ETV Bharat / bharat

ಪ್ರಧಾನಿ ಮೋದಿಗೆ ಶಸ್ತ್ರಸಜ್ಜಿತ ಅಪ್‌ಗ್ರೇಡೆಡ್‌ ಕಾರು: ಬೆಲೆ, ವಿಶೇಷತೆ ಹೀಗಿದೆ.. - ಮರ್ಸಿಡಿಸ್ ಮೇಬ್ಯಾಚ್​ S650 ಗಾರ್ಡ್ ವಿಶೇಷತೆ

ಪ್ರಧಾನಿ ಮೋದಿಗೆ ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ಅವರ ಕಾರ​ನ್ನು ಮತ್ತಷ್ಟು ಅಪ್‌ಗ್ರೇಡ್‌ ಮಾಡಲಾಗಿದೆ. ಆ ಕಾರು ಯಾವುದು? ಅದರ ಬೆಲೆ ಎಷ್ಟು? ವಿಶೇಷತೆ ಏನು ಎಂಬೆಲ್ಲಾ ಮಾಹಿತಿ ಇಲ್ಲಿದೆ.

PM Modi Upgrades newest car, Mercedes Maybach S650 Guard specialization, Mercedes Maybach S650 Guard details, ಪ್ರಧಾನಿ ನರೇಂದ್ರ ಮೋದಿಯ ಹೊಸ ಕಾರ್​, ಮರ್ಸಿಡಿಸ್ ಮೇಬ್ಯಾಚ್​ S650 ಗಾರ್ಡ್ ವಿಶೇಷತೆ, ಮರ್ಸಿಡಿಸ್ ಮೇಬ್ಯಾಚ್​ S650 ಗಾರ್ಡ್ ಮಾಹಿತಿ,
ಪ್ರಧಾನಿ ಮೋದಿಯ ಹೊಸ ಕಾರ್
author img

By

Published : Dec 28, 2021, 8:16 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಹೆಚ್ಚಿನ ಭದ್ರತೆ ಒದಗಿಸಲು ಅವರು ಬಳಸುತ್ತಿದ್ದ ಹಳೆಯ ಕಾರ​ನ್ನು ಬದಲಾಯಿಸಲಾಗಿದೆ. ಈಗ ದೇಶದ ಪ್ರಧಾನಿಯ ಹೊಸ ಕಾರು ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್.

ಇತ್ತೀಚೆಗೆ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಾಗತಿಸಲು ಆಗಮಿಸಿದಾಗ ಪ್ರಧಾನಿಯವರ ಹೊಸ ಅತ್ಯಾಧುನಿತ ಶಸ್ತ್ರಸಜ್ಜಿತ ಕಾರು ಗಮನ ಸೆಳೆಯಿತು.

ಮೇಬ್ಯಾಕ್ ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್‌ಗಿಂತ ಈ ಹೊಸ ಕಾರಿನಲ್ಲಿ ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಮೇಬ್ಯಾಕ್ S650 ಗಾರ್ಡ್ ಕಾರು VR10-ಮಟ್ಟದ ರಕ್ಷಣಾ ಕವಚ ಹೊಂದಿದೆ.

ಪ್ರಧಾನಿ ಮೋದಿಯ ಹೊಸ ಕಾರು

ಕಾರಿನ ವಿಶೇಷತೆ:

ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ ಕಾರು ಪ್ರಧಾನಿಗೆ ಅತ್ಯುನ್ನತ ಮಟ್ಟದ ಶಸ್ತ್ರಸಜ್ಜಿತ ರಕ್ಷಣೆ ನೀಡುತ್ತದೆ. ನವೀಕರಿಸಿದ ಕಾರಿನ ಕಿಟಕಿಗಳು ಸಲೂನ್ ಬುಲೆಟ್‌ಗಳನ್ನು ತಡೆದುಕೊಳ್ಳಬಲ್ಲದು. AK-47 ರೈಫಲ್‌ಗಳಿಂದ ನಡೆಯುವ ಆಕ್ರಮಣವನ್ನು ತಡೆದುಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

