ETV Bharat / bharat

ಅಮ್ಮ ಹೀರಾಬೆನ್​ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ - ಹೀರಾಬೆನ್

ಗಾಂಧಿನಗರದಲ್ಲಿರುವ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ತಾಯಿ ಹೀರಾಬೆನ್​ ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದರು.

pm-modi-meets-his-mother-heeraben-in-gandhinagar
ಅಮ್ಮ ಹೀರಾಬೆನ್​ ಪಾದ ಸ್ಪರ್ಶಿಸಿ ಆರ್ಶೀವಾದ ಪಡೆದ ಪ್ರಧಾನಿ ಮೋದಿ
author img

By

Published : Dec 4, 2022, 8:50 PM IST

ಗಾಂಧಿನಗರ (ಗುಜರಾತ್​): ಗುಜರಾತ್ ವಿಧಾನಸಭೆಯ ಎರಡನೇ ಹಂತದ 93 ಸ್ಥಾನಗಳಿಗೆ ಸೋಮವಾರ ಮತದಾನ ನಡೆಯಲಿದೆ. ಪ್ರಧಾನಿ ಮೋದಿ ತಮ್ಮ ಮತದಾನ ಹಕ್ಕು ಚಲಾಯಿಸಲಿದ್ದಾರೆ. ಇದಕ್ಕೂ ಮುನ್ನ ದಿನವಾದ ಭಾನುವಾರ ಪ್ರಧಾನಿ ಮೋದಿ ತಮ್ಮ ತಾಯಿ ಹೀರಾಬೆನ್​ ಅವರನ್ನು ಭೇಟಿ ಮಾಡಿದರು.

ಗಾಂಧಿನಗರದಲ್ಲಿರುವ ನಿವಾಸಕ್ಕೆ ಆಗಮಿಸಿದ ಪ್ರಧಾನಿ ಮೋದಿ ತಾಯಿ ಹೀರಾಬೆನ್​ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ತಾಯಿಯ ಪಾದಗಳನ್ನು ಸ್ಪರ್ಶಿಸಿ ನಮಸ್ಕಾರ ಮಾಡಿದರು. ಇದೇ ವೇಳೆ ಅಮ್ಮನ ಪಕ್ಕ ಕುಳಿತು ಪ್ರಧಾನಿ ಮೋದಿ ಚಹಾ ಸಹ ಸೇವಿಸಿದರು.

ಇತ್ತ, ಗುಜರಾತ್​ನ ಎರಡನೇ ಹಂತದ ಮತದಾನಕ್ಕೆ ಎಲ್ಲ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಅವರು ಸೋಮವಾರ ಬೆಳಗ್ಗೆ 8:30ಕ್ಕೆ ಅಹಮದಾಬಾದ್‌ನ ಸಬರಮತಿ ಅಸೆಂಬ್ಲಿಯ ರಾನಿಪ್ ಪ್ರದೇಶದ ನಿಶಾನ್ ಶಾಲೆಯಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಧಾನಿಯವರ ಭದ್ರತೆಯ ಶಿಷ್ಟಾಚಾರದ ಪ್ರಕಾರ ಎಸ್‌ಪಿಜಿ ಮತ್ತು ಅಹಮದಾಬಾದ್ ನಗರದ ಉನ್ನತ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಗುಜರಾತ್​ ಮೊದಲ ಹಂತದ ಮತದಾನ ಅಂತ್ಯ: 2017ಕ್ಕಿಂತ ಈ ಬಾರಿ ಕಡಿಮೆ ವೋಟಿಂಗ್​.. ಕಾರಣವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.