ETV Bharat / bharat

ಮೋದಿ ಭಾಷಣದಿಂದ ತೃಪ್ತಿಯಾಗಿಲ್ಲ, ಅವರು ಅದಾನಿಯನ್ನು ರಕ್ಷಿಸುತ್ತಿದ್ದಾರೆ: ರಾಹುಲ್​ ಗಾಂಧಿ - ರಾಷ್ಟೀಯ ಭದ್ರತೆ ವಿಚಾರ

ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಕುರಿತು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

pm-modi-protecting-adani-rahul-gandhi-on-modi-lok-sabha-speech
ಮೋದಿ ಭಾಷಣದಿಂದಲೇ ಅದಾನಿ ರಕ್ಷಿಸುತ್ತಿರುವುದು ಸ್ಪಷ್ಟ: ರಾಹುಲ್​ ಮತ್ತೆ ಟೀಕೆ
author img

By

Published : Feb 8, 2023, 8:27 PM IST

ನವದೆಹಲಿ: ತಮ್ಮ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆರೋಪಗಳಿಗೆ ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ತೀಕ್ಷ್ಣವಾಗಿಯೇ ಸುದೀರ್ಘ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, "ಪ್ರಧಾನಿ ಮೋದಿ ಭಾಷಣದಿಂದ ನನಗೆ ತೃಪ್ತಿಯಾಗಿಲ್ಲ. ಉದ್ಯಮಿ ಗೌತಮ್​ ಅದಾನಿ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬುವುದು ಅವರ ಭಾಷಣದಿಂದ ಸ್ಪಷ್ಟವಾಗಿದೆ" ಎಂದು ಮತ್ತೆ ಟೀಕಿಸಿದ್ದಾರೆ.

ಇದನ್ನೂ ಓದಿ: '2004 ರಿಂದ 2014 ಹಗರಣಗಳ ದಶಕ': ಸಂಸತ್ತಿನಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಮಂಗಳವಾರ ಲೋಕಸಭೆಯಲ್ಲಿ ರಾಹುಲ್​ ಗಾಂಧಿ, ಅದಾನಿ ವಿಚಾರವನ್ನು ಪ್ರಸ್ತಾಪಿಸಿ ಮೋದಿ ಸರ್ಕಾರದ ವಿರುದ್ಧ ಆರೋಪಗಳು ಸುರಿಮಳೆ ಸುರಿಸಿದ್ದರು. "ಗುಜರಾತ್​ ಮುಖ್ಯಮಂತ್ರಿಯಾಗಿದ್ದ ಕಾಲದಿಂದ ಹಿಡಿದುಕೊಂಡು ಮೋದಿ ಅವರು ಅದಾನಿ ಜೊತೆ ಸಂಬಂಧ ಹೊಂದಿದ್ದಾರೆ. ಅದಾನಿ ವ್ಯಾಪಾರ, ವಾಹಿವಾಟಿಗೆ ಮೋದಿ ಅನುಕೂಲ ಮಾಡಿಕೊಟ್ಟಿದ್ದಾರೆ. ಗುಜರಾತ್​ನಿಂದ ಆರಂಭವಾಗಿದ್ದ ಮೋದಿ - ಅದಾನಿ ಸಂಬಂಧ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೂ ಬೆಳೆದಿದೆ. ಮೋದಿ ಅವರೊಂದಿಗೆ ಅದಾನಿ ಎಷ್ಟು ಬಾರಿ ವಿದೇಶಕ್ಕೆ ಬಂದಿದ್ದರು ಎಂಬ ಬಗ್ಗೆ ಮಾಹಿತಿ ನೀಡಲಿ" ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ಪ್ರಧಾನಿ ವಿರುದ್ಧ ಗಂಭೀರ ಆರೋಪ: ರಾಹುಲ್​ ಗಾಂಧಿಗೆ ಬಿಜೆಪಿಯಿಂದ ಹಕ್ಕುಚ್ಯುತಿ ನೋಟಿಸ್

  • #WATCH | I'm not satisfied with (PM's speech). No talk about inquiry happened. If he (Gautam Adani) is not a friend then he (PM) should have said that inquiry should be conducted. It's clear that the PM is protecting him (Gautam Adani): Congress MP Rahul Gandhi pic.twitter.com/uJ8Icuqqr3

    — ANI (@ANI) February 8, 2023 " class="align-text-top noRightClick twitterSection" data=" ">

ಪ್ರತಿಪಕ್ಷಗಳ ನಿಂದನೆ ಪರಿಣಾಮ ಬೀರಲ್ಲ- ಮೋದಿ: ಇದಕ್ಕೆ ತಿರುಗೇಟು ಎಂಬಂತೆ ಇಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಭಾಷಣ ಮಾಡಿ, ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರದ 2004ರಿಂದ 2014ರ ಅವಧಿಯಲ್ಲಿನ ಹಗರಣಗಳನ್ನು ಪಟ್ಟಿ ಮಾಡಿ ಟೀಕಾ ಪ್ರಹಾರ ಮಾಡಿದ್ದರು. ಅಲ್ಲದೇ, ನಮ್ಮಲ್ಲಿ ಕೆಲ ಜನರು ಖಿನ್ನತೆಯಲ್ಲಿ ಮುಳುಗಿದ್ದಾರೆ. ಅವರಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ದೇಶದ ಪ್ರಗತಿಯನ್ನು ನೋಡಲಾಗುತ್ತಿಲ್ಲ. ಪ್ರತಿ ವಿಶ್ವಾಸಾರ್ಹ ಕಂಪನಿ ಕೂಡ ಭಾರತದ ಬಗ್ಗೆ ಹೊಸ ನಂಬಿಕೆ ಮತ್ತು ಭರವಸೆ ಹೊಂದಿದೆ. ಅಲ್ಲದೇ, ಭಾರತವು ಈ ಹಿಂದೆ ಇತರರ ಮೇಲೆ ಅವಲಂಬಿತವಾಗಿತ್ತು. ಈಗ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಕೋಟ್ಯಂತರ ಜನರೇ ನನ್ನ ರಕ್ಷಾ ಕಚವ. ಪ್ರತಿಪಕ್ಷಗಳ ನಿಂದನೆಗಳು ಮತ್ತು ಆರೋಪಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚಾಟಿ ಬೀಸಿದ್ದರು.

ಇದು ರಾಷ್ಟೀಯ ಭದ್ರತೆಯ ವಿಚಾರ- ರಾಹುಲ್​: ಪ್ರಧಾನಿ ಭಾಷಣದ ನಂತರ ಸಂಸತ್ತಿನ ಹೊರಗಡೆ ರಾಹುಲ್​ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಮೆರಿಕದ ಮೂಲದ ಹಿಂಡೆನ್​ಬರ್ಗ್​ ರಿರ್ಸಚ್​ ವರದಿಯಿಂದ ಸಾಕಷ್ಟು ಸುದ್ದಿಯಲ್ಲಿರುವ ಉದ್ಯಮಿ ಅದಾನಿಯನ್ನು ಪ್ರಧಾನಿ ಮಾಡಿ ರಕ್ಷಣೆ ಮಾಡುತ್ತಿದ್ದಾರೆ. ಇಂದಿನ ಮೋದಿ ಭಾಷಣದಿಂದಲೇ ಇದು ಸ್ಪಷ್ಟವಾಗಿದೆ. ಆದರೆ, ರಾಷ್ಟೀಯ ಭದ್ರತೆ ವಿಚಾರವಾಗಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಅದಾನಿ ವಿಚಾರದಲ್ಲಿ ಪ್ರಧಾನಿಗಳೇ ನೀವು ಮೌನಿ ಬಾಬಾ ಆಗಿದ್ದೇಕೆ?: ಮೋದಿ ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ!

ಅಲ್ಲದೇ, ಪ್ರಧಾನಿ ಭಾಷಣದಿಂದ ನನಗೆ ತೃಪ್ತಿಯಾಗಿಲ್ಲ. ತನಿಖೆ ಏನಾಗುತ್ತದೆ ಎಂಬ ಕುರಿತು ಅವರು ಮಾತನಾಡಿಲ್ಲ. ಅದಾನಿ ತಮ್ಮ ಸ್ನೇಹಿತರಲ್ಲ ಎಂದಾದರೆ, ಮೋದಿ ತನಿಖೆ ಮಾಡುತ್ತೇವೆ ಎಂದು ಪ್ರಕಟಿಸಬೇಕಿತ್ತು. ಜೊತೆಗೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ನಮ್ಮ ಅನೇಕ ಪ್ರಶ್ನೆಗಳ ಬಗ್ಗೆ ಪ್ರಸ್ತಾಪವೇ ಮಾಡಿಲ್ಲ. ಅವರಿಗೆ ಆಘಾತವಾಗಿರಬೇಕು. ನಾನು ಯಾವುದೇ ಕಠಿಣ ಪ್ರಶ್ನೆಗಳನ್ನು ಎತ್ತಿರಲಿಲ್ಲ. ಮೋದಿ ಸರಳವಾದ ಪ್ರಶ್ನೆಗಳನ್ನೇ ತಪ್ಪಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಇದೇ ವಿಷಯವಾಗಿ ಮತ್ತೊಬ್ಬ ಕಾಂಗ್ರೆಸ್​ ನಾಯಕ ಶಶಿ ತರೂರ್​ ಪ್ರತಿಕ್ರಿಯಿಸಿ, ಪ್ರಧಾನಿ ಒಳ್ಳೆಯ ಭಾಷಣ ನೀಡಿದ್ದಾರೆ. ಆದರೆ, ಪ್ರತಿಪಕ್ಷಗಳು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರವನ್ನೇ ನೀಡಿಲ್ಲ ಎಂದರು.

ಇದನ್ನೂ ಓದಿ: ಇದು ಮೋದಿ-ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್​: ಸ್ಪೀಕರ್ ಎಚ್ಚರಿಕೆ ಹೀಗಿತ್ತು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.