ನವದೆಹಲಿ: ಇಂದು ದೇಶದ ಶ್ರೇಷ್ಠ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ 91ನೇ ಜನ್ಮದಿನ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಹಾಗೂ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಬರೆದಿದ್ದಾರೆ.
-
Birthday wishes to former PM Dr. Manmohan Singh Ji. I pray for his long life and good health.
— Narendra Modi (@narendramodi) September 26, 2023 " class="align-text-top noRightClick twitterSection" data="
">Birthday wishes to former PM Dr. Manmohan Singh Ji. I pray for his long life and good health.
— Narendra Modi (@narendramodi) September 26, 2023Birthday wishes to former PM Dr. Manmohan Singh Ji. I pray for his long life and good health.
— Narendra Modi (@narendramodi) September 26, 2023
"ಮಾಜಿ ಪ್ರಧಾನಿ, ಡಾ.ಮನಮೋಹನ್ ಸಿಂಗ್ ಅವರ ಸಮಗ್ರತೆ, ರಾಷ್ಟ್ರ ನಿರ್ಮಾಣ ಮತ್ತು ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಅಚಲವಾದ ಬದ್ಧತೆ ನನಗೆ ಯಾವಾಗಲೂ ಸ್ಫೂರ್ತಿಯಾಗಿದೆ. ಅವರ ಜನ್ಮದಿನದಂದು ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
-
Former Prime Minister, Dr Manmohan Singh ji’s integrity, unwavering commitment to nation-building and economic upliftment of the masses will always be an inspiration to me.
— Rahul Gandhi (@RahulGandhi) September 26, 2023 " class="align-text-top noRightClick twitterSection" data="
Wishing him good health and happiness on his birthday.
">Former Prime Minister, Dr Manmohan Singh ji’s integrity, unwavering commitment to nation-building and economic upliftment of the masses will always be an inspiration to me.
— Rahul Gandhi (@RahulGandhi) September 26, 2023
Wishing him good health and happiness on his birthday.Former Prime Minister, Dr Manmohan Singh ji’s integrity, unwavering commitment to nation-building and economic upliftment of the masses will always be an inspiration to me.
— Rahul Gandhi (@RahulGandhi) September 26, 2023
Wishing him good health and happiness on his birthday.
"ಇಂದು ಡಾ.ಮನಮೋಹನ್ ಸಿಂಗ್ ಅವರು 91ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಯಾವಾಗಲೂ ಪಾಂಡಿತ್ಯ ಮತ್ತು ಕಲಿಕೆಯ ಅತ್ಯುತ್ತಮ ಸಂಕೇತ. ಅದಕ್ಕಿಂತ ಹೆಚ್ಚಾಗಿ ಅವರು ಯಾವ ಸ್ಥಾನದಲ್ಲಿದ್ದರೂ ಸಮಚಿತ್ತತೆ, ನಮ್ರತೆ ಮತ್ತು ಘನತೆಯನ್ನು ಪ್ರತಿಪಾದಿಸಿದ್ದಾರೆ. ನಮ್ಮ ಸಾರ್ವಜನಿಕ ಜೀವನದಲ್ಲಿ ಇವು ಅತ್ಯಂತ ಅಪರೂಪದ ಗುಣಗಳಾಗಿವೆ. ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳು ಅವರನ್ನು ಗುರು ಎಂದು ಕರೆಯುವುದನ್ನು ನಾನು ಕೇಳಿದ್ದೇನೆ. ಅವರಿಗೆ ಸ್ವಯಂ ಜಾಹೀರಾತು ಅಗತ್ಯವಿಲ್ಲ. ಇದು ಅದ್ಭುತವಾದ ಕಲಿಕೆಯ ಅನುಭವವಾಗಿದೆ" ಎಂದು ಜೈರಾಮ್ ರಮೇಶ್ ಹೇಳಿದರು.
ಡಿಎಂಕೆ ನಾಯಕ ಮತ್ತು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. "ಪ್ರಧಾನಿಯಾಗಿ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ನಾಯಕತ್ವ ಮತ್ತು ಅಂತರ್ಗತ ನೀತಿಗಳಿಗೆ ಬದ್ಧತೆಯು ಭಾರತದ ಭವಿಷ್ಯವನ್ನು ಮರುರೂಪಿಸಿತು. ಅವರ ಸಂಯೋಜಿತ, ಬೌದ್ಧಿಕ ಮತ್ತು ವಿನಮ್ರ ವಿಧಾನವು ಒಂದು ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಯುಗದಲ್ಲಿ ನಾಯಕತ್ವಕ್ಕೆ ಅಮೂಲ್ಯವಾದ ಪಾಠಗಳನ್ನು ಒದಗಿಸುತ್ತದೆ. ಅವರ ಪ್ರಗತಿ ಮತ್ತು ಸ್ಥಿರತೆಯ ಪರಂಪರೆ ಉಳಿಯುತ್ತದೆ" ಎಂದಿದ್ದಾರೆ.
ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ- ಕೊಡುಗೆಗಳು: ಆರ್ಥಿಕ ತಜ್ಞರಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಸತತ ಎರಡು ಬಾರಿ (2004-2014) ದೇಶದ ಪ್ರಧಾನಿಯಾಗಿದ್ದ ಡಾ. ಮನ ಮೋಹನ್ ಸಿಂಗ್ ಈಗಿನ ಪಾಕಿಸ್ಥಾನದ ಗಾಹ್ ಗ್ರಾಮದಲ್ಲಿ ಸೆಪ್ಟೆಂಬರ್ 26, 1932 ರಂದು ಅವರು ಜನಿಸಿದರು. ಅವರು ಪಂಜಾಬ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್ ಮತ್ತು ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನ ಮಾಡಿದರು. ಹೆಸರಾಂತ ಅರ್ಥಶಾಸ್ತ್ರಜ್ಞರಾಗಿದ್ದ ಇವರು 1990ರ ದಶಕದಲ್ಲಿ ವ್ಯಾಪಕವಾದ ಸುಧಾರಣೆಗಳನ್ನು ಪರಿಚಯಿಸಿದ್ದಾರೆ.
- 1991ರಲ್ಲಿ, ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತು. ಅಂದು ಹೊಸದಾಗಿ ಚುನಾಯಿತರಾದ ಪ್ರಧಾನ ಮಂತ್ರಿ ಪಿ.ವಿ ನರಸಿಂಹ ರಾವ್ ಅವರ ಸಂಪುಟದಲ್ಲಿ ಸಿಂಗ್ ಅವರು ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
- ಮುಂದಿನ ಕೆಲವು ವರ್ಷಗಳಲ್ಲಿ, ಬಲವಾದ ವಿರೋಧದ ಹೊರತಾಗಿಯೂ, ಅವರು ಭಾರತದ ಆರ್ಥಿಕತೆಯನ್ನು ಉದಾರೀಕರಣಗೊಳಿಸುವ ಹಲವಾರು ರಚನಾತ್ಮಕ ಸುಧಾರಣೆಗಳನ್ನು ಮಾಡಿ 'ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಮನಮೋಹನ್ ಸಿಂಗ್ 1982-1985 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿದರು.
- 2004 ಮತ್ತು 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದ ಬಳಿಕ ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಸತತ ಎರಡು ಅವಧಿಗೆ ಭಾರತದ 13ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಈ ಮೂಲಕ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ನಂತರ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ ಎನಿಸಿದ್ದಾರೆ.
- ಪಿ.ವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಭಾರತದ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿಂಗ್, 1991ರಲ್ಲಿ ದೇಶದಲ್ಲಿ ಆರ್ಥಿಕ ಉದಾರೀಕರಣದ ಮನ್ನಣೆಯನ್ನು ಪಡೆದರು. ಈ ಸುಧಾರಣೆಗಳು ಭಾರತೀಯ ಆರ್ಥಿಕತೆಯನ್ನು ವಿದೇಶಿ ಹೂಡಿಕೆದಾರರಿಗೆ ಹೆಚ್ಚು ಪ್ರವೇಶಿಸುವಂತೆ ಮಾಡಿತು ಮತ್ತು ಪಿಡಿಐ ಅನ್ನು ಹೆಚ್ಚಿಸಿತು. ಅಲ್ಲದೇ ಸರ್ಕಾರದ ನಿಯಂತ್ರಣವನ್ನು ಕಡಿಮೆಗೊಳಿಸಿ ದೇಶದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಿತು.
- ಕುತೂಹಲಕಾರಿಯಾಗಿ ಡಾ. ಮನಮೋಹನ್ ಸಿಂಗ್ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ(1998-2004)ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
- ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (NREGA) ಜಾರಿಗೆ ತಂದರು. ಅದು ನಂತರ MGNREGA ಎಂದು ಕರೆಯಲ್ಪಟ್ಟಿತು.
- ಸಿಂಗ್ ಸರ್ಕಾರದಲ್ಲಿ 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಅಂಗೀಕರಿಸಲಾಯಿತು. ಇದು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಮಾಹಿತಿಯ ಪಾರದರ್ಶಕತೆಯನ್ನು ಉತ್ತಮಗೊಳಿಸಿತು.
- ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಡಾ. ಮನ್ಮೋಹನ್ ಸಿಂಗ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಡಾ. ಮನ್ಮೋಹನ್ ಸಿಂಗ್ ತಮ್ಮ ವೃತ್ತಿಜೀವನದ ಉದ್ದಕ್ಕೂ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಇದರಲ್ಲಿ ವರ್ಷದ ಹಣಕಾಸು ಮಂತ್ರಿ, ಅತ್ಯುತ್ತಮ ಸಂಸದೀಯ ಪ್ರಶಸ್ತಿ ಮತ್ತು ವಿಶ್ವದ ಅಗ್ರ 100 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳು ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಬೇಕು: ಮನಮೋಹನ್ ಸಿಂಗ್