ETV Bharat / bharat

ಕರ್ತವ್ಯ ಪಥ್ ಇಂದು ಉದ್ಘಾಟನೆ: ಕಾಲಗರ್ಭ ಸೇರಲಿದೆ ರಾಜಪಥ್ ಹೆಸರು

ಈ ಹಿಂದೆ ರಾಜಪಥ ಎಂದು ಕರೆಯಲಾಗುತ್ತಿದ್ದ ರಸ್ತೆಯ ಹೆಸರನ್ನು ಈಗ ಕರ್ತವ್ಯ ಪಥ್ ಎಂದು ಬದಲಾಯಿಸಲಾಗಿದೆ. ಜೊತೆಗೆ ಈ ರಸ್ತೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ನವೀಕೃತ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.

ಕರ್ತವ್ಯ ಪಥ್ ಇಂದು ಉದ್ಘಾಟನೆ: ಕಾಲಗರ್ಭ ಸೇರಲಿದೆ ರಾಜಪಥ್ ಹೆಸರು
PM Modi to inaugurate Kartavya Path today
author img

By

Published : Sep 8, 2022, 11:11 AM IST

Updated : Sep 8, 2022, 11:30 AM IST

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ 7 ಗಂಟೆಗೆ ಇಲ್ಲಿನ ಇಂಡಿಯಾ ಗೇಟ್ ಬಳಿಯ ಕರ್ತವ್ಯ ಪಥ್ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಮಾರ್ಗವನ್ನು ಹಿಂದೆ ರಾಜಪಥ್ ಎಂದು ಕರೆಯಲಾಗುತ್ತಿತ್ತು.

ಕಳೆದ ಹಲವಾರು ವರ್ಷಗಳಿಂದ ರಾಜಪಥ್ ಮತ್ತು ಸೆಂಟ್ರಲ್ ವಿಸ್ತಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್​ನಿಂದಾಗಿ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ, ಕುಡಿಯುವ ನೀರು, ರಸ್ತೆ ಸೌಲಭ್ಯ ಮತ್ತು ಪಾರ್ಕಿಂಗ್ ಸೌಲಭ್ಯವಿರಲಿಲ್ಲ. ಅಲ್ಲದೆ ದಾರಿ ಫಲಕಗಳು ಹಾಗೂ ಮಾರ್ಗಸೂಚಿಗಳು ಸಹ ಇರಲಿಲ್ಲ.

ಕರ್ತವ್ಯ ಪಥ್ ಇಂದು ಉದ್ಘಾಟನೆ

ಆದರೆ ಈಗ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಇದಕ್ಕೆ ಕರ್ತವ್ಯ ಪಥ್ ಎಂದು ನಾಮಕರಣ ಮಾಡಲಾಗಿದೆ. ಸುಂದರಗೊಳಿಸಿದ ಲ್ಯಾಂಡ್​ಸ್ಕೇಪ್, ಕಾಲ್ನಡಿಗೆ ಪಥ, ಯೊಂದಿಗೆ ಹುಲ್ಲುಹಾಸುಗಳು, ಹಸಿರು ಪಟ್ಟಿಗಳು, ನವೀಕರಿಸಿದ ಕಾಲುವೆಗಳು, ಹೊಸ ಸೌಕರ್ಯ ಬ್ಲಾಕ್‌ಗಳು, ಸುಧಾರಿತ ಮಾರ್ಗಸೂಚಿ ಫಲಕಗಳು ಮತ್ತು ಮಾರಾಟ ಕಿಯೋಸ್ಕ್‌ಗಳನ್ನು ಈಗ ಇಲ್ಲಿ ಅಳವಡಿಸಲಾಗಿದೆ. ಹೊಸ ಪಾದಚಾರಿ ಅಂಡರ್‌ಪಾಸ್‌ಗಳು, ಸುಧಾರಿತ ಪಾರ್ಕಿಂಗ್ ಸ್ಥಳ, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕರಿಸಿದ ರಾತ್ರಿ ದೀಪಗಳು ಸಾರ್ವಜನಿಕರಿಗೆ ಉತ್ತಮ ಅನುಭವ ನೀಡುತ್ತವೆ.

ಸಾರ್ವಜನಿಕ ಸಂಚಾರದ ಮೇಲೆ ಕನಿಷ್ಠ ನಿರ್ಬಂಧಗಳೊಂದಿಗೆ ಗಣರಾಜ್ಯೋತ್ಸವದ ಪರೇಡ್ ಮತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯ ಕಂಡುಬಂದಿತ್ತು. ಇದನ್ನು ಗಮನದಲ್ಲಿರಿಕೊಂಡು ಈ ಪ್ರದೇಶದ ಪುನರಾಭಿವೃದ್ಧಿ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಔರಂಗಾಬಾದ್​​ಗೆ ಸಂಭಾಜಿನಗರ, ಉಸ್ಮಾನಾಬಾದ್​ಗೆ ಧರಶಿವ ಎಂದು ಮರು ನಾಮಕರಣ...

Last Updated : Sep 8, 2022, 11:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.