ETV Bharat / bharat

15ನೇ ವಯಸ್ಸಿಗೆ ಪದವಿ ಪಡೆಯಲು ಹೊರಟಿರುವ ಬಾಲಕಿ: ಪ್ರಧಾನಿ ಭೇಟಿಯಾಗಿ ಹೇಳಿದ್ದೇನು ಗೊತ್ತಾ?

ಮಧ್ಯಪ್ರದೇಶದ ತನಿಷ್ಕಾ ಸುಜಿತ್ ಎಂಬ 15 ವರ್ಷದ ಬಾಲಕಿ ಬಿಎ ಪದವಿಯ ಅಂತಿಮ ವರ್ಷದ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೆ.

pm modi told-mp-girl-who-wants-to-become-chief-justice-of-india
15 ನೇ ವಯಸ್ಸಿಗೆ ಪದವಿ ಪಡೆಯಲು ಹೊರಟಿರುವ ಬಾಲಕಿ: ಪ್ರಧಾನಿ ಭೇಟಿ ಮಾಡಿ ಹೇಳಿದ್ದೇನು ಗೊತ್ತಾ?
author img

By

Published : Apr 11, 2023, 7:07 PM IST

ಇಂದೋರ್(ಮಧ್ಯಪ್ರದೇಶ): ಇಂದೋರ್‌ನ ಪ್ರತಿಭಾನ್ವಿತ ವಿದ್ಯಾರ್ಥಿನಿ ತನಿಷ್ಕಾ ಸುಜಿತ್, ಸದ್ಯ ಈಗ ಅವರು ತಮ್ಮ 15 ನೇ ವಯಸ್ಸಿಗೆ ಬ್ಯಾಚುಲರ್ ಆಫ್ ಆರ್ಟ್ಸ್ (BA) ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಲು ಸಿದ್ಧರಾಗಿದ್ದಾರೆ ಮತ್ತು ಅವರು ಮುಂದೆ ಕಾನೂನು ಪದವಿ ಪಡೆದು ದೇಶದ ಮುಖ್ಯ ನ್ಯಾಯಮೂರ್ತಿಯಾಗುವ ಗುರಿ ಹೊಂದಿದ್ದಾರೆ.

2020 ರಲ್ಲಿ COVID-19 ಸಂದರ್ಭದಲ್ಲಿ ತನ್ನ ತಂದೆ ಮತ್ತು ಅಜ್ಜನನ್ನು ಕಳೆದುಕೊಂಡ ಹದಿಹರೆಯದ ಹುಡುಗಿ ತನಿಷ್ಕಾ ಸುಜಿತ್, ಕೆಲವು ದಿನಗಳ ಹಿಂದೆ ಭೋಪಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತನ್ನ ಭೇಟಿ ಮತ್ತು ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಪ್ರಧಾನಿ ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ಹೇಳಿಕೊಂಡಿದ್ದಾರೆ.

ಇಂದೋರ್‌ನ ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿರುವ ಸುಜಿತ್ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಏಪ್ರಿಲ್ 19 ರಿಂದ 28 ರವರೆಗೆ ನಡೆಯಲಿರುವ ತನ್ನ ಬಿಎ (ಮನೋವಿಜ್ಞಾನ) ಅಂತಿಮ ವರ್ಷದ ಪರೀಕ್ಷೆಗಳಿಗೆ ಹಾಜರಾಗುತ್ತಿರುವುದಾಗಿ ತಿಳಿಸಿದ್ದಾರೆ. ಅವರು ತಮ್ಮ 13 ನೇ ವಯಸ್ಸಿನಲ್ಲಿಯೇ 12 ನೇ ತರಗತಿ ಪರೀಕ್ಷೆಗಳನ್ನು ತೇರ್ಗಡೆ ಹೊಂದಿದ್ದರು.

ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥೆ ರೇಖಾ ಆಚಾರ್ಯ ಮಾತನಾಡಿ, ತನಿಷ್ಕಾ ಸುಜಿತ್‌ ಅವರಿಗೆ 13ನೇ ವಯಸ್ಸಿಗೆ ಬಿಎ ಮನಃಶಾಸ್ತ್ರ ವಿಷಯದಲ್ಲಿ ಮೊದಲ ವರ್ಷ ಪ್ರವೇಶ ನೀಡಲಾಯಿತು. ಏಕೆಂದರೆ ವಿಶ್ವವಿದ್ಯಾನಿಲಯವು ವಿಶೇಷವಾಗಿ ಆಕೆಗೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು. ಇನ್ನು ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನಕ್ಕಾಗಿ ಏಪ್ರಿಲ್ 1 ರಂದು ರಾಜ್ಯದ ರಾಜಧಾನಿ ಭೋಪಾಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ತನಿಷ್ಕಾ ಸುಜಿತ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

ಈ ಕುರಿತು ತನಿಷ್ಕಾ ಸುಜಿತ್ ಮಾತನಾಡಿ, ನಾನು ಬಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅಮೆರಿಕದಲ್ಲಿ ಕಾನೂನು ಪದವಿಯನ್ನು ಪಡೆಯಲು ಬಯಸಿದ್ದೇನೆ ಮತ್ತು ಕೆಲವು ದಿನ ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಕನಸು ಕಂಡಿದ್ದೇನೆ ಎಂದು ಪ್ರಧಾನಿಗೆ ತಿಳಿಸಿದ್ದೆ ಎಂದರು. ನನ್ನ ಗುರಿಯ ಬಗ್ಗೆ ತಿಳಿದ ಪ್ರಧಾನಿ, ಸುಪ್ರೀಂಕೋರ್ಟ್‌ಗೆ ಹೋಗಿ ಅಲ್ಲಿನ ವಕೀಲರ ವಾದಗಳನ್ನು ವೀಕ್ಷಿಸುವಂತೆ ಸಲಹೆ ನೀಡಿದರು. ಅದು ನನ್ನ ಗುರಿಯನ್ನು ಸಾಧಿಸಲು ಪ್ರೇರಣೆ ಒದಗಿಸಿದೆ. ಪ್ರಧಾನಿಯವರನ್ನು ಭೇಟಿಯಾಗಿಬೇಕೆಂಬ ನನ್ನ ಕನಸು ಈ ಮೂಲಕ ನನಸಾಯಿತು ಎಂದು ಅವರು ಹೇಳಿದರು.

ಆಕೆಯ ತಾಯಿ ಅನುಭಾ ಮಾತನಾಡಿ, ನನ್ನ ಪತಿ ಮತ್ತು ಮಾವ 2020 ರಲ್ಲಿ ಕರೋನವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ನಾನು ನನ್ನ ಮಗಳಿಗೋಸ್ಕರ ಹೋರಾಟ ಮಾಡಿದೆ ಮತ್ತು ದುಃಖವನ್ನು ಭರಿಸಿದೆ. ನನ್ನ ಮಗಳ ಭವಿಷ್ಯದ ಹಿತದೃಷ್ಟಿಯಿಂದ ಅವಳ ಅಧ್ಯಯನವನ್ನು ನೋಡಿಕೊಳ್ಳಲು ಹೋರಾಡುವೆ ಎಂದು ಅವರು ಇದೇ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡರು.

ಇದನ್ನೂ ಓದಿ:ಅಚ್ಚರಿಯಾದರೂ ಇದು ಸತ್ಯ.. 14 ದಿನದ ಮಗು ಗರ್ಭಿಣಿ: ಮೂರು ಭ್ರೂಣಗಳನ್ನು ನೋಡಿ ಬೆಚ್ಚಿಬಿದ್ದ BHU ವೈದ್ಯರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.