಇಂದು 71 ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರು ನಡೆದು ಬಂದ ರಾಜಕೀಯದ ಹಾದಿಯ ಒಂದು ನೋಟ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
author img

By

Published : Sep 17, 2021, 7:08 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಸಂಭ್ರಮ. ಇಂದು ಅವರು 71ನೇ ವರ್ಷಕ್ಕೆ ಕಾಲಿಟ್ಟಿದ್ದು, ಗಣ್ಯಾತಿಗಣ್ಯರು ಅವರಿಗೆ ಶುಭ ಹಾರೈಸುತ್ತಿದ್ದಾರೆ. ಈ ದಿನವನ್ನು ಐತಿಹಾಸಿಕ ದಿನವನ್ನಾಗಿಸಲು ಬಿಜೆಪಿ ಇಂದಿನಿಂದ 21 ದಿನಗಳ ಕಾಲ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ ಆರಂಭಿಸುತ್ತಿದೆ.

ಗುಜರಾತ್​ನಲ್ಲಿ ದೀರ್ಘ ಅವಧಿಗೆ ಸಿಎಂ ಆಗಿ ನಮೋ ಸೇವೆ

ಪ್ರಧಾನಿ ಮೋದಿ 2001ರ ಅಕ್ಟೋಬರ್​ನಿಂದ 2014ರ ಮೇ ವರೆಗೆ ಗುಜರಾತ್‌ನ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿದ್ದರು. ಬಳಿಕ ಲೋಕಸಭೆ ಪ್ರವೇಶಿಸಿದ ಅವರು, 2014 ರಲ್ಲಿ ಬಿಜೆಪಿ ಪಕ್ಷವು ಅಭೂತ ಪೂರ್ವ ಗೆಲುವು ಸಾಧಿಸಿ ಕೇಂದ್ರದಲ್ಲಿ ಸರ್ಕಾರ ರಚಿಸಿದರು. 2019 ರಲ್ಲಿಯೂ ಸಂಪೂರ್ಣ ಬಹುಮತ ಪಡೆದ ಬಳಿಕ ಎರಡನೇ ಅವಧಿಗೆ ಪ್ರಧಾನಿಯಾದರು.

ಎರಡನೇ ಅವಧಿಗೂ ಪ್ರಧಾನಿ, ಭ್ರಷ್ಟಾಚಾರ ರಹಿತ ಆಡಳಿತ

2014 ರಿಂದ 2019 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಂತರ 2019 ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ಮೋದಿ ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ಮೂರನೇ ವರ್ಷದಲ್ಲಿದ್ದಾರೆ. ಅವರ ಆಡಳಿತದಲ್ಲಿ ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್​, ಸಬ್​ ಕಾ ವಿಶ್ವಾಸ್ ಎಂಬ ಧ್ಯೇಯ ವಾಕ್ಯವನ್ನು ಅವರು ಪದೇ ಪದೆ ಒತ್ತಿ ಹೇಳಿದ್ದಾರೆ. ಮೋದಿಯು, ದೇಶದಲ್ಲಿ ಅಭಿವೃದ್ಧಿ ಆಧಾರಿತ ಮತ್ತು ಭ್ರಷ್ಟಾಚಾರ ರಹಿತ ಆಡಳಿತವನ್ನು ಸ್ಥಾಪಿಸಲು ಶ್ರಮಿಸಿದರು.

ಜನ ಸೇವೆಯೇ ಜನಾರ್ದನ ಸೇವೆ

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಲವಾರು ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ‘ಆಯುಷ್ಮಾನ್ ಭಾರತ್’ ಇದು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದ್ದು, 50 ಕೋಟಿ ಭಾರತೀಯರಿಗೆ ಸೇವೆಯನ್ನೊದಗಿಸಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಭಾಗವಾಗಿ 35 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದ್ದು, ಅದರಿಂದಾಗಿ ಪ್ರತಿಯೊಬ್ಬ ಭಾರತೀಯನೂ ಬ್ಯಾಂಕ್ ಖಾತೆಗಳನ್ನು ಹೊಂದುವಂತೆ ಮಾಡಿದೆ. ಮೋದಿ ಸರ್ಕಾರವು ವಿವಿಧ ವಿಭಾಗಗಳಿಗೆ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ.

ಬಡವರ ಬಾಳಲ್ಲಿ ಪ್ರಜ್ವಲಿಸಿದ ‘ಉಜ್ವಲ’ ಯೋಜನೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನವನ್ನು ಅಂದಾಜು 7 ಕೋಟಿಗೂ ಅಧಿಕ ಜನರು ಪಡೆದಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ವಿದ್ಯುತ್ ಸಂಪರ್ಕವಿಲ್ಲದ ಸುಮಾರು 18 ಸಾವಿರ ಗ್ರಾಮಗಳಿಗೆ ವಿದ್ಯುತ್​​​​ ಸೇವೆ ಒದಗಿಸಲಾಗಿದೆ. 2022ರ ವೇಳೆಗೆ ಎಲ್ಲರಿಗೂ ವಸತಿ ಒದಗಿಸುವ ಗುರಿಯನ್ನು ಹೊಂದಿದೆ. PM ಕಿಸಾನ್ ಸಮ್ಮಾನ್ ನಿಧಿ, ಮಣ್ಣಿನ ಆರೋಗ್ಯ ಕಾರ್ಡ್‌ಗಳು, E-NAM ನಂತಹ ಯೋಜನೆಗಳ ಮೂಲಕ ಕೃಷಿಗೆ ಉತ್ತೇಜನ ನೀಡಿದ್ದಾರೆ.

ಸ್ವಚ್ಛ ಭಾರತ್ ಮಿಷನ್

ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಿಂದ 2014 ರಲ್ಲಿ ಸ್ವಚ್ಛ ಭಾರತ್ ಮಿಷನ್ ಆರಂಭಿಸಿದರು. ಮುಂದಿನ ಪೀಳಿಗೆಗೆ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆದ್ದಾರಿ, ರೈಲ್ವೆ, ಜಲಮಾರ್ಗಗಳನ್ನು ನಿರ್ಮಿಸಿದೆ.

ದೇಶೀಯ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ

ದೇಶೀಯ ಉತ್ಪನ್ನಗಳಿಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಮೇಕ್​ ಇನ್ ಇಂಡಿಯಾ ಎಂಬ ಅಭಿಯಾನ ಆರಂಭಿಸಿದರು. ಮೋದಿ ಸರ್ಕಾರ ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಿದೆ. ಮುದ್ರಾ ಯೋಜನೆಯ ಮೂಲಕ ನಿಧಿಗೆ ಹಣ ನೀಡಲು ಪ್ರಯತ್ನಿಸಿದೆ. ವಲಯಗಳಾದ್ಯಂತ ಆರ್ಥಿಕ ಸುಧಾರಣೆಗಳು ಮತ್ತು ಜಿಎಸ್‌ಟಿ ಜಾರಿಗೆ ಹೊರತಾಗಿ, ಮೋದಿ ಸರ್ಕಾರವು ಭಾರತದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯತ್ತ ಗಮನ ಹರಿಸಿದೆ.

ವಿಶ್ವಸಂಸ್ಥೆಯಿಂದಲೂ ಅವಾರ್ಡ್

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ನವೀಕರಿಸಬಹುದಾದ ಇಂಧನಕ್ಕೆ ಭಾರಿ ಉತ್ತೇಜನ ಕೊಟ್ಟರು. ಅವರು ಗುಜರಾತ್ ಸಿಎಂ ಆಗಿದ್ದಾತ ಪ್ರತ್ಯೇಕ ಹವಾಮಾನ ಬದಲಾವಣೆ ಇಲಾಖೆ ರಚಿಸಿದ್ದರು. ಮೋದಿಯವರು ಪರಿಸರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡುವುದರಿಂದ ವಿಶ್ವಸಂಸ್ಥೆಯು ಅವರಿಗೆ ಚಾಂಪಿಯನ್ಸ್ ಆಫ್ ದಿ ಅರ್ಥ್' ಪ್ರಶಸ್ತಿ ನೀಡಿ ಗೌರವಿಸಿತು.

