ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ಅಂತ್ಯದಲ್ಲಿ ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಸೆಪ್ಟೆಂಬರ್ 23-24 ರಂದು ಪಿಎಂ ಮೋದಿ ಯುಎಸ್ಗೆ ತೆರಳಬಹುದು. ಮೊದಲು ವಾಷಿಂಗ್ಟನ್ಗೆ ಹೋಗಿ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. 'ತಾಲಿಬಾನ್ ಸ್ವಾಧೀನದ ನಂತರ ಬಿಕ್ಕಟ್ಟಿಗೆ ಸಿಲುಕಿರುವ ಅಫ್ಘಾನಿಸ್ತಾನ' - ಈ ಅಧಿವೇಶನದ ಪ್ರಮುಖ ಚರ್ಚೆಯ ವಿಷಯವಾಗಲಿದೆ ಎಂದು ಕೆಲ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಾಕ್ ರಾಯಭಾರಿ ಭೇಟಿ ಮಾಡಿದ Taliban.. ಈ ವಿಚಾರಗಳ ಕುರಿತಂತೆ ಚರ್ಚೆ
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಬಳಿಕ ಯುಸ್ಗೆ ಮೋದಿಯ ಮೊದಲ ಭೇಟಿ ಇದಾಗಿರಲಿದೆ. ಪಿಎಂ ಮೋದಿ ಕೊನೆಯದಾಗಿ 2019 ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ಅಮೆರಿಕಕ್ಕೆ ಭೇಟಿ ನೀಡಿ, ಹ್ಯೂಸ್ಟನಲ್ಲಿ ನಡೆದ 'ಹೌಡಿ ಮೋದಿ' ಸಮಾರಂಭದಲ್ಲಿ ಭಾಗವಹಿಸಿದ್ದರು.