ನವದೆಹಲಿ: 1971ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಭಾರತ ಜಯಗಳಿಸಿದ್ದು, ಹಿನ್ನೆಲೆಯಲ್ಲಿ 50ನೇ ವಿಜಯ ದಿವಸ್ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಸ್ವರ್ಣಿಮ್ ವಿಜಯ್ ಮಶಾಲ್ಸ್ ಸಮಾರಂಭದಲ್ಲಿ ಭಾಗಿಯಾದರು.
ಈ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಭಾಗಿಯಾಗಿದ್ದು, ಪ್ರಧಾನಿ ಮೋದಿ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದ್ದರು. ಹಿಂದಿನ ದಿನವಷ್ಟೇ ರಾಜನಾಥ್ ಸಿಂಗ್ ಸ್ಮಾರಕ ಅಂಚೆ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದರು.
ಈ ಸಮಾರಂಭದ ವಿಶೇಷತೆಯೆಂದರೆ ಕಳೆದ ವರ್ಷ ಇದೇ ಯುದ್ಧ ಸ್ಮಾರಕದ ಬಳಿ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ನಾಲ್ಕು ವಿಜಯ ಜ್ಯೋತಿಗಳನ್ನು ಬೆಳಗಿಸಿದ್ದರು. ಈ ವಿಜಯ ಜ್ಯೋತಿಗಳನ್ನು ಸಿಯಾಚಿನ್, ಕನ್ಯಾಕುಮಾರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕಚ್ ಸೇರಿದಂತೆ ದೇಶಾದ್ಯಂತ ಕೊಂಡೊಯ್ಯಲಾಗಿತ್ತು.
ದೇಶದ ಪ್ರಮುಖ ಯುದ್ಧ ಪ್ರದೇಶಗಳು ಮತ್ತು ಸೇನೆಯಲ್ಲಿದ್ದು ಶೌರ್ಯ ಪ್ರಶಸ್ತಿ ವಿಜೇತರಾದವರು ಮತ್ತು 1971ರ ಯುದ್ಧ ಭಾಗವಹಿಸಿದವರ ನಿವಾಸಗಳಿಗೆ ಈ ಜ್ಯೋತಿಗಳನ್ನು ಕೊಂಡೊಯ್ಯಲಾಗಿತ್ತು. ಈಗ ಆ ಜ್ಯೋತಿಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ವಿಲೀನಗೊಳಿಸಿದ್ದಾರೆ.
ಇದನ್ನೂ ಓದಿ: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತ: ಸಿಬಿಐಗೆ ಅಚ್ಚರಿಯ ಪತ್ರ ಬರೆದ ಆರೋಪಿ ಇಂದ್ರಾಣಿ ಮುಖರ್ಜಿ!