ಚೆನ್ನೈ (ತಮಿಳುನಾಡು): ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈಗೆ ಭೇಟಿ ನೀಡಿದ್ದರು. ಶನಿವಾರ ತಮ್ಮ ಚೆನ್ನೈ ಭೇಟಿಯ ಕೊನೆಯಲ್ಲಿ ಅವರು ವಿಕಲಚೇತನನಾಗಿರುವ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ತಿರು ಎಸ್. ಮಣಿಕಂದನ್ ಅವರನ್ನು ಭೇಟಿ ಮಾಡಿ ಅವರೊಂದಿಗೆ 'ಸೆಲ್ಫಿ' ತೆಗೆದುಕೊಂಡರು. ಅದನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, "ಒಂದು ವಿಶೇಷ ಸೆಲ್ಫಿ. ಚೆನ್ನೈನಲ್ಲಿ ನಾನು ತಿರು ಎಸ್. ಮಣಿಕಂದನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಈರೋಡ್‌ನ ಹೆಮ್ಮೆಯ ಕಾರ್ಯಕರ್ತರಾಗಿದ್ದು, ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ.
"ವಿಕಲಚೇತನ ವ್ಯಕ್ತಿಯಾದರೂ ಅವರು ತಮ್ಮದೇ ಆದ ಅಂಗಡಿಯನ್ನು ನಡೆಸುತ್ತಾರೆ ಮತ್ತು ಹೆಚ್ಚು ಪ್ರೇರೇಪಿಸುವ ಅಂಶವೆಂದರೆ ಅವರು ತಮ್ಮ ದೈನಂದಿನ ಲಾಭದ ಹೆಚ್ಚಿನ ಭಾಗವನ್ನು ಬಿಜೆಪಿಗೆ ನೀಡುತ್ತಾರೆ. ಮಣಿಕಂದನ್ ನಮ್ಮ ಪಕ್ಷದ ಹೆಮ್ಮೆಯ ಕಾರ್ಯಕರ್ತ. ಅವರಂತಹ ವ್ಯಕ್ತಿಗಳನ್ನು ಹೊಂದಿರುವ ಪಕ್ಷದಲ್ಲಿ ನಾನು ಕಾರ್ಯಕರ್ತರಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಅವರ ಜೀವನ ಪಯಣವು ನಮ್ಮ ಪಕ್ಷ ಮತ್ತು ಸಿದ್ಧಾಂತಕ್ಕೆ ಅವರ ಬದ್ಧತೆಯನ್ನು ಪ್ರೇರೇಪಿಸುತ್ತದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
-
I feel very proud of being a Karyakarta in a Party where we have people like Thiru S. Manikandan. His life journey is inspiring and equally inspiring his commitment to our Party and our ideology. My best wishes to him for his future endeavours. pic.twitter.com/4S6FryHqCq
— Narendra Modi (@narendramodi) April 8, 2023 " class="align-text-top noRightClick twitterSection" data="
">I feel very proud of being a Karyakarta in a Party where we have people like Thiru S. Manikandan. His life journey is inspiring and equally inspiring his commitment to our Party and our ideology. My best wishes to him for his future endeavours. pic.twitter.com/4S6FryHqCq
— Narendra Modi (@narendramodi) April 8, 2023I feel very proud of being a Karyakarta in a Party where we have people like Thiru S. Manikandan. His life journey is inspiring and equally inspiring his commitment to our Party and our ideology. My best wishes to him for his future endeavours. pic.twitter.com/4S6FryHqCq
— Narendra Modi (@narendramodi) April 8, 2023
ವಿವಿಧ ಕಾಮಗಾರಿಗಳಿಗೆ ಚಾಲನೆ: ಶನಿವಾರ ತಮಿಳುನಾಡಿನ ಚೆನ್ನೈನಲ್ಲಿ ಪ್ರಧಾನಿ ಮೋದಿ ಸುಮಾರು 5,200 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನಿನ್ನೆ ಚಾಲನೆ ನೀಡಿದ್ದರು. ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ಸರ್ಕಾರ ಗಡುವುಗಳೊಂದಿಗೆ ಕೆಲಸ ಮಾಡುತ್ತದೆ ಮತ್ತು ಅಂತಿಮ ದಿನಾಂಕದ ಮುಂಚೆಯೇ ಫಲಿತಾಂಶಗಳನ್ನು ನೀಡುತ್ತದೆ ಎಂದರು. ಎರಡು ವಿಷಯಗಳು ಸರ್ಕಾರದ ಸಾಧನೆಗಳನ್ನು ಸಾಧ್ಯವಾಗಿಸಿದೆ. ಅದು ಕೆಲಸದ ಸಂಸ್ಕೃತಿ ಮತ್ತು ದೂರದೃಷ್ಟಿ. ನಮ್ಮ ತೆರಿಗೆದಾರರು ಪಾವತಿಸುವ ಪ್ರತಿ ರೂಪಾಯಿಗೆ ನಾವು ಜವಾಬ್ದಾರರಾಗಿರುತ್ತೇವೆ ಎಂದು ಹೇಳಿದರು.
ಭಾರತ ಒಂದು ಕ್ರಾಂತಿಗೆ ಸಾಕ್ಷಿ: ತಮ್ಮ ಸರ್ಕಾರ ಮೂಲಸೌಕರ್ಯಗಳನ್ನು ಕಾಂಕ್ರೀಟ್, ಇಟ್ಟಿಗೆ ಮತ್ತು ಸಿಮೆಂಟ್ ಎಂದು ನೋಡುವುದಿಲ್ಲ. ಆದರೆ ಸಾಧನೆಗಳೊಂದಿಗೆ ಆಕಾಂಕ್ಷೆಗಳನ್ನು ಸಂಪರ್ಕಿಸುವ ಮಾನವೀಯ ಮುಖವನ್ನು ಹೊಂದಿದೆ ಎಂದು ಅವರು ಹೇಳಿದರು. ಮೂಲಸೌಕರ್ಯವು ಆಕಾಂಕ್ಷೆಗಳನ್ನು ಸಾಧನೆಗಳೊಂದಿಗೆ, ಸಾಧ್ಯತೆಗಳನ್ನು ಹೊಂದಿರುವ ಜನರು ಮತ್ತು ಕನಸುಗಳನ್ನು ವಾಸ್ತವದೊಂದಿಗೆ ಸಂಪರ್ಕಿಸುತ್ತದೆ. ಇದು ಹೊಸ ಭರವಸೆಗಳು, ಹೊಸ ಆಕಾಂಕ್ಷೆಗಳು ಮತ್ತು ಹೊಸ ಆರಂಭಗಳಿಗೆ ಸಮಯವಾಗಿದೆ. ಕೆಲವು ಹೊಸ ಪೀಳಿಗೆಯ ಮೂಲಸೌಕರ್ಯ ಯೋಜನೆಗಳು ಇಂದಿನಿಂದ ಜನರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸುತ್ತವೆ. ಕಳೆದ ಕೆಲವು ವರ್ಷಗಳಲ್ಲಿ, ಮೂಲಸೌಕರ್ಯಗಳ ವಿಷಯದಲ್ಲಿ 'ಭಾರತ ಒಂದು ಕ್ರಾಂತಿ'ಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ತಿಳಿಸಿದರು.
2014ರಲ್ಲಿ ಕೇಂದ್ರದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಭಿವೃದ್ಧಿ ಯೋಜನೆಗಳ ಕಾರ್ಯಗತಗೊಳಿಸುವ ವೇಗದಲ್ಲಿನ ಬದಲಾವಣೆಯ ಅಂಕಿಅಂಶಗಳನ್ನು ಅವರು ಮಂಡಿಸಿದರು. 2014 ರ ಪೂರ್ವದ ಯುಗಕ್ಕೆ ಹೋಲಿಸಿದರೆ ವರ್ಷಕ್ಕೆ ಸೇರಿಸಲಾದ ರಾಷ್ಟ್ರೀಯ ಹೆದ್ದಾರಿಗಳ ಉದ್ದವು ದ್ವಿಗುಣಗೊಂಡಿದೆ. 2014 ರ ಮೊದಲು ಪ್ರತಿ ವರ್ಷ 600 ರೂಟ್ ಕಿ.ಮೀ. ರೈಲು ಮಾರ್ಗಗಳು ವಿದ್ಯುದೀಕರಣಗೊಂಡವು. ಇಂದು ಈ ದರವು ಸುಮಾರು 4,000 ರೂಟ್ ಕಿಮೀಗಳನ್ನು ತಲುಪುತ್ತಿದೆ. 2014 ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳು ಇದ್ದವು. ಆದರೆ 2014ರ ನಂತರ, ಈ ಸಂಖ್ಯೆಯು ಸುಮಾರು 150 ರಷ್ಟಿದೆ" ಎಂದು ಪ್ರಧಾನಿ ಮೋದಿ ವಿವರಿಸಿದರು.
ತಮಿಳುನಾಡಿನ ಉದ್ದದ ಕರಾವಳಿ ವ್ಯಾಪಾರಕ್ಕೆ ಬಹಳ ಮಹತ್ವದ್ದಾಗಿದೆ. ಇಂದು ನಮ್ಮ ಬಂದರುಗಳ ಸಾಮರ್ಥ್ಯ ವರ್ಧನೆಯು 2014 ರ ಹಿಂದಿನ ಯುಗಕ್ಕೆ ಹೋಲಿಸಿದರೆ ಸುಮಾರು ದ್ವಿಗುಣಗೊಂಡಿದೆ. ತಮಿಳುನಾಡಿನ ಅಭಿವೃದ್ಧಿಯು ನಮಗೆ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಇದನ್ನೂ ಓದಿ: ಬಂಡೀಪುರದಲ್ಲಿ ಪ್ರಧಾನಿ.. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ಸಜ್ಜಾದ ಮೋದಿ