ETV Bharat / bharat

ಒಮಿಕ್ರಾನ್ ವಿರುದ್ಧ ಹೋರಾಡುವ 3 ಅಸ್ತ್ರಗಳನ್ನು ತಿಳಿಸಿದ ಪ್ರಧಾನಿ ಮೋದಿ - PM Modi lists weapons against Omicron

PM Modi speaks on Omicron in Mann Ki Baat: 'ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತು ಮತ್ತು ಸ್ವಯಂ-ಶಕ್ತಿ' ಒಮಿಕ್ರಾನ್ ವಿರುದ್ಧ ಹೋರಾಡುವ ಅಸ್ತ್ರಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

i in Mann Ki Baat
ಪ್ರಧಾನಿ ಮೋದಿ
author img

By

Published : Dec 26, 2021, 5:10 PM IST

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್​ನ ಹೊಸ ರೂಪಾಂತರಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದರ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಮೂರು ಅಸ್ತ್ರಗಳನ್ನ ಪಟ್ಟಿ ಮಾಡಿದ್ದಾರೆ.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' 84ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕೊರೊನಾ ವೈರಸ್​ನ ಹೊಸ ರೂಪಾಂತರವು ಈಗಾಗಲೇ ಬಾಗಿಲು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ, 'ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತು ಮತ್ತು ಸ್ವಯಂ-ಶಕ್ತಿ' ಒಮಿಕ್ರಾನ್ ವಿರುದ್ಧ ಹೋರಾಡುವ ಅಸ್ತ್ರಗಳಾಗಿವೆ ಎಂದು ತಿಳಿಸಿದರು.

ನಮ್ಮ ವಿಜ್ಞಾನಿಗಳು ಒಮಿಕ್ರಾನ್​ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಪ್ರತಿದಿನ ಹೊಸ ಹೊಸ ಮಾಹಿತಿ ನೀಡುತ್ತಿದ್ದಾರೆ. ಈ ಅಸ್ತ್ರಗಳನ್ನು ಪ್ರಯೋಗಿಸಿ ನಾವು ಸಾಮೂಹಿಕ ಜವಾಬ್ದಾರಿ ಹಾಗೂ ಪ್ರಜ್ಞೆಯೊಂದಿಗೆ 2022ಕ್ಕೆ ಪ್ರವೇಶಿಸಬೇಕಾಗಿದೆ ಎಂದು ಮೋದಿ ಕರೆ ನೀಡಿದರು.

ಇದನ್ನೂ ಓದಿ: ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು ಅವೈಜ್ಞಾನಿಕ: ಏಮ್ಸ್​​ನ ಹಿರಿಯ ತಜ್ಞ

100 ವರ್ಷಗಳಲ್ಲಿ ಭಾರತ ಅತಿದೊಡ್ಡ ಸಾಂಕ್ರಾಮಿಕ ಎದುರಿಸಿದೆ..

ದೇಶದ ಲಸಿಕಾಭಿಯಾನವು ಭಾರತದ ವ್ಯವಸ್ಥೆ ಮತ್ತು ವಿಜ್ಞಾನಿಗಳಲ್ಲಿ ಪ್ರತಿಯೊಬ್ಬ ಭಾರತೀಯರ ನಂಬಿಕೆಯನ್ನು ತೋರಿಸುತ್ತದೆ. ಪ್ರತಿಯೊಬ್ಬರ ಪ್ರಯತ್ನದಿಂದಾಗಿ ಭಾರತವು 100 ವರ್ಷಗಳಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಾಧ್ಯವಾಯಿತು. ಇದು ಜನರ ಶಕ್ತಿ. ಪ್ರತಿ ಕಷ್ಟದ ಕ್ಷಣದಲ್ಲಿ ನಾವು ಕುಟುಂಬದಂತೆ ಪರಸ್ಪರರ ಜೊತೆಯಲ್ಲಿ ನಿಂತಿದ್ದೇವೆ. ನಾವು ಇಂದು ವಿಶ್ವದ ಲಸಿಕೆ ಅಂಕಿ-ಅಂಶಗಳನ್ನು ಹೋಲಿಸಿದರೆ, ಭಾರತವು ಅಭೂತಪೂರ್ವ ಕೆಲಸವನ್ನು ನಿಭಾಯಿಸಿದೆ. 140 ಮಿಲಿಯನ್ ಡೋಸ್​ ದಾಟುವುದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ ಎಂದು ಪ್ರಧಾನಿ ಹೇಳಿದರು.

ದಿ.ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್​ರನ್ನು ನೆನೆದ ಪ್ರಧಾನಿ

ತಮಿಳುನಾಡಿನ ಹೆಲಿಕಾಪ್ಟರ್ ದುರಂತದಲ್ಲಿ ನಾವು ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಅನೇಕ ಧೈರ್ಯಶಾಲಿ ಯೋಧರನ್ನು ಕಳೆದುಕೊಂಡಿದ್ದೇವೆ. ಸಾವು-ಬದುಕಿನ ನಡುವೆ ಹಲವು ದಿನಗಳ ಕಾಲ ಹೋರಾಟ ನಡೆಸಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪ್ರಾಣಬಿಟ್ಟರು. ವರುಣ್ ಸಿಂಗ್ ಅವರಿಗೆ ಈ ವರ್ಷದ ಆಗಸ್ಟ್‌ನಲ್ಲಿ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿತ್ತು. ಇದನ್ನು ಪಡೆದ ಬಳಿಕ ಅವರು ತಾವು ಓದಿದ ಶಾಲೆಯ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದರು. ಯಶಸ್ಸಿನ ಶಿಖರವನ್ನು ತಲುಪಿದ ನಂತರವೂ ವರುಣ್ ಸಿಂಗ್ ತಮ್ಮ ಬೇರುಗಳನ್ನು ಪೋಷಿಸಲು ಮರೆಯಲಿಲ್ಲ ಎಂದು ಪ್ರಧಾನಿ ಗುಣಗಾನ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.