ETV Bharat / bharat

ಕೇಜ್ರಿವಾಲ್​​​​​ ಹಾಗೂ ಅವರ ಕೆಲಸಕ್ಕೆ ಹೆದರಿ ಜಿಎನ್​ಸಿಟಿಡಿ ಮಸೂದೆಗೆ ಅಂಗೀಕಾರ: ಸಂಜಯ್​ ಸಿಂಗ್​​

ಜಿಎನ್‌ಸಿಟಿಡಿ ಮಸೂದೆ 2021ನ್ನು ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ.. ಮಾರ್ಚ್ 22 ರಂದು ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿತ್ತು. ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಅಂಗೀಕಾರ ಪಡೆದ ರೀತಿಗೆ ತೀವ್ರ ಖಂಡನೆಯೂ ವ್ಯಕ್ತವಾಗಿದೆ.

NCT (Amendment) Bill 2021
ಜಿಎನ್‌ಸಿಟಿಡಿ ಮಸೂದೆ 2021
author img

By

Published : Mar 25, 2021, 6:30 AM IST

ನವದೆಹಲಿ: ಕಾಂಗ್ರೆಸ್ ಪಕ್ಷ ಸೇರಿದಂತೆ ಪ್ರತಿಪಕ್ಷಗಳು ಹೊರನಡೆದ ನಡುವೆಯೂ ರಾಜ್ಯಸಭೆಯು ದೆಹಲಿಯ ರಾಷ್ಟ್ರೀಯ ರಾಜಧಾನಿ (ತಿದ್ದುಪಡಿ) ಮಸೂದೆ 2021 ಕ್ಕೆ ಅನುಮೋದನೆ ಪಡೆದಿದೆ.

ಮಸೂದೆಯನ್ನು ಪ್ರಜಾಪ್ರಭುತ್ವೇತರ ಮತ್ತು ಸಂವಿಧಾನೇತರ ಎಂದು ಕರೆದ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್, ’’ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕಾರ್ಯಗಳಿಗೆ ಹೆದರಿ ಜಿಎನ್‌ಸಿಟಿಡಿ (ಅಮ್ನೆಡ್‌ಮೆಂಟ್) ಮಸೂದೆ 2021ಕ್ಕೆ ಪ್ರಧಾನಿ ಮೋದಿ ಅಂಗೀಕಾರ ಪಡೆದುಕೊಂಡಿದ್ದಾರೆ. ಮಸೂದೆ ಅಂಗೀಕಾರವೇ ಇದೆಲ್ಲವನ್ನು ಹೇಳುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಇದನ್ನು ಓದಿ: ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ಮೊಬೈಲ್ ವಶಕ್ಕೆ ಪಡೆದ ಎಸ್ಐಟಿ

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಗುರಿಯನ್ನು ಹೊಂದಿರುವ ಜಿಎನ್‌ಸಿಟಿಡಿ (ಅಮ್ನೆಡ್‌ಮೆಂಟ್) ಮಸೂದೆ 2021 ಅನ್ನು ಮಾರ್ಚ್ 22 ರಂದು ಲೋಕಸಭೆ ಅಂಗೀಕರಿಸಿತ್ತು. ಈ ನಡುವೆ ಅರವಿಂದ್​ ಕೇಜ್ರಿವಾಲ್​ ಸಹ ಟ್ವೀಟ್​ ಮಾಡಿ ಕೇಂದ್ರದ ನೀತಿ ಖಂಡಿಸಿದ್ದು, ತಮ್ಮ ಕೆಲಸ ಮಾತ್ರ ನಿಲ್ಲುವುದಿಲ್ಲ ಎಂದು ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.