ETV Bharat / bharat

ನವಸಾರಿಯಲ್ಲಿ ತಮ್ಮ ಶಾಲಾ ಶಿಕ್ಷಕರನ್ನ ಭೇಟಿ ಮಾಡಿ, ಆಶೀರ್ವಾದ ಪಡೆದ ಮೋದಿ!

ಗುಜರಾತ್​ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ಅದರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

author img

By

Published : Jun 11, 2022, 1:08 PM IST

PM Modi met his school teacher in Navsari

ನವಸಾರಿ(ಗುಜರಾತ್​): ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್​ ಪ್ರವಾಸ ಯಾವುದೋ ಒಂದು ಕಾರಣಕ್ಕಾಗಿ ಪ್ರತಿ ಸಲವೂ ವಿಶೇಷವಾಗಿರುತ್ತದೆ. ಈ ಸಲದ ಅವರ ಮಾತೃ ನೆಲದ ಪ್ರವಾಸ ಕೂಡ ವಿಭಿನ್ನ ಕಾರಣಕ್ಕಾಗಿ ಮುನ್ನೆಲೆಗೆ ಬಂದಿದೆ. ಒಂದು ದಿನದ ಗುಜರಾತ್​ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರಿಗೆ ಸಿಕ್ಕ ಸಮಯದಲ್ಲಿ ಶಾಲಾ ಶಿಕ್ಷಕರನ್ನ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ.

ಗುಜರಾತ್​​ನ ನವಸಾರಿಯ ವಡ್​​ನಗರದಲ್ಲಿ ತಮ್ಮ ಶಾಲಾ ಶಿಕ್ಷಕರನ್ನ ಭೇಟಿ ಮಾಡಿದ ನಮೋ, ಆಶೀರ್ವಾದ ಪಡೆದುಕೊಂಡರು. ಶಾಲಾ ಶಿಕ್ಷಕರಾದ ಜಗದೀಶ್ ನಾಯ್ಕ್​ ಎಂಬುವವರನ್ನ ಭೇಟಿ ಮಾಡಿರುವ ನಮೋ, ಕೈ ಮುಗಿದು ನಮಸ್ಕಾರ ಮಾಡುತ್ತಿದ್ದಾರೆ. ಗಾಂಧಿ ಟೋಪಿ ಧರಿಸಿ ಮತ್ತು ಬಿಳಿ ಅಂಗಿ ಧರಿಸಿರುವ ಜಗದೀಶ್ ನಾಯಕ್ ಅವರು ಪ್ರಧಾನಿ ಮೋದಿಯೊಂದಿಗಿನ ಭೇಟಿಯ ಸಮಯದಲ್ಲಿ ಹರ್ಷಚಿತ್ತದಿಂದ ಕಾಣುತ್ತಿದ್ದಾರೆ.

ಇದನ್ನೂ ಓದಿ: ಮಾತೃಭೂಮಿ​ ಗುಜರಾತ್​​​ ಪ್ರವಾಸದಲ್ಲಿ ನಮೋ: ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಪಿಎಂ

ನಿನ್ನೆ ಗುಜರಾತ್​ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 3050 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.