ETV Bharat / bharat

ಇಂದು ಸಂಸದರ ಬಹು ಅಂತಸ್ತಿನ ವಸತಿ ಸಮುಚ್ಛಯ ಉದ್ಘಾಟಿಸಲಿರುವ ಪಿಎಂ ಮೋದಿ - ಇಂದು ಸಂಸದರ ಬಹು ಅಂತಸ್ತಿನ ವಸತಿ ಸಮುಚ್ಛಯ ಉದ್ಘಾಟಿಸಲಿರುವ ಪಿಎಂ ಮೋದಿ

ನವದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಬಹು ಅಂತಸ್ತಿನ ವಸತಿ ಸಮುಚ್ಛಯ ಉದ್ಘಾಟಿಸಲಿದ್ದಾರೆ. ಸುಮಾರು 80 ವರ್ಷಗಳಷ್ಟು ಹಳೆಯದಾದ ಎಂಟು ಬಂಗಲೆಗಳನ್ನು ಮರು ಅಭಿವೃದ್ಧಿಗೊಳಿಸಿ ಹೊಸದಾಗಿ 76 ಫ್ಲಾಟ್​ಗಳನ್ನು ನಿರ್ಮಿಸಲಾಗಿದೆ.

ಸಂಸದರ ಬಹು ಅಂತಸ್ತಿನ ವಸತಿ ಸಮುಚ್ಛಯ ಉದ್ಘಾಟಿಸಲಿರುವ ಪಿಎಂ ಮೋದಿ

author img

By

Published : Nov 23, 2020, 10:19 AM IST

ನವದೆಹಲಿ: ನವದೆಹಲಿಯ ಡಾ. ಬಿ.ಡಿ. ಮಾರ್ಗ್​ನಲ್ಲಿ ಸಂಸದರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಛಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಪಾಲ್ಗೊಳ್ಳಲಿದ್ದಾರೆ.

ಸುಮಾರು 80 ವರ್ಷಗಳಷ್ಟು ಹಳೆಯದಾದ ಎಂಟು ಬಂಗಲೆಗಳನ್ನು ಮರು ಅಭಿವೃದ್ಧಿಗೊಳಿಸಿ ಹೊಸದಾಗಿ 76 ಫ್ಲಾಟ್​ಗಳನ್ನು ನಿರ್ಮಿಸಲಾಗಿದೆ. ಈ ಫ್ಲಾಟ್​ಗಳ ನಿರ್ಮಾಣ ಕಾರ್ಯಕ್ಕೆ ಬಿಡುಗಡೆಯಾಗಿದ್ದ ಮೊತ್ತದಲ್ಲಿ ಶೇ.14ರಷ್ಟು ಉಳಿತಾಯ ಮಾಡಲಾಗಿದೆ. ಕೋವಿಡ್-19 ನಡುವೆಯೂ ಹೆಚ್ಚು ಸಮಯ ತೆಗೆದುಕೊಳ್ಳದೆ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಈ ಕಟ್ಟಡದಲ್ಲಿ ಹಲವು ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದ್ದು, ನಿರ್ಮಾಣ ಕಾರ್ಯಕ್ಕೆ ಬಳಸಿರುವ ಇಟ್ಟಿಗೆಗಳು ಬೂದಿ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ಮಾಡಲ್ಪಟ್ಟಿವೆ. ಡಬಲ್ ಗೇಜ್ ಇರುವ ಕಿಟಕಿಗಳಿಗೆ ಥರ್ಮಲ್ ಇನ್ಸುಲೇಶನ್ ಅಳವಡಿಸಲಾಗಿದೆ. ಇಂಧನ ಉಳಿತಾಯ ಮಾಡುವ ಎಲ್​ಇಡಿ ದೀಪದ ವ್ಯವಸ್ಥೆ, ದೀಪಗಳ ನಿಯಂತ್ರಣಕ್ಕಾಗಿ ವಾಸ್ತವ್ಯ ಆಧಾರಿತ ಸೆನ್ಸಾರ್​ಗಳು, ಕಡಿಮೆ ವಿದ್ಯುತ್ ಬಳಸುವ ವಿಆರ್​ವಿ ವ್ಯವಸ್ಥೆ ಹೊಂದಿರುವ ಹವಾನಿಯಂತ್ರಣ, ನೀರು ಉಳಿತಾಯಕ್ಕೆ ಹಲವು ಕ್ರಮಗಳು, ಮಳೆ ನೀರು ಕೊಯ್ಲು ವ್ಯವಸ್ಥೆ ಮತ್ತು ಮೇಲ್ಛಾವಣಿಯಲ್ಲಿ ಸೌರ ಘಟಕ ಮತ್ತಿತರ ಪರಿಸರಸ್ನೇಹಿ ಕ್ರಮಗಳನ್ನು ಈ ಕಟ್ಟಡದಲ್ಲಿ ಅಳವಡಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.