ನವದೆಹಲಿ: 100 ಕೋಟಿ ಡೋಸ್ ಕೋವಿಡ್ ವ್ಯಾಕ್ಸಿನೇಷ(COVID Vaccination)ನ್ಗೆ ಭಾರತ ಸಾಕ್ಷಿಯಾದ ಬೆನ್ನಲ್ಲೇ, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಏಳು ಭಾರತೀಯ ಕೋವಿಡ್ ಲಸಿಕಾ ತಯಾರಕರನ್ನು ಭೇಟಿ ಮಾಡಲಿದ್ದಾರೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ ರೆಡ್ಡಿ ಲ್ಯಾಬೋರೇಟರೀಸ್, ಝೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಗೆನ್ನೋವಾ ಬಯೋಫಾರ್ಮಾ ಮತ್ತು ಪ್ಯಾನೇಸಿಯಾ ಬಯೋಟೆಕ್ - ಈ 7 ಕಂಪನಿಗಳ ಮುಖ್ಯಸ್ಥರೊಂದಿಗೆ ಪಿಎಂ ಮೋದಿ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಕೇವಲ 29 ಕೋಟಿ ಜನರಿಗೆ ಮಾತ್ರ 2 ಡೋಸ್ ಲಸಿಕೆ ನೀಡಲಾಗಿದೆ: ಸಿದ್ದರಾಮಯ್ಯ
ಲಸಿಕೆ ಪಡೆಯಲು ಅರ್ಹರಾದ ಉಳಿದ ಜನರಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ಹಾಕುವ ಮಾರ್ಗಗಳ ಬಗ್ಗೆ ಒತ್ತು ನೀಡುವ ಕುರಿತು ಹಾಗೂ "ಎಲ್ಲರಿಗೂ ಲಸಿಕೆ" ಎಂಬ ಮಂತ್ರದ ಭಾಗವಾಗಿ ಅವಶ್ಯಕತೆ ಇರುವ ಇತರ ದೇಶಗಳಿಗೂ ಲಸಿಕೆ ವಿತರಿಸಲು ಸಹಾಯ ಮಾಡುವ ಕುರಿತು ಸಭೆಯಲ್ಲಿ ಮೋದಿ ಚರ್ಚಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜನವರಿ 26 ರಂದು ದೇಶಾದ್ಯಂತ ಕೊರೊನಾ ಲಸಿಕಾಭಿಯಾನ ಆರಂಭಿಸಲಾಗಿದ್ದು, ಅಕ್ಟೋಬರ್ 21 ರಂದು 100 ಕೋಟಿ ಡೋಸ್ ದಾಟುವಲ್ಲಿ ಭಾರತ ಯಶಸ್ವಿಯಾಗಿದೆ. ಈ ಪೈಕಿ ಶೇ.74ರಷ್ಟು ಜನರು ಮೊದಲ ಡೋಸ್ ಹಾಗೂ ಶೇ.31 ಮಂದಿ ಎರಡೂ ಡೋಸ್ ಪಡೆದುಕೊಂಡಿದ್ದಾರೆ.