ಉಜ್ಜಯಿನಿ (ಮಧ್ಯಪ್ರದೇಶ): ಕಾಶಿ ವಿಶ್ವನಾಥನ ಕಾರಿಡಾರ್ ನಿರ್ಮಾಣದ ಮಾದರಿ ರೂಪಿಸಲಾದ ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಉಜ್ಜಯಿನಿಯ ಮಹಾಕಾಲ ದೇವಾಲಯ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಲಿದ್ದಾರೆ.
ಮಧ್ಯಪ್ರದೇಶದಲ್ಲಿರುವ ಈ ಶಿವನ ದೇವಾಲಯವು ದಕ್ಷಿಣಾಭಿಮುಖವಾಗಿದ್ದುದೆ. ಉಜ್ಜಯಿನಿಯ ಮಹಾಕಾಲ ಶಿವನ ದರ್ಶನ ಪಡೆಯಲು ದೇಶ ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಪ್ರಖ್ಯಾತ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
![PM Modi to inaugurate newly built Mahakaal Corridor today](https://etvbharatimages.akamaized.net/etvbharat/prod-images/16610528_news.jpg)
ಉದ್ಘಾಟನೆಯ ಬಳಿಕ ಅಕ್ಟೋಬರ್ 12 ರಿಂದ ಕಾರಿಡಾರ್ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಮಹಾಕಾಲ ಕಾರಿಡಾರ್ ಶಿವನ ಎಲ್ಲ ಸ್ವರೂಪಗಳ ಮಾಹಿತಿ ನೀಡಲಿದೆ. ದೇಶ ಮತ್ತು ವಿದೇಶಗಳಿಂದ ಭೇಟಿ ನೀಡುವ ಭಕ್ತರು ಶಿವನ ವಿವಿಧ ಅವತಾರಗಳನ್ನು ಮತ್ತು ಸನಾತನ ಧರ್ಮ ಮತ್ತು ಪುರಾಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.
![PM Modi to inaugurate newly built Mahakaal Corridor today](https://etvbharatimages.akamaized.net/etvbharat/prod-images/16610528_news1.jpg)
ಮಹಾಕಾಲ ಕಾರಿಡಾರ್, ಕಾಶಿ ವಿಶ್ವನಾಥ ಕಾರಿಡಾರ್‌ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಭಗವಂತನ ವಿವಿಧ ಅವತಾರಗಳು ಮತ್ತು ಆತನಿಗೆ ಸಂಬಂಧಿಸಿದ ಪುರಾಣಗಳನ್ನು ಈ ಸಂಕೀರ್ಣದಲ್ಲಿ ಭಕ್ತರು ಕಾಣಬಹುದಾಗಿದೆ. ಕಾರಿಡಾರ್ ಪೂರ್ಣ ವೀಕ್ಷಣೆಗೆ ಹಲವು ಗಂಟೆಗಳು ಬೇಕಾಗುತ್ತವೆ. ಉಜ್ಜಯಿನಿಯ ಹೊಸ ಕಾರಿಡಾರ್ ಮಹಾಕಾಳೇಶ್ವರ ವಾಟಿಕಾ, ಮಹಾಕಾಳೇಶ್ವರ ಮಾರ್ಗ, ಶಿವ ಅವತಾರ ವಾಟಿಕಾ, ಪ್ರವಚನ ಸಭಾಂಗಣ, ಗಣೇಶ ವಿದ್ಯಾಲಯ ಸಂಕೀರ್ಣ, ರುದ್ರಸಾಗರ ನದಿಯ ಮುಂಭಾಗದ ಅಭಿವೃದ್ಧಿ, ಧರ್ಮಶಾಲಾಗಳು ಮತ್ತು ಪಾರ್ಕಿಂಗ್ ಸೌಲಭ್ಯಗಳನ್ನು ಹೊಂದಿದೆ.
ಓದಿ: 'ಕಾಶಿ ವಿಶ್ವನಾಥ ಧಾಮ' ದೇಶದ ಸಂಸ್ಕೃತಿ, ಪ್ರಾಚೀನ ಇತಿಹಾಸಕ್ಕೆ ಸಾಕ್ಷಿ - ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಮಾತು