ETV Bharat / bharat

ಪ್ರಧಾನಿ ಮೋದಿ ಮತ್ತು ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಮಹತ್ವದ ನಡುವೆ ದ್ವಿಪಕ್ಷೀಯ ಮಾತುಕತೆ

ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದ್ವಿಪಕ್ಷೀಯ ಮಾತುಕತೆ ನಡೆಸಿದರು.

PM Modi Saudi Crown Prince
ಪಿಎಂ ಮೋದಿ ಮತ್ತು ಸೌದಿ ಅರೇಬಿಯಾ
author img

By ETV Bharat Karnataka Team

Published : Sep 11, 2023, 2:22 PM IST

ನವದೆಹಲಿ : ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • #WATCH | Crown Prince and Prime Minister of the Kingdom of Saudi Arabia Prince Mohammed bin Salman bin Abdulaziz Al Saud says "I am very glad to be here in India. I want to congratulate India for the G20 Summit...A lot of announcements have been made that will benefit G20… pic.twitter.com/rNz8q0lDAi

    — ANI (@ANI) September 11, 2023 " class="align-text-top noRightClick twitterSection" data=" ">

ಭಾರತಕ್ಕೆ ಮೂರು ದಿನಗಳ ರಾಜ್ಯ ಪ್ರವಾಸಕ್ಕಾಗಿ ನವದೆಹಲಿಗೆ ಆಗಮಿಸಿದ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ವಾರಾಂತ್ಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಇಬ್ಬರು ನಾಯಕರು ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಮೊದಲ ನಾಯಕರ ಸಭೆಯ ಸಹ ಅಧ್ಯಕ್ಷರಾಗಿದ್ದರು. ಈ ವೇಳೆ ರಾಜಕೀಯ, ಭದ್ರತೆ, ರಕ್ಷಣೆ, ವ್ಯಾಪಾರ ಮತ್ತು ಆರ್ಥಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಅನೇಕ ಅಂಶಗಳ ಕುರಿತು ದ್ವಿಪಕ್ಷೀಯ ಸಭೆಯಲ್ಲಿ ಚರ್ಚಿಸಿದ್ದಾರೆ. ಜೊತೆಗೆ, ಇಬ್ಬರೂ ನಾಯಕರು ಪರಸ್ಪರ ಹಿತಾಸಕ್ತಿ ಕಾಯ್ದುಕೊಳ್ಳುವ ಸಲುವಾಗಿ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.

  • #WATCH | Crown Prince and Prime Minister of the Kingdom of Saudi Arabia Prince Mohammed bin Salman bin Abdulaziz Al Saud met Prime Minister Narendra Modi at Hyderabad House in Delhi. pic.twitter.com/QEiLHbIgQY

ಫೆಬ್ರವರಿ 2019 ರಿಂದ ಭಾರತಕ್ಕೆ ಸೌದಿ ಕ್ರೌನ್ ಪ್ರಿನ್ಸ್ ಅವರ ಎರಡನೇ ಭೇಟಿ ಇದಾಗಿದ್ದು, ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ರಂದು ದೆಹಲಿಗೆ ಆಗಮಿಸಿದರು. ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೌದಿ ಅರೇಬಿಯಾದ ಯುವರಾಜನನ್ನು ಔಪಚಾರಿಕವಾಗಿ ಸ್ವಾಗತಿಸಿದರು. ಇಂದು ಪ್ರಧಾನಿ ಮೋದಿಯವರೊಂದಿಗಿನ ದ್ವಿಪಕ್ಷೀಯ ಮಾತುಕತೆ ಸಲುವಾಗಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಿದರು.

