ಡೆಹ್ರಾಡೂನ್(ಉತ್ತರಾಖಂಡ): ಉತ್ತರಾಖಂಡ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ 8,300 ಕೋಟಿ ರೂಪಾಯಿ ವೆಚ್ಚದ ದೆಹಲಿ - ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಯೋಜನೆ ಸೇರಿದಂತೆ ಬರೊಬ್ಬರಿ 18 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.
ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಐದು ವರ್ಷಗಳಲ್ಲಿ ಉತ್ತರಾಖಂಡದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ ಎಂದರು. ಇದೀಗ ಅಭಿವೃದ್ಧಿ ಯೋಜನೆಗಳಿಗೆ 18 ಸಾವಿರ ಕೋಟಿ ರೂ. ನೀಡಲಾಗಿದೆ ಎಂದರು.
-
In the last 5 years, the Centre has approved more than Rs 1 lakh crores for the development of Uttarakhand. More than Rs 18,000 crores have been invested in today's developmental projects: PM Narendra Modi in Dehradun, Uttarakhand pic.twitter.com/0Zdfblrc1c
— ANI (@ANI) December 4, 2021 " class="align-text-top noRightClick twitterSection" data="
">In the last 5 years, the Centre has approved more than Rs 1 lakh crores for the development of Uttarakhand. More than Rs 18,000 crores have been invested in today's developmental projects: PM Narendra Modi in Dehradun, Uttarakhand pic.twitter.com/0Zdfblrc1c
— ANI (@ANI) December 4, 2021In the last 5 years, the Centre has approved more than Rs 1 lakh crores for the development of Uttarakhand. More than Rs 18,000 crores have been invested in today's developmental projects: PM Narendra Modi in Dehradun, Uttarakhand pic.twitter.com/0Zdfblrc1c
— ANI (@ANI) December 4, 2021
ರಾಜ್ಯದಲ್ಲಿ ಈಗಾಗಲೇ ಮೂರು ಹೊಸ ಮೆಡಿಕಲ್ ಕಾಲೇಜ್ ಕಟ್ಟಲಾಗಿದ್ದು, ಇಂದು ಹರಿದ್ವಾರ್ ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದ ನಮೋ, ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರ ನಡೆಸಿರುವ ಕಾಂಗ್ರೆಸ್ ಕೇವಲ ಸಮಯ ಹಾಳು ಮಾಡಿದ್ದು, ಇಲ್ಲಿನ ಅಭಿವೃದ್ಧಿ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದರು.
-
Dehradun | PM Modi inspects the model of the Delhi-Dehradun Economic Corridor. The corridor will be built at a cost of around Rs 8300 crores
— ANI (@ANI) December 4, 2021 " class="align-text-top noRightClick twitterSection" data="
He will inaugurate & lay the foundation stone of multiple projects worth around Rs 18,000 crores in Uttarakhand today
(Source: DD) pic.twitter.com/joWqfWqsB2
">Dehradun | PM Modi inspects the model of the Delhi-Dehradun Economic Corridor. The corridor will be built at a cost of around Rs 8300 crores
— ANI (@ANI) December 4, 2021
He will inaugurate & lay the foundation stone of multiple projects worth around Rs 18,000 crores in Uttarakhand today
(Source: DD) pic.twitter.com/joWqfWqsB2Dehradun | PM Modi inspects the model of the Delhi-Dehradun Economic Corridor. The corridor will be built at a cost of around Rs 8300 crores
— ANI (@ANI) December 4, 2021
He will inaugurate & lay the foundation stone of multiple projects worth around Rs 18,000 crores in Uttarakhand today
(Source: DD) pic.twitter.com/joWqfWqsB2
2007ರಿಂದ 2014ರ ಅವಧಿಯಲ್ಲಿ ಅಧಿಕಾರ ನಡೆಸಿರುವ ಕೇಂದ್ರ ಸರ್ಕಾರ ಉತ್ತರಾಖಂಡದಲ್ಲಿ 288 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದು, ಅದಕ್ಕಾಗಿ 600 ಕೋಟಿ ರೂ. ಖರ್ಚು ಮಾಡಿದೆ. ಆದರೆ ಕಳೆದ 7 ವರ್ಷಗಳಲ್ಲಿ ನಮ್ಮ ಸರ್ಕಾರ 2 ಸಾವಿರ ಕಿಲೋ ಮೀಟರ್ ರಸ್ತೆ ನಿರ್ಮಿಸಿದ್ದು, ಅದಕ್ಕಾಗಿ 12,000 ಕೋಟಿ ರೂ. ವ್ಯಯ ಮಾಡಿದ್ದೇವೆ ಎಂದರು.
2022ರ ಆರಂಭದಲ್ಲೇ ಗೋವಾ, ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳ ಜೊತೆಗೆ ಉತ್ತರಾಖಂಡ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ನಮೋ ಅನೇಕ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದರು.