ನವದೆಹಲಿ: ಕೋವಿಡ್ ಫ್ರಂಟ್ಲೈನ್ ವಾರಿಯರ್ಸ್ ನೆರವಿಗಾಗಿ ಎಲ್ಲ 26 ರಾಜ್ಯಗಳಲ್ಲೂ ‘ಕಸ್ಟಮೈಸ್ಡ್ ಕ್ಯಾಶ್ ಕೋರ್ಸ್’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಜೂನ್ 18ರಂದು 111 ತರಬೇತಿ ಕೇಂದ್ರಗಳಲ್ಲಿ ವರ್ಚುಯಲ್ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕೋವಿಡ್ ವಾರಿಯರ್ಸ್ಗಳಿಗೆ ನೆರವಾಗಲು ನಿರ್ಧರಿಸಿದ್ದಾರೆ.
ಈ ಕಾರ್ಯಕ್ರಮವು ದೇಶಾದ್ಯಂತ 1 ಲಕ್ಷ ಕೋವಿಡ್ ವಾರಿಯರ್ಸ್ಗಳ ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಯೋಜನೆ ಅಡಿ 6 ಆಯ್ದ ಉದ್ಯೋಗಗಳಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ಹೋಮ್ ಕೇರ್ ಸಪೋರ್ಟ್, ಬೇಸಿಕ್ ಕೇರ್ ಸಪೋರ್ಟ್, ಸಡ್ವಾನ್ಡ್ಸ್ ಕೇರ್ ಸಪೋರ್ಟ್, ತುರ್ತು ನಿಗಾ ಮತ್ತು ಮೆಡಿಕಲ್ ಇಕ್ವಿಪ್ಮೆಂಟ್ ಸಪೋರ್ಟ್ ಕಾರ್ಯದಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ.
ಇದರಿಂದಾಗಿ ಪ್ರಸ್ತುತ ಕೋವಿಡ್ ಅಲ್ಲದೇ ಇತರ ತುರ್ತು ಸಂದರ್ಭದಲ್ಲೂ ವಾರಿಯರ್ಸ್ಗಳ ಕಾರ್ಯಕ್ಷಮತೆ ಹೆಚ್ಚಿಸಲು ಮುಂದಾಗಲಾಗಿದೆ.
ಇದನ್ನೂ ಓದಿ: ರಾಮಮಂದಿರದ ಭ್ರಷ್ಟ ಸಿಬ್ಬಂದಿಯನ್ನು ತೆಗೆದು ಹಾಕಿ : ಪ್ರಧಾನಿ, ರಾಷ್ಟ್ರಪತಿಗೆ ಮಹಂತ್ ಧರಂ ದಾಸ್ ಒತ್ತಾಯ