ಈ ಕಾರು ಸ್ಫೋಟ ನಿರೋಧಕ ವಾಹನ 2010 ರೇಟಿಂಗ್ ಪಡೆಯುತ್ತದೆ. ಕೇವಲ ಎರಡು ಮೀಟರ್ ದೂರದಿಂದ 15 ಕೆ.ಜಿ ಟಿಎನ್‌ಟಿ ಸ್ಫೋಟದಿಂದ ಪ್ರಯಾಣಿಕರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಕಾರಿನ ಕಿಟಕಿಗಳ ಒಳಭಾಗವನ್ನು ಪಾಲಿಕಾರ್ಬೊನೇಟ್ ಲೇಪನದಿಂದ ತಯಾರಿಸಲಾಗಿದೆ. ಇದು ನೇರ ಸ್ಫೋಟದಿಂದ ಪ್ರಯಾಣಿಕರನ್ನು ರಕ್ಷಿಸಲು ಹೆಚ್ಚು ನೆರವಾಗುತ್ತದೆ. ರಾಸಾಯನಿಕ ದಾಳಿಯ ಸಂದರ್ಭದಲ್ಲಿ ಕ್ಯಾಬಿನ್​ನಿಂದಾಗಿ ಪ್ರತ್ಯೇಕ ಗಾಳಿಯ ಪೂರೈಕೆಯನ್ನು ನೀಡುವಂತೆ ಈ ಕಾರನ್ನು ತಯಾರಿಸಲಾಗಿದೆ.

PM Modi Upgrades newest car, Mercedes Maybach S650 Guard specialization, Mercedes Maybach S650 Guard details, ಪ್ರಧಾನಿ ನರೇಂದ್ರ ಮೋದಿಯ ಹೊಸ ಕಾರ್​, ಮರ್ಸಿಡಿಸ್ ಮೇಬ್ಯಾಚ್​ S650 ಗಾರ್ಡ್ ವಿಶೇಷತೆ, ಮರ್ಸಿಡಿಸ್ ಮೇಬ್ಯಾಚ್​ S650 ಗಾರ್ಡ್ ಮಾಹಿತಿ,

6.0-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ನಿಂದ ಕೂಡಿದ್ದು, 516 bhp ಮತ್ತು ಸುಮಾರು 900 Nm ಪೀಕ್ ಟಾರ್ಕ್ ಅನ್ನು ಈ ಕಾರು ಉತ್ಪಾದಿಸುತ್ತದೆ. ಗರಿಷ್ಠ ವೇಗ 160 kmphಗೆ ನಿರ್ಬಂಧಿಸಲಾಗಿದೆ. ಕಾರು ವಿಶೇಷವಾದ ರನ್-ಫ್ಲಾಟ್ ಟೈರ್‌ಗಳನ್ನು ಹೊಂದಿದೆ. ಟೈಯರ್​ಗೆ ಹಾನಿ ಸಂಭವಿಸಿದಾಗ/ಪಂಕ್ಚರ್‌ ಆದ ಸಂದರ್ಭದಲ್ಲಿಯೂ ತ್ವರಿತವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.

ಇದರ ಬೆಲೆ:

ಈ ಕಾರಿನ ಬೆಲೆ 12 ಕೋಟಿ ರೂಪಾಯಿ.

ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಬುಲೆಟ್‌ಪ್ರೂಫ್ ಮಹೀಂದ್ರ ಸ್ಕಾರ್ಪಿಯೊ ಕಾರನ್ನು ರಕ್ಷಣೆಗಾಗಿ ಬಳಸುತ್ತಿದ್ದರು. ತರುವಾಯ, 2014ರಲ್ಲಿ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಿದ ಬಳಿಕ BMW 7 ಸರಣಿಯ ಹೈ-ಸೆಕ್ಯುರಿಟಿ ಆವೃತ್ತಿ ಕಾರು ಬಳಸುತ್ತಿದ್ದರು. ಲ್ಯಾಂಡ್ ರೋವರ್, ರೇಂಜ್ ರೋವರ್ ವೋಗ್ ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್ ಅವರ ಬೆಂಗಾವಲು ಪಡೆಗಳಲ್ಲಿ ಕಾಣಿಸಿಕೊಂಡವು.

ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರು ಈ ವರ್ಷಾರಂಭದಲ್ಲಿ ತಮ್ಮ W221 Mercedes-Benz S600 ಪುಲ್‌ಮ್ಯಾನ್ ಗಾರ್ಡ್‌ ಕಾರಿನಿಂದ ಹೊಸ Mercedes-Benz S-ಕ್ಲಾಸ್ ಪುಲ್‌ಮ್ಯಾನ್ ಮೇಬ್ಯಾಕ್ ಗಾರ್ಡ್‌ಗೆ ಅಪ್‌ಗ್ರೇಡ್ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.