ETV Bharat / bharat

ಸರ್ದಾರ್ ​ಧಾಮ್ ​ಭವನ ಉದ್ಘಾಟಿಸಿದ ನಮೋ.. ಕನ್ಯಾ ಛತ್ರಾಲಯಕ್ಕೂ ಭೂಮಿ ಪೂಜೆ

author img

By

Published : Sep 11, 2021, 2:03 PM IST

Updated : Sep 11, 2021, 2:15 PM IST

ಪ್ರಧಾನಿ ಮೋದಿ, ಅಹಮದಾಬಾದ್​​ನ ಸರ್ದಾರ್​ ಧಾಮ್​ ಭವನ ಉದ್ಘಾಟಿಸಿದ್ದು, ಸರ್ದಾರ್​​ ಧಾಮ್​- 2 ನೇ ಹಂತದ ಕನ್ಯಾ ಛತ್ರಾಲಯ ನಿರ್ಮಾಣಕ್ಕೂ ಭೂಮಿ ಪೂಜೆ ನೆರವೇರಿಸಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ವಿಡಿಯೋ ಕಾನ್ಫರೆನ್ಸ್​ ಮೂಲಕ ಇಂದು ಬೆಳಗ್ಗೆ 11ಗಂಟೆಗೆ ಅಹಮದಾಬಾದ್​​ನ ಸರ್ದಾರ್​​ ಧಾಮ್​ ಭವನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಇದೇ ವೇಳೆ ಸರ್ದಾರ್​ ಧಾಮ್​- 2 ನೇ ಹಂತದ ಕನ್ಯಾ ಛತ್ರಾಲಯ (ಬಾಲಕಿಯರ ಹಾಸ್ಟೆಲ್)ದ ನಿರ್ಮಾಣಕ್ಕೆ ಭೂಮಿ ಪೂಜೆಯನ್ನೂ ನೆರವೇರಿಸಿದ್ದಾರೆ.

ಈ ಕುರಿತು ಪ್ರಧಾನಮಂತ್ರಿಗಳ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಸರ್ದಾರ್​ ಧಾಮ್ ಶೈಕ್ಷಣಿಕ ಮತ್ತು ಸಾಮಾಜಿಕ ಪರಿವರ್ತನೆ, ಸಮಾಜದ ದುರ್ಬಲ ವರ್ಗಗಳ ಉನ್ನತಿ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ.

ಅಹಮದಾಬಾದ್​​ನಲ್ಲಿ ಸ್ಥಾಪಿಸಲಾಗಿರುವ ಸರ್ದಾರ್​ ಧಾಮ್​ ಭವನವು