ETV Bharat / bharat

ಕುತೂಹಲ ಕೆರಳಿಸಿದ ಮೋದಿ ಸಂಪುಟ ಕಸರತ್ತು: ಸುವೇಂದು, ಸಿಂಧಿಯಾಗೆ ಸಿಗುವುದೇ ಕೇಂದ್ರದಲ್ಲಿ ಸ್ಥಾನ? - ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ'

ಈ ಬಾರಿ ಸ್ವತಃ ಪ್ರಧಾನಿ ಮೋದಿಯೇ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ಪರಿಶೀಲನೆ ಮಾಡಿದ್ದಾರೆ. ಈ ಕಾರ್ಯಕ್ಕೆ ಗೃಹ ಸಚಿವ ಅಮಿತ್​​ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪ್ರಧಾನಿಗೆ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.

PM Modi reviewing ministries for possible cabinet expansion
ಸ್ವತಃ ಪ್ರಧಾನಿ ಮೋದಿಯಿಂದಲೇ ಇಲಾಖೆಗಳ ವಿಮರ್ಶೆ
author img

By

Published : Jun 15, 2021, 8:24 AM IST

ನವದೆಹಲಿ: ಪ್ರತೀ ವರ್ಷ ಪ್ರಧಾನಿ ಕಚೇರಿಯಿಂದ (PMO) ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಾಗುತ್ತದೆ. ಈ ರಿಪೋರ್ಟ್​ ಕಾರ್ಡ್​​ನಲ್ಲಿ ಇಲಾಖೆಗಳು ಮತ್ತು ಸಚಿವರಿಗೆ ರ‍್ಯಾಂಕಿಂಗ್‌ ನೀಡಲಾಗುತ್ತದೆ. ಈಗ ಎಲ್ಲಾ ಇಲಾಖೆಗಳ ರ‍್ಯಾಂಕಿಂಗ್ ಪಟ್ಟಿ ಸಿದ್ಧವಾಗಿದ್ದು, ಸಂಪುಟ ಪುನರ್​ರಚನೆಗೆ ಕಾಲ ಕೂಡಿ ಬಂದಿದೆ ಎಂಬ ಮಾಹಿತಿ ದೊರೆತಿದೆ.

ಮೂಲಗಳ ಪ್ರಕಾರ, ಈ ಬಾರಿ ಸ್ವತಃ ಪ್ರಧಾನಿ ಮೋದಿಯವರೇ ಎಲ್ಲಾ ಇಲಾಖೆಗಳ ಪರಿಶೀಲನೆ ಮಾಡಿದ್ದು, ಗೃಹ ಸಚಿವ ಅಮಿತ್​​ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಧಾನಿಗೆ ಈ ಟಾಸ್ಕ್​​ನಲ್ಲಿ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.

ಮುಂಬರುವ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನರ್​ರಚನೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರ್ಕಾರದ ಎರಡನೇ ಅವಧಿಯ ಸಂಪುಟದ ಪುನರ್​ರಚನೆಯ ಸಾಧ್ಯತೆಗಳೂ ದಟ್ಟವಾಗಿವೆ.

ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಕಲ್ಲಿದ್ದಲು ಮತ್ತು ಗಣಿಗಾರಿಕೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳು, ನಾಗರಿಕ ವಿಮಾನಯಾನ, ರೈಲ್ವೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ, ಬುಡಕಟ್ಟು ವ್ಯವಹಾರ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಕೌಶಲ್ಯ ಅಭಿವೃದ್ಧಿ ಮತ್ತು ಈಶಾನ್ಯ ಪ್ರದೇಶದ ಉದ್ಯಮಶೀಲತೆ ಮತ್ತು ಅಭಿವೃದ್ಧಿ ಇಲಾಖೆಗಳನ್ನು ವಿಮರ್ಶೆ ಮಾಡಲಾಗಿದೆ.

ಈ ವಿಮರ್ಶೆಗಳ ಆಧಾರದ ಮೇಲೆ ರ‍್ಯಾಂಕಿಂಗ್‌ ನೀಡಲಾಗಿದ್ದು, ಇದು ಸಂಪುಟ ವಿಸ್ತರಣೆ ಅಥವಾ ಪುನರ್​ರಚನೆಯ ಮೇಲೆಯೂ ಪರಿಣಾಮ ಬೀರಲಿದೆ. 2019ರಿಂದ ಕ್ಯಾಬಿನೆಟ್​​ನಲ್ಲಿ ಯಾವುದೇ ಬದಲಾವಣೆ ತಂದಿಲ್ಲದೇ ಇರುವುದೂ ಕೂಡಾ ಈಗ ಕ್ಯಾಬಿನೆಟ್​ ವಿಸ್ತರಣೆ ಮತ್ತು ಪುನರ್​ರಚನೆ ವಿಚಾರದಲ್ಲಿ ಮತ್ತಷ್ಟು ಪುಷ್ಟಿ ನೀಡುತ್ತದೆ.

ಕೇಂದ್ರ ಸಚಿವಾಕಾಂಕ್ಷಿಗಳಿವರು..

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದು, ಸಾಕಷ್ಟು ಅಚ್ಚರಿಗಳಿಗೆ ಕಾರಣವಾಗಿದೆ. ಇದೇ ವೇಳೆ ಹಲವು ನಾಯಕರು ಮೋದಿಯನ್ನು ಭೇಟಿ ಮಾಡಿದ್ದಾರೆ. ಇವರೆಲ್ಲಾ ತಮಗೆ ಬೇಕಾದವರನ್ನು ಸಚಿವ ಹುದ್ದೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸ್ನೇಹಿತರಿಂದಲೇ ನಾಲ್ವರು ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್!

ವರದಿಗಳು ಹೇಳುವಂತೆ, ಉತ್ತರ ಪ್ರದೇಶದ ಅಪ್ನಾ ದಳ ಮುಖಂಡ ಅನುಪ್ರಿಯಾ ಪಟೇಲ್, ಜ್ಯೋತಿರಾದಿತ್ಯ ಸಿಂಧಿಯಾ, ಬಂಗಾಳ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಅಸ್ಸಾಂ ಮಾಜಿ ಸಿಎಂ ಸರ್ಬಾನಂದ ಸೋನೊವಾಲ್, ಬಿಹಾರ ಡಿಸಿಎಂ ಸುಶೀಲ್ ಮೋದಿ ಮತ್ತು ಎಲ್​ಜೆಪಿಯ ಚಿರಾಗ್ ಪಾಸ್ವಾನ್, ಮತ್ತು ಜೆಡಿಯು ನಾಯಕರಾದ ರಾಜೀವ್ ರಂಜನ್ ಸಿಂಗ್ ಮತ್ತು ರಾಮಚಂದ್ರ ಪ್ರಸಾದ್ ಸಿಂಗ್ ಕೇಂದ್ರದ ಸಚಿವಾಕಾಂಕ್ಷಿಗಳಿದ್ದಾರೆ.

ಈ ಇಲಾಖೆಗಳಲ್ಲಿ ಇಲ್ಲ ಬದಲಾವಣೆ.?

ಸಂಪುಟ ವಿಸ್ತರಣೆ ಅಥವಾ ಪುನರ್​ರಚನೆಯಾದರೆ ಗೃಹ ಇಲಾಖೆ, ರಕ್ಷಣೆ, ವಿದೇಶಾಂಗ ಇಲಾಖೆ, ವ್ಯಾಪಾರ ಮತ್ತು ವಾಣಿಜ್ಯ ಇಲಾಖೆಗಳಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ ಎನ್ನಲಾಗುತ್ತಿದೆ. ಆದರೆ ಮುಂದಿನ ಚುನಾವಣೆಗಳು ನಡೆಯುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳು ಸಂಪುಟ ಪುನರ್ ರಚನೆ ಅಥವಾ ಸಂಪುಟ ವಿಸ್ತರಣೆಯಲ್ಲಿ ಸಿಂಹಪಾಲು ಪಡೆಯಲಿವೆ ಎಂಬುದು ರಾಜಕೀಯ ವಿಶ್ಲೇಷಕರ ಮಾತಾಗಿದ್ದು, ಮುಂಗಾರು ಅಧಿವೇಶನಕ್ಕೆ ಮುನ್ನ ಈ ಪ್ರಕ್ರಿಯೆ ನಡೆಯಲಿದೆ ಎಂಬುದು ಹಲವರ ಅಭಿಪ್ರಾಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.