ವಿದೇಶಾಂಗ ನೀತಿಯ ಉಪಕ್ರಮಗಳಿಗೆ ಉತ್ತೇಜನ ನೀಡಿದ ಪಿಎಂ ಮೋದಿ, ಸಾರ್ಕ್ ರಾಷ್ಟ್ರಗಳ ಎಲ್ಲ ರಾಷ್ಟ್ರಗಳ ಮುಖ್ಯಸ್ಥರ ಸಮ್ಮುಖದಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎರಡನೇ ಅವಧಿಯ ಆರಂಬದಲ್ಲಿ ಬಿಮ್​ಸ್ಟೆಕ್ ನಾಯಕರನ್ನು ಆಹ್ವಾನಿಸಿದ್ದರು.

ನಮೋಗೆ ಅಂತಾರಾಷ್ಟ್ರೀಯ ಗೌರವ

ಪ್ರಧಾನಿ ಮೋದಿಗೆ ಸೌದಿ ಅರೇಬಿಯಾದ ಅತ್ಯುನ್ನತ ನಾಗರಿಕ ಗೌರವ ಅಬ್ದುಲಾಝಿಜ್​​ ಸೇರಿದಂತೆ ಹಲವು ಗೌರವಗಳನ್ನು ನೀಡಲಾಗಿದೆ. ರಷ್ಯಾ (The Order of the Holy Apostle Andrew the First), ಪ್ಯಾಲೆಸ್ಟೈನ್ (ಗ್ರ್ಯಾಂಡ್ ಕಾಲರ್ ಆಫ್​ ದಿ ಸ್ಟೇಟ್ ಆಫ್ ಪ್ಯಾಲೆಸ್ಟೈನ್), ಅಫ್ಘಾನಿಸ್ತಾನ (ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ), ಯುಎಇ (ಜಾಯೆದ್ ಮೆಡಲ್) ಮತ್ತು ಮಾಲ್ಡೀವ್ಸ್ (ರೂಲ್ ಆಫ್​ ನಿಶಾನ್ ಇಝುದ್ದೀನ್) 2018 ರಲ್ಲಿ, ಪ್ರಧಾನಿ ಶಾಂತಿ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನೂ ಪಡೆದರು.

ಯೋಗದಿನಕ್ಕೆ ವಿಶ್ವಸಂಸ್ಥೆಯಿಂದ ಪ್ರಶಂಸೆ

ಜೂನ್​ 21 ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ನರೇಂದ್ರ ಮೋದಿಯವರ ಕರೆಗೆ ವಿಶ್ವಸಂಸ್ಥೆಯಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಯಿತು.

ಸಂಘ ಪರಿವಾರದಿಂದ ರಾಜಕೀಯ ಆರಂಭ

ಪ್ರಧಾನಿ ಮೋದಿ ಸೆಪ್ಟೆಂಬರ್ 17, 1950 ರಂದು ಗುಜರಾತಿನ ಒಂದು ಸಣ್ಣ ಪಟ್ಟಣದಲ್ಲಿ ಜನಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಅವರು ಆರಂಭದಲ್ಲಿ ಸಂಕಷ್ಟಗಳನ್ನು ಎದುರಿಸಿದರು. ಬಳಿಕ ಸಂಘಪರಿವಾರಕ್ಕೆ ಸೇರಿ ನಿರಂತರ ಹೋರಾಟಗಳ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.