ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಕಛ್ಗೆ ಇಂದು ಭೇಟಿ ನೀಡಲಿದ್ದು, ಗುಜರಾತ್‌ನ ಸಿಖ್ ರೈತರನ್ನು ಭೇಟಿಯಾಗಲಿದ್ದಾರೆ.
![PM Modi to lay foundation of Renewable Energy Generation Park today](https://etvbharatimages.akamaized.net/etvbharat/prod-images/9880957_pm.jpeg)
ಕೆಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲು ಗುಜರಾತ್‌ನ ಕಛ್ಗೆ ಪ್ರಧಾನಿ ಭೇಟಿ ನೀಡಲಿದ್ದು, ಕಛ್ನಲ್ಲಿರುವ ಧಾರ್ಡೊದ ರೈತರೊಂದಿಗೆ ಸಂವಹನ ನಡೆಸಲಿದ್ದಾರೆ. ಮುಖ್ಯ ಕಾರ್ಯಕ್ರಮದ ಮೊದಲು, ಕಛ್ ಜಿಲ್ಲೆಯ ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಇಂಡೋ-ಪಾಕ್ ಗಡಿಯ ಸಮೀಪವಿರುವ ಪ್ರದೇಶಗಳಲ್ಲಿ ನೆಲೆಸಿದ ಸಿಖ್ ರೈತರನ್ನು ಪ್ರಧಾನಮಂತ್ರಿಯೊಂದಿಗೆ ಸಂವಹನ ನಡೆಸಲು ಆಹ್ವಾನಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮಾಹಿತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ಭೇಟಿ ಹಿನ್ನೆಲೆ ಕಛ್ನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ರಾಜ್ಯ ಮಾಹಿತಿ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಇಂಡೋ-ಪಾಕ್ ಗಡಿಯ ಸಮೀಪವಿರುವ ಸಿಖ್ ರೈತರನ್ನು ಪ್ರಧಾನ ಮಂತ್ರಿಯೊಂದಿಗೆ ಸಂವಹನ ನಡೆಸಲು ಆಹ್ವಾನಿಸಲಾಗಿದೆ. ಕಛ್ ಜಿಲ್ಲೆಯ ಲಖಪತ್ ತಾಲೂಕಿನಲ್ಲಿ ಮತ್ತು ಸುತ್ತಮುತ್ತ ಸುಮಾರು 5,000 ಸಿಖ್ ಕುಟುಂಬಗಳು ವಾಸಿಸುತ್ತಿವೆ. ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಸಾವಿರಾರು ರೈತರು ಕಳೆದ 19 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ ಪಂಜಾಬ್ ರೈತರು ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಸಿಖ್ ರೈತರೊಂದಿಗಿನ ಮೋದಿಯ ಚರ್ಚೆ ಭಾರಿ ಕುತೂಹಲ ಮೂಡಿಸಿದೆ.
ಕಛ್ನಲ್ಲಿ ಇಂದಿನ ಪ್ರಧಾನಿ ಮೋದಿ ಕಾರ್ಯಕ್ರಮಗಳು:
ಗಡಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರಂಭವಾಗಲಿರೋ ಹಲವಾರು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲು ಮೋದಿ ಕಛ್ಗೆ ತೆರಳಿದ್ದಾರೆ. ಈ ಯೋಜನೆಗಳಲ್ಲಿ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್, ಸೌರಶಕ್ತಿ ಉತ್ಪಾದನಾ ಘಟಕ ಹಾಗೂ ಶುಷ್ಕ ಹಾಲು ಸಂಗ್ರಹಣಾ ಘಟಕ ಆರಂಭ ಯೋಜನೆ ಕೂಡ ಸೇರಿವೆ.
30 ಗಿಗಾವಾಟ್ (ಜಿಡಬ್ಲ್ಯೂ) ಉತ್ಪಾದನಾ ಸಾಮರ್ಥ್ಯದೊಂದಿಗೆ ರಾಷ್ಟ್ರದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಉದ್ಯಾನವನ ಆರಂಭಗೊಳ್ಳಲಿದೆ. ನವೀಕರಿಸಬಹುದಾದ ಎನರ್ಜಿ ಪಾರ್ಕ್ 72,600 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.
ಮಾಂಡ್ವಿ ತಾಲೂಕಿನ ಗುಂಡಿಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮುದ್ರ ನೀರಿನ ಡಸಲಿನೀಕರಣ ಘಟಕದ ಅಡಿಪಾಯ ಹಾಕಲಿದ್ದಾರೆ. ಈ ಡಸಲಿನೀಕರಣ ಘಟಕವು ಕಛ್ನ ನಾಲ್ಕು ತಾಲೂಕುಗಳಿಗೆ ದೀರ್ಘಕಾಲಿಕ ಕುಡಿಯುವ ನೀರಿನ ಮೂಲವಾಗಲಿದೆ. ಡಸಲಿನೀಕರಣ ಘಟಕವು ಪ್ರತಿದಿನ 100 ಮಿಲಿಯನ್ ಲೀಟರ್ ಕುಡಿಯುವ ನೀರನ್ನು ಉತ್ಪಾದಿಸಲಿದೆ.
ಇದನ್ನೂ ಓದಿ:ಅಮೆರಿಕದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ನ್ಯೂಯಾರ್ಕ್ ನರ್ಸ್