ETV Bharat / bharat

141 ಜನರ ಬಲಿ ಪಡೆದ ಕಿಲ್ಲರ್​ ಸೇತುವೆಗೆ ಪ್ರಧಾನಿ ಮೋದಿ ಭೇಟಿ.. ಪರಿಶೀಲನೆ - PM Modi visits the cable bridge collapse

ಕುಸಿದು ಬಿದ್ದು 141 ಜನರ ಬಲಿ ಪಡೆದ ಶತಮಾನಗಳಷ್ಟು ಹಳೆಯದಾದ ಗುಜರಾತ್​ನ ಮೊರ್ಬಿ ಸೇತುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.

collapse-site-in-morbi-gujarat
ಸೇತುವೆಗೆ ಪ್ರಧಾನಿ ಮೋದಿ ಭೇಟಿ
author img

By

Published : Nov 1, 2022, 4:50 PM IST

Updated : Nov 1, 2022, 5:10 PM IST

ಅಹಮದಾಬಾದ್​(ಗುಜರಾತ್​): ಕುಸಿದು ಬಿದ್ದು 141 ಜನರ ಬಲಿ ಪಡೆದ ಶತಮಾನಗಳಷ್ಟು ಹಳೆಯದಾದ ಗುಜರಾತ್​ನ ಮೊರ್ಬಿ ಸೇತುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಜೊತೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ಅವರು ಕೂಡ ಇದ್ದರು. ಮಚ್ಚು ನದಿಯಲ್ಲಿ ಕಣ್ಮರೆಯಾಗಿರುವ ಜನರ ಪತ್ತೆ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ಮೋರ್ಬಿಯ ಸಿವಿಲ್ ಆಸ್ಪತ್ರೆಗೂ ಭೇಟಿ ನೀಡಿದರು. ಈ ವೇಳೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೋರ್ಬಿಯಲ್ಲಿ ಕೇಬಲ್ ಸೇತುವೆ ಕುಸಿತದ ದುರ್ಘಟನೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್​​ಡಿಆರ್​ಎಫ್​ ಸಿಬ್ಬಂದಿ ಜತೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸಿದರು.

2 ದಿನಗಳ ಹಿಂದೆ ಮೊರ್ಬಿ ಪಟ್ಟಣದ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಕೇಬಲ್ ತೂಗು ಸೇತುವೆಯನ್ನು ನವೀಕರಿಸಿ ಜನರ ಓಡಾಟಕ್ಕೆ ಮುಕ್ತಗೊಳಿಸಲಾಗಿತ್ತು. ಭಾನುವಾರದಂದು ರಜೆ ದಿನವಾದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇತುವೆಗೆ ಭೇಟಿ ನೀಡಿದ್ದರು. ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಜನರು ಸೇತುವೆ ನಿಂತಿದ್ದ ಕಾರಣ ಅದು ಕುಸಿದು ಬಿದ್ದು ಈವರೆಗೂ 141 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಕ್ಷಣೆಗೆ ಸೂಚಿಸಿದ್ದ ಪ್ರಧಾನಿ: ಇನ್ನು 2 ದಿನಗಳಿಂದ ಗುಜರಾತ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಾರ್ವಜನಿಕ ಸಮಾರಂಭದಲ್ಲಿ ಘಟನೆ ನೆನೆದು ಭಾವುಕರಾಗಿದ್ದರು. ಗಾಂಧಿನಗರದ ರಾಜಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಕ್ಷಿಪ್ರ ರಕ್ಷಣಾ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಬ್ರಿಡ್ಜ್​ ಕೊನೆಯಲ್ಲಿ ನಿಂತು ಪರಿಶೀಲನೆ: ಇಂದು ದುರಂತ ನಡೆದ ಸೇತುವೆಯ ಕೊನೆಯಲ್ಲಿ ನಿಂತು ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ ಅವರು, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದರು. ದುರಂತಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡರು. ಸಂತ್ರಸ್ತರಿಗೆ ಎಲ್ಲ ನೆರವು ಸಿಗುವಂತೆ ನೋಡಿಕೊಳ್ಳಲು ಪ್ರಧಾನಿ ಮೋದಿ ಅವರು ಸೂಚಿಸಿದರು.

ಪ್ರಧಾನಿಯ ಜೊತೆಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್, ಗೃಹ ಸಚಿವ ಹರ್ಷ ಸಂಘವಿ, ಗುಜರಾತ್ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ, ರಾಜ್ಯದ ಗೃಹ ಇಲಾಖೆ ಮತ್ತು ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಸೇತುವೆ ಕುಸಿತ ದುರಂತ ತನಿಖೆಗಾಗಿ ಅಲ್ಲಿನ ಸರ್ಕಾರ ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. ಮೋರ್ಬಿ ಸೇತುವೆ ನವೀಕರಿಸಿದ ಒರೆವಾ ಕಂಪನಿಯ ಅಧಿಕಾರಿಗಳು, ಸೇತುವೆ ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರನ್ನು ಈಗಾಗಲೇ ಬಂಧಿಸಲಾಗಿದೆ.

ಇದನ್ನು ಓದಿ:ಗುಜರಾತ್​ ತೂಗು ಸೇತುವೆ ದುರಂತ: ಮುಂದುವರೆದ ರಕ್ಷಣಾ ಕಾರ್ಯಾಚರಣೆ

Last Updated : Nov 1, 2022, 5:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.