ನವದೆಹಲಿ: ಮೇಕ್ ಇನ್ ಇಂಡಿಯಾದ ಭಾಗವಾಗಿ ರಕ್ಷಣಾ ಕ್ಷೇತ್ರಕ್ಕೆ ಅರ್ಜುನ್ ಮಾರ್ಕ್-1ಎ ಟ್ಯಾಂಕ್ ಅನ್ನು ಭಾನುವಾರ ಸೇನೆಗೆ ಮೋದಿ ಅರ್ಪಿಸಲಿದ್ದಾರೆ.
ಉನ್ನತ ಮಟ್ಟದ ಸಭೆಯಲ್ಲಿ, ರಕ್ಷಣಾ ಸಚಿವಾಲಯವು ಇತ್ತೀಚೆಗೆ 118 ಅರ್ಜುನ್ ಮಾರ್ಕ್-1ಎ ಟ್ಯಾಂಕ್‌ಗಳನ್ನು ಭಾರತೀಯ ಸೈನ್ಯಕ್ಕೆ ಸೇರಿಸುವುದಕ್ಕೆ ನಿರ್ಧಾರ ಮಾಡಿತ್ತು. ಇದು ಸುಮಾರು 8,400 ಕೋಟಿ ರೂ. ಮೌಲ್ಯದ ಯೋಜನೆ ಆಗಿದ್ದು, ಭೂ ಯುದ್ಧದಲ್ಲಿ ಸೇನಾ ಬಲವನ್ನು ಹೆಚ್ಚಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜುನ್ ಟ್ಯಾಂಕ್‌ನ ಇತ್ತೀಚಿನ ಆವೃತ್ತಿಯನ್ನು ಫೆಬ್ರವರಿ 14 ರಂದು ಚೆನ್ನೈನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ಸೇನೆಯೊಂದಿಗೆ ನಿಕಟ ಸಮನ್ವಯದಿಂದ ಡಿಆರ್‌ಡಿಒ ಈ ಟ್ಯಾಂಕ್ ಅನ್ನು ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. ಈ 118 ಟ್ಯಾಂಕ್‌ಗಳು ಮೊದಲ ಬ್ಯಾಚ್‌ನ 124 ಅರ್ಜುನ್ ಟ್ಯಾಂಕ್‌ಗಳ ನೌಕಾಪಡೆಗೆ ಸೇರ್ಪಡೆಗೊಳ್ಳಲಿವೆ. ಇವುಗಳನ್ನು ಈಗಾಗಲೇ ಸೈನ್ಯಕ್ಕೆ ಸೇರಿಸಿಕೊಳ್ಳಲಾಗಿದ್ದು, ಪಾಕಿಸ್ತಾನದ ಗಡಿಯ ಪಶ್ಚಿಮ ಮರುಭೂಮಿಯಲ್ಲಿ ನಿಯೋಜಿಸಲಾಗಿದೆ
ಸೈನ್ಯವು ಟ್ಯಾಂಕ್ ರೆಜಿಮೆಂಟ್ ರಚನೆಗೆ ಅಗತ್ಯವಾದ ಟ್ಯಾಂಕ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದು, ಹಿಂದಿನ ಆದೇಶಕ್ಕಿಂತ ಆರು ಕಡಿಮೆ ಟ್ಯಾಂಕ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಆರ್‌ಡಿಒ ಅರ್ಜುನ್ ಮಾರ್ಕ್-1ಎ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಸಶಸ್ತ್ರ ಪಡೆಗಳಲ್ಲಿನ ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮಟ್ಟವನ್ನು ಹೆಚ್ಚಿಸುವ ಈ ಅಭಿವೃದ್ಧಿ ಯೋಜನೆಗೆ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಡಿಆರ್‌ಡಿಒ ಮುಖ್ಯಸ್ಥ ಡಾ.ಜಿ. ಸತೀಶ್ ರೆಡ್ಡಿ ಸೂಚಿಸಿದ್ದರು.