ಫರಿದಾಬಾದ್(ಹರಿಯಾಣ): ಮಾತಾ ಅಮೃತಾನಂದಮಯಿ ಮಠದ ಸಹಯೋಗದಲ್ಲಿ ಹರಿಯಾಣದ ಫರಿದಾಬಾದ್ನಲ್ಲಿ ದೇಶದ ಅತಿದೊಡ್ಡ ಖಾಸಗಿ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನೆರವೇರಿಸಿದರು. ಕೇವಲ ಆರು ವರ್ಷಗಳ ಅವಧಿಯಲ್ಲಿ ಈ ಅತ್ಯಾಧುನಿಕ ಆಸ್ಪತ್ರೆ ತಲೆ ಎತ್ತಿ ನಿಂತಿದೆ.
2,600 ಹಾಸಿಗೆಗಳಿರುವ ಸುಸಜ್ಜಿತ ಕಟ್ಟಡಕ್ಕೆ ಅಮೃತಾ ಆಸ್ಪತ್ರೆ ಎಂದು ಹೆಸರಿಡಲಾಗಿದೆ. ಮಾತಾ ಅಮೃತಾನಂದಮಯಿ ಮಠ ಇದರ ಸಂಪೂರ್ಣ ನಿರ್ವಹಣೆ ಮಾಡಲಿದೆ. ಕಟ್ಟಡದ ನಿರ್ಮಾಣಕ್ಕಾಗಿ 6,000 ಕೋಟಿ ರೂಪಾಯಿ ವ್ಯಯಿಸಲಾಗಿದೆ.
ಹರಿಯಾಣ, ಎನ್ಸಿಆರ್ ಪ್ರದೇಶದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ 130 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಏಳು ಅಂತಸ್ತಿನ ಸಂಶೋಧನಾ ಬ್ಲಾಕ್ ಇದರಲ್ಲಿದೆ. ಆಸ್ಪತ್ರೆಯ ಕಟ್ಟಡಗಳು 36 ಲಕ್ಷ ಚದರ ಅಡಿಗಳಷ್ಟು ಪ್ರದೇಶದಲ್ಲಿ ವ್ಯಾಪಿಸುತ್ತವೆ. 14 ಮಹಡಿಗಳ ಗೋಪುರವು ಪ್ರಮುಖ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ಮೇಲ್ಛಾವಣಿಯಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಇದೆ.
-
Managed by Mata Amritanandamayi Math, the super-specialty hospital will be equipped with 2600 beds. The hospital, which is being constructed at an estimated cost of around Rs. 6000 crores, will provide state-of-the-art healthcare facilities to the people: PMO https://t.co/wcqjvjezkv
— ANI (@ANI) August 24, 2022 " class="align-text-top noRightClick twitterSection" data="
">Managed by Mata Amritanandamayi Math, the super-specialty hospital will be equipped with 2600 beds. The hospital, which is being constructed at an estimated cost of around Rs. 6000 crores, will provide state-of-the-art healthcare facilities to the people: PMO https://t.co/wcqjvjezkv
— ANI (@ANI) August 24, 2022Managed by Mata Amritanandamayi Math, the super-specialty hospital will be equipped with 2600 beds. The hospital, which is being constructed at an estimated cost of around Rs. 6000 crores, will provide state-of-the-art healthcare facilities to the people: PMO https://t.co/wcqjvjezkv
— ANI (@ANI) August 24, 2022
ಆಸ್ಪತ್ರೆ ಲೋಕಾರ್ಪಣೆಗೊಳಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ಆರೋಗ್ಯ ಮತ್ತು ಆಧ್ಯಾತ್ಮಿಕತೆಯಲ್ಲಿ ನಿಕಟ ಸಂಬಂಧ ಹೊಂದಿರುವ ದೇಶ. ಕೋವಿಡ್ ಲಸಿಕಾಭಿಯಾನದ ಸಂದರ್ಭದಲ್ಲಿ ಕೆಲವರು ಕೆಟ್ಟ ಪ್ರಚಾರ ಮಾಡಿದ್ದರು. ಆದರೆ, ಆದ್ಯಾತ್ಮಿಕ ಮುಖಂಡರು ಅದನ್ನು ಎದುರಿಸಿದಾಗ ಎಲ್ಲರೂ ಮುಂದೆ ಬಂದು ಲಸಿಕೆ ಪಡೆದುಕೊಂಡರು. ಹೀಗಾಗಿ, ಕೋವಿಡ್ ಮಹಾಮಾರಿ ವಿರುದ್ಧ ವ್ಯಾಕ್ಸಿನೇಷನ್ ಯಶಸ್ವಿಯಾಗಲು ಆಧ್ಯಾತ್ಮಿಕ ಖಾಸಗಿ ಪಾಲುದಾರಿಕೆ ಸಹ ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು. ಇದೇ ವೇಳೆ, ತಂತ್ರಜ್ಞಾನ ಮತ್ತು ಆಧುನೀಕರಣದ ಸಂಯೋಜನೆಯು ದೇಶದಲ್ಲಿ ಆರೋಗ್ಯ ಕ್ಷೇತ್ರದ ಪ್ರಗತಿಗೆ ನೆರವಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ಇದನ್ನೂ ಓದಿ: ₹530 ಕೋಟಿ ವೆಚ್ಚದ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಕ್ಯಾಂಪನ್ ಉದ್ಘಾಟಿಸಿದ ಮೋದಿ
ಮಾತಾ ಅಮೃತಾನಂದಮಯಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಪ್ರಧಾನಿ, ಅಮ್ಮ ಪ್ರೀತಿ ಮತ್ತು ತ್ಯಾಗದ ಮೂರ್ತರೂಪ. ಅವರು ಎಲ್ಲರಿಗೂ ಸ್ಫೂರ್ತಿ ಎಂದರು. ಇದೇ ವೇಳೆ, ಮುಂದಿನ ದಿನಗಳಲ್ಲಿ ಸಂಪೂರ್ಣ ಆಸ್ಪತ್ರೆಯನ್ನು ಸೌರಶಕ್ತಿ ಚಾಲಿತವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಡೈರೆಕ್ಟರ್ ಡಾ.ಸಂಜೀವ್ ಕೆ ಸಿಂಗ್ ತಿಳಿಸಿದರು. ಸಮಾರಂಭದಲ್ಲಿ ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಉಪಸ್ಥಿತರಿದ್ದರು.