ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮಾಸಿಕ ಬಾನುಲಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಒಂದಿಲ್ಲೊಂದು ಸಂದೇಶ, ಸಲಹೆ ನೀಡುತ್ತಾರೆ. ಈ ಬಾರಿಯ 92 ನೇ ಸಂಚಿಕೆಯಲ್ಲಿ ಮಾತನಾಡುತ್ತಾ, ಪ್ರತಿ ಭಾನುವಾರ ದೂರದರ್ಶನದಲ್ಲಿ ಪ್ರಸಾರವಾಗುವ "ಸ್ವರಾಜ್ ಧಾರಾವಾಹಿ"ಯನ್ನು ವೀಕ್ಷಿಸುವಂತೆ ಸಲಹೆ ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಹಾನ್ ವೀರರ ಬಗ್ಗೆ ಅರಿವು ಮೂಡಿಸುವ ಸ್ವರಾಜ್ ಧಾರಾವಾಹಿ ಎಲ್ಲರೂ ತಪ್ಪದೇ ವೀಕ್ಷಿಸಿ, ನಿಮ್ಮ ಮಕ್ಕಳಿಗೂ ಇದನ್ನು ತೋರಿಸಿ. ಯುವ ಪೀಳಿಗೆ ದೇಶದ ಮಹಾನ್ ವೀರರ ಬಗ್ಗೆ ಅರಿತುಕೊಳ್ಳಬೇಕು. ಸ್ವರಾಜ್ಯ ಧಾರಾವಾಹಿಯ ಮೊದಲ ಪ್ರದರ್ಶನದಲ್ಲಿ ನಾನು ಭಾಗವಹಿಸಿದ್ದೆ. ಅಪ್ರತಿಮ ವೀರರು, ವೀರನಾರಿಯರನ್ನು ಪರಿಚಯಿಸುವ ಅತ್ಯುತ್ತಮ ಪ್ರಯತ್ನ ಇದಾಗಿದೆ ಎಂದು ಹೇಳಿದರು.
-
रात 9 बजे देखिए भारत के स्वतंत्रता संग्राम की समग्र गाथा...मुक्ति योद्धाओं और स्वतंत्रता आंदोलन के गुमनाम नायकों की कहानी को प्रदर्शित करता हमारी बेहतरीन पेशकश 'स्वराज' सिर्फ @DDNational पर#SwarajOnDoordarshan @ianuragthakur @Mayank23Agrawal pic.twitter.com/otVuWnLm05
— Doordarshan National दूरदर्शन नेशनल (@DDNational) August 28, 2022 " class="align-text-top noRightClick twitterSection" data="
">रात 9 बजे देखिए भारत के स्वतंत्रता संग्राम की समग्र गाथा...मुक्ति योद्धाओं और स्वतंत्रता आंदोलन के गुमनाम नायकों की कहानी को प्रदर्शित करता हमारी बेहतरीन पेशकश 'स्वराज' सिर्फ @DDNational पर#SwarajOnDoordarshan @ianuragthakur @Mayank23Agrawal pic.twitter.com/otVuWnLm05
— Doordarshan National दूरदर्शन नेशनल (@DDNational) August 28, 2022रात 9 बजे देखिए भारत के स्वतंत्रता संग्राम की समग्र गाथा...मुक्ति योद्धाओं और स्वतंत्रता आंदोलन के गुमनाम नायकों की कहानी को प्रदर्शित करता हमारी बेहतरीन पेशकश 'स्वराज' सिर्फ @DDNational पर#SwarajOnDoordarshan @ianuragthakur @Mayank23Agrawal pic.twitter.com/otVuWnLm05
— Doordarshan National दूरदर्शन नेशनल (@DDNational) August 28, 2022
ಮಕ್ಕಳು ಇದನ್ನು ವೀಕ್ಷಿಸುವ ಮೂಲಕ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ವೀರರ ಬಗ್ಗೆ ಕೇಳಿದಾಗ ರೆಕಾರ್ಡ್ಗಳನ್ನು ದಾಖಲು ಮಾಡಬಹುದು. ಇವುಗಳ ಮೇಲೆ ವಿಶೇಷ ಕಾರ್ಯಕ್ರಮಗಳನ್ನೂ ರೂಪಿಸಬಹುದು. ಇದರಿಂದ ದೇಶದಲ್ಲಿ ಹೊಸ ಜಾಗೃತಿ ಮೂಡುತ್ತದೆ ಎಂದರು.
ಆಗಸ್ಟ್ 17 ರಂದು ಸಂಸತ್ನ ಲೈಬ್ರರಿ ಕಟ್ಟಡದ ಬಾಲಯೋಗಿ ಆಡಿಟೋರಿಯಂನಲ್ಲಿ ದೂರದರ್ಶನ ನಿರ್ಮಾಣದ ಧಾರಾವಾಹಿಯಾದ "ಸ್ವರಾಜ್: ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರಗಾಥೆ" ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದರು.
ದೂರದರ್ಶನ ವಾಹಿನಿಯಲ್ಲಿ ಸ್ವರಾಜ್ ಧಾರಾವಾಹಿ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ. ಸ್ವಾತಂತ್ರ್ಯ ಹೋರಾಟ ಮತ್ತು ಭಾರತೀಯ ಇತಿಹಾಸದ ನಾಯಕರ ಬಗೆಗಿನ ಕಥೆಗಳುಳ್ಳ 75 ಕಂತುಗಳ ಧಾರಾವಾಹಿ ಇದಾಗಿದೆ. ಆಗಸ್ಟ್ 14 ರಿಂದ ಧಾರಾವಾಹಿ ಆರಂಭವಾಗಿದ್ದು, ಒಂಬತ್ತು ಪ್ರಾದೇಶಿಕ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಒರಿಯಾ, ಬೆಂಗಾಲಿ ಮತ್ತು ಅಸ್ಸಾಮಿ ಜೊತೆಗೆ ಇಂಗ್ಲಿಷ್ನಲ್ಲೂ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ: ಗುಜರಾತ್ನ ಭುಜ್ ಭೂಕಂಪನ ಸ್ಮೃತಿ ವನ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