ETV Bharat / bharat

ಡಿಜಿಟಲ್ ಪಾವತಿ ವಿಧಾನ ಇ-ರುಪಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ - ಇಂಟರ್ನೆಟ್ ಬ್ಯಾಂಕಿಂಗ್

ಡಿಜಿಟಲ್ ಅಭಿಯಾನಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪ್ರಧಾನ ಮಂತ್ರಿ ಮೋದಿ ನೇತೃತ್ವದ ಸರ್ಕಾರ, ಇದೀಗ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಡಿಜಿಟಲ್ ಪಾವತಿ ಪರಿಹಾರ ಇ-ರುಪಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ.

PM modi
ಪ್ರಧಾನಿ ಮೋದಿ
author img

By

Published : Aug 2, 2021, 10:42 AM IST

ನವದೆಹಲಿ: ಡಿಜಿಟಲ್ ಪಾವತಿ ಪರಿಹಾರ ಇ-ರುಪಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಡಿಜಿಟಲ್ ಅಭಿಯಾನಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪ್ರಧಾನ ಮಂತ್ರಿ ಮೋದಿ ನೇತೃತ್ವದ ಸರ್ಕಾರ, ನಿರ್ದಿಷ್ಟ ಫಲಾನುಭವಿಗಳಿಗೆ ಇದರ ಲಾಭ ತಲುಪಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಲು ಈ ಡಿಜಿಟಲ್ ಪಾವತಿ ಸೂಕ್ತ ಕ್ರಮ ಎಂದು ಹೇಳಿದೆ.

  • Digital technology is transforming lives in a major way and is furthering ‘Ease of Living.’ At 4:30 PM tomorrow, 2nd August, will launch e-RUPI, a futuristic digital payment solution which offers several benefits for its users. https://t.co/UpLgtBl1K3

    — Narendra Modi (@narendramodi) August 1, 2021 " class="align-text-top noRightClick twitterSection" data=" ">

ಇ-ರುಪಿ ಎಂದರೇನು, ಕಾರ್ಯ ವಿಧಾನ ಹೇಗೆ?:

ಇ-ರುಪಿ ನಗದುರಹಿತ ಮತ್ತು ಸಂಪರ್ಕರಹಿತ ಡಿಜಿಟಲ್ ಪಾವತಿ ವಿಧಾನ. ಕ್ಯು ಆರ್ ಕೋಡ್ ಅಥವಾ ಎಸ್​ಎಂಎಸ್ ಆಧಾರಿತ ಇ-ವೋಚರ್ ಫಲಾನುಭವಿಗಳ ಮೊಬೈಲ್​ಗೆ ಬರುತ್ತದೆ. ಈ ತಡೆರಹಿತ ಏಕಕಾಲದ ಪಾವತಿ ಕಾರ್ಯವಿಧಾನವು ಬಳಕೆದಾರರ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ವೋಚರ್ ಅನ್ನು ರಿಡೀಮ್ ಮಾಡಲು ಅವಕಾಶ ಕಲ್ಪಿಸುತ್ತದೆ.

ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಇದನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ತನ್ನ ಯುಪಿಐ ವೇದಿಕೆಯಲ್ಲಿ ಅಭಿವೃದ್ಧಿಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.