ETV Bharat / bharat

ದೀಪಾವಳಿ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ತರಲಿ: ದೇಶದ ಜನತೆಗೆ ಶುಭ ಕೋರಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಈ ಹಬ್ಬವು ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸಿದ್ದಾರೆ.

modi
ಮೋದಿ
author img

By ETV Bharat Karnataka Team

Published : Nov 12, 2023, 11:17 AM IST

Updated : Nov 12, 2023, 2:23 PM IST

ನವದೆಹಲಿ : ದೀಪಾವಳಿಯ ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. "ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್​ನಲ್ಲಿ ಮೋದಿ" ಪೋಸ್ಟ್ ಮಾಡಿದ್ದಾರೆ.

  • देश के अपने सभी परिवारजनों को दीपावली की ढेरों शुभकामनाएं।

    Wishing everyone a Happy Diwali! May this special festival bring joy, prosperity and wonderful health to everyone’s lives.

    — Narendra Modi (@narendramodi) November 12, 2023 " class="align-text-top noRightClick twitterSection" data=" ">

ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿಯಂತೆ ಈ ಬಾರಿಯೂ ಯೋಧರ ಜೊತೆ ದೀಪಾವಳಿ ಆಚರಿಸಿದರು. ಹಿಮಾಚಲ ಪ್ರದೇಶದ ಲೇಪ್ಚಾ ಗ್ರಾಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಇಲ್ಲಿನ ಯೋಧರ ಜೊತೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ನಮ್ಮ ವೀರ ಯೋಧರ ಜೊತೆ ದೀಪಾವಳಿ ಆಚರಿಸಲು ಹಿಮಾಚಲ ಪ್ರದೇಶದ ಲೇಪ್ಚಾ ಗ್ರಾಮಕ್ಕೆ ತಲುಪಿರುವುದಾಗಿ ಪೋಸ್ಟ್ ಮಾಡಿದ್ದಾರೆ.

ಅದೇ ರೀತಿ ಸಿಎಂ ಸಿದ್ದರಾಮಯ್ಯನವರು "ಬೆಳಕಿನ ಹಬ್ಬ ದೀಪಾವಳಿ ಅಜ್ಞಾನದ ಅಂಧಕಾರ ತೊಡೆದು ಸುಜ್ಞಾನದ ಬೆಳಕು ಹರಿಸಲಿ ಎಂದು ಹಾರೈಸುತ್ತೇನೆ. ಹಣತೆಗಳನ್ನು ಬೆಳಗಿ, ಹಸಿರು ಪಟಾಕಿಗಳನ್ನು ಮಾತ್ರವೇ ಸಿಡಿಸಿ ಸುರಕ್ಷಿತವಾಗಿ ದೀಪಾವಳಿಯನ್ನು ಆಚರಿಸಿ. ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು" ಎಂದು ಹೇಳಿದ್ದಾರೆ.

ಇದನ್ನೂ ಓದಿ : ದೀಪಾವಳಿ ಸಂಭ್ರಮ : ಮಂಗಳೂರಲ್ಲಿ ಗೂಡುದೀಪ ಸ್ಪರ್ಧೆ, ಗಮನ ಸೆಳೆದ 500ಕ್ಕೂ ಹೆಚ್ಚು ಆಕಾಶದೀಪಗಳು

ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. "ನನ್ನಿಂದ ಮತ್ತು ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರ ಪರವಾಗಿ ನಾನು ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ. ಈ ವಿಶಿಷ್ಟ ಬೆಳಕಿನ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ" ಎಂದು ಖರ್ಗೆ ಎಕ್ಸ್‌ನಲ್ಲಿ ಬರೆದಿದ್ದಾರೆ.

  • ಬೆಳಕಿನ ಹಬ್ಬ ದೀಪಾವಳಿ ಅಜ್ಞಾನದ ಅಂಧಕಾರ ತೊಡೆದು ಸುಜ್ಞಾನದ ಬೆಳಕು ಹರಿಸಲಿ ಎಂದು ಹಾರೈಸುತ್ತೇನೆ.
    ಹಣತೆಗಳನ್ನು ಬೆಳಗಿ, ಹಸಿರು ಪಟಾಕಿಗಳನ್ನು ಮಾತ್ರವೇ ಸಿಡಿಸಿ ಸುರಕ್ಷಿತವಾಗಿ ದೀಪಾವಳಿಯನ್ನು ಆಚರಿಸಿ.

    ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು.
    - ಮುಖ್ಯಮಂತ್ರಿ @siddaramaiah#ದೀಪಾವಳಿ #Deepavali pic.twitter.com/ZaeN6JmW9s

    — CM of Karnataka (@CMofKarnataka) November 12, 2023 " class="align-text-top noRightClick twitterSection" data=" ">

"ಸಮಾಜದಲ್ಲಿ ಪ್ರೀತಿ, ಸಹೋದರತೆ, ಸೌಹಾರ್ದತೆ ಇರಬೇಕು ಎನ್ನುವುದು ನಮ್ಮ ಏಕೈಕ ಆಶಯ. ನಾವೆಲ್ಲರೂ ಅನ್ಯಾಯ, ಅಜ್ಞಾನ ಮತ್ತು ತಾರತಮ್ಯದ ವಿರುದ್ಧ ಹೋರಾಡುತ್ತಲೇ ಇರಬೇಕು, ಸಂತೋಷದ ಭರವಸೆಯ ದೀಪ ಉರಿಯುತ್ತಿರಬೇಕು" ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.

  • मेरे और कांग्रेस पार्टी के सभी नेताओं और कार्यकर्ताओं की ओर से आपको दिवाली की बहुत-बहुत शुभकामनाएँ।

    ये रोशनी का अनुपम उत्सव आपके जीवन में सुख, शान्ति, ख़ुशहाली और समृद्धि लेकर आएँ।

    समाज में प्रेम, भाईचारा, सौहार्द व सद्भाव रहे, हम सभी अन्याय, अज्ञानता और भेदभाव के प्रति लड़ते… pic.twitter.com/XTWn5Jv7RS

    — Mallikarjun Kharge (@kharge) November 12, 2023 " class="align-text-top noRightClick twitterSection" data=" ">

ಇದನ್ನೂ ಓದಿ : ಬೆಳಕಿನ ಹಬ್ಬಕ್ಕೆ ಭರ್ಜರಿ ತಯಾರಿ : ಮಾರುಕಟ್ಟೆಗಳಲ್ಲಿ ಕಾಣಸಿಗುತ್ತಿವೆ ಕಲರ್ ಕಲರ್ ಆಕಾಶ ಬುಟ್ಟಿಗಳು

ದೀಪಾವಳಿ ಹಬ್ಬದ ಬಗ್ಗೆ : ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ 15 ನೇ ದಿನವಾದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು 'ಬೆಳಕಿನ ಹಬ್ಬ' ಎಂದೂ ಕರೆಯುತ್ತಾರೆ. ಇದು ಕತ್ತಲೆಯ ಮೇಲೆ ಬೆಳಕು ಮತ್ತು ಕೆಟ್ಟದ್ದರ ಮೇಲೆ ಒಳಿತಿನ ವಿಜಯದ ಸಂಕೇತವಾಗಿದೆ. ಆದ್ದರಿಂದ, ಈ ಹಬ್ಬವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ದೀಪಾವಳಿ ಸಂಭ್ರಮ : ದುಬಾರಿ ದರದ ನಡುವೆಯೂ ಭರ್ಜರಿ ವಹಿವಾಟು

Last Updated : Nov 12, 2023, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.