ಇದನ್ನೂ ಓದಿ : G 20 presidency : ಬ್ರೆಜಿಲ್​ನಲ್ಲಿ ಮುಂದಿನ ಜಿ20 ಸಭೆ.. ಅಧ್ಯಕ್ಷ ಲುಲಾ ಸಿಲ್ವಾಗೆ ದಂಡ ಹಸ್ತಾಂತರಿಸಿದ ಪ್ರಧಾನಿ ಮೋದಿ

  • #WATCH | Prime Minister Narendra Modi says, "...For India, Saudi Arabia is one of its most important strategic partners. As two large and fast-growing economies of the world, our mutual cooperation is important for peace and stability in the entire region. In our talks, we have… pic.twitter.com/q72iT4rFvU

ಶೃಂಗಸಭೆ ಸಭೆಯಲ್ಲಿ ಭಾರತ, ಯುನೈಟೆಡ್ ಸ್ಟೇಟ್ಸ್, ಸೌದಿ ಅರೇಬಿಯಾ ಮತ್ತು ಯುರೋಪಿಯನ್ ಯೂನಿಯನ್ ಮೆಗಾ 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಶಿಪ್ಪಿಂಗ್ ಮತ್ತು ರೈಲ್ವೆ ಸಂಪರ್ಕ ಕಾರಿಡಾರ್' ಅನ್ನು ಪ್ರಾರಂಭಿಸಲು ಘೋಷಿಸಿವೆ. ಸೌದಿ ಅರೇಬಿಯಾ ರಾಜ್ಯವು 1,75,000 ಭಾರತೀಯರಿಗೆ ವಾರ್ಷಿಕ ಹಜ್ ಯಾತ್ರೆಗೆ ಅನುಕೂಲ ಕಲ್ಪಿಸುತ್ತಿದೆ.

ಇದನ್ನೂ ಓದಿ : G20 : ಉಕ್ರೇನ್​ನಲ್ಲಿ ಶಾಂತಿ ಸ್ಥಾಪನೆಗೆ ಮೆಟ್ಟಿಲಾಗಲಿದೆ ನವದೆಹಲಿ ಘೋಷಣೆ ; EU ವಿಶ್ವಾಸ

  • #WATCH | Prime Minister Narendra Modi and Crown Prince and Prime Minister of the Kingdom of Saudi Arabia Prince Mohammed bin Salman bin Abdulaziz Al Saud sign the minutes of the first meeting of the India-Saudi Strategic Partnership Council held at Hyderabad House in Delhi. pic.twitter.com/DB9B3MBZOA

ಸುದ್ದಿಗಾರರೊಂದಿಗೆ ಮಾತನಾಡಿದ ಸೌದಿ ಅರೇಬಿಯಾ ಪ್ರಿನ್ಸ್, "ಜಿ20 ಸಭೆಯಲ್ಲಿ ಇಡೀ ಜಗತ್ತಿಗೆ ಪ್ರಯೋಜನವಾಗುವಂತಹ ಹಲವಾರು ಘೋಷಣೆಗಳನ್ನು ಮಾಡಲಾಗಿದೆ. ಹಾಗಾಗಿ, ನಾನು ಭಾರತಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತ ಮತ್ತು ಸೌದಿ ಅರೇಬಿಯಾವು ಐತಿಹಾಸಿಕವಾಗಿ ನಿಕಟ ಮತ್ತು ಸ್ನೇಹ ಸಂಬಂಧವನ್ನು ಹೊಂದಿವೆ. ಭವಿಷ್ಯದಲ್ಲಿ ಎರಡೂ ದೇಶಗಳು ಸಹಕಾರದಿಂದ ಕೆಲಸ ಮಾಡಲು ಮುಂದಾಗಿವೆ. ಎರಡೂ ದೇಶಗಳು ಇಂಧನ ಕ್ಷೇತ್ರದಲ್ಲಿ ಬಲವಾದ ಪಾಲುದಾರಿಕೆಯನ್ನು ಹೊಂದಿವೆ" ಎಂದರು.

ಇದನ್ನೂ ಓದಿ : ಭಾರತದಂತಹ ದೇಶ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯನಾದರೆ ಹೆಮ್ಮೆ: ಟರ್ಕಿ ಅಧ್ಯಕ್ಷ ಎರ್ಡೋಗನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.