ETV Bharat / bharat

ಗುವಾಹಟಿ-ಬಿಕನೇರ್ ರೈಲು ದುರಂತ: 9 ಮಂದಿ ಸಾವು,42ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ - ಗುವಾಹಟಿ-ಬಿಕನೇರ್ ರೈಲು ದುರಂತ

ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಅವಘಡ ಸಂಭವಿಸಿದ್ದು 8 ಮಂದಿ ಸಾವನ್ನಪ್ಪಿ 42ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ರೈಲ್ವೆ ಸಚಿವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

Guwahati-Bikaner train accident
Guwahati-Bikaner train accident
author img

By

Published : Jan 13, 2022, 10:47 PM IST

Updated : Jan 14, 2022, 9:44 AM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಗುವಾಹಟಿ-ಬಿಕನೇರ್ ನಡುವಿನ ಎಕ್ಸ್​ಪ್ರೆಸ್ ರೈಲು ಪಶ್ಚಿಮ ಬಂಗಾಳದ ಜಲ್​ಪೈಗುರಿ ಜಿಲ್ಲೆಯ ದೊಮೊಹಾನಿ ಬಳಿ ಹಳಿ ತಪ್ಪಿದ್ದು, ಘಟನೆಯಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. 42ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿವೆ. ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್​ ವೈಷ್ಣವ್​​ ಅವರಿಗೆ ದೂರವಾಣಿ ಕರೆ ಮಾಡಿ,​ ಮಾಹಿತಿ ಪಡೆದುಕೊಂಡಿದ್ದು ರಕ್ಷಣಾ ಕಾರ್ಯಾಚರಣೆ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

  • I'm leaving for the accident spot. Rescue teams are already there. Ex-gratia has also been announced and we will fulfil all of our duties: Union Railways Minister Ashwini Vaishnaw pic.twitter.com/4GISLXYIzr

    — ANI (@ANI) January 13, 2022 " class="align-text-top noRightClick twitterSection" data=" ">

ಇಂದು ಬೆಳಗ್ಗೆ ಘಟನಾ ಸ್ಥಳಕ್ಕೆ ಖುದ್ದಾಗಿ ರೈಲ್ವೆ ಸಚಿವರು​ ಭೇಟಿ ನೀಡುವುದಾಗಿ ಈಗಾಗಲೇ ತಿಳಿಸಿದ್ದು, ಅಪಘಾತದ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ 200ಕ್ಕೂ ಅಧಿಕ ಬಿಎಸ್ಎಫ್​​ ಸಿಬ್ಬಂದಿ ಉಪಸ್ಥಿತರಿದ್ದು, ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

  • Bikaner-Guwahati Derailment, West Bengal | Over 200 BSF personnel from the nearest camp reached the spot to carry out the rescue operation.

    (Source: BSF) pic.twitter.com/i1OJ9N0Lkv

ಇನ್ನು, ದುರ್ಘಟನೆಯಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂ, ಗಂಭೀರವಾಗಿ ಗಾಯಗೊಂಡಿರುವರಿಗೆ 1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾಗಿರುವವರಿಗೆ 25 ಸಾವಿರ ರೂ. ಪರಿಹಾರ ನೀಡುವುದಾಗಿ ಕೇಂದ್ರ ರೈಲ್ವೆ ಇಲಾಖೆ ಘೋಷಿಸಿದೆ.

ಇದನ್ನೂ ಓದಿ: ಬಿಲ್ಡರ್‌ಗಳಿಗೆ 125 ಕೋಟಿ ರೂ.ವಂಚನೆ ಆರೋಪ; BSF ಉಪ ಕಮಾಂಡೆಂಟ್‌ ಸೇರಿ ನಾಲ್ವರ ಬಂಧನ, 13 ಕೋಟಿ ರೂ.ವಶ

Last Updated : Jan 14, 2022, 9:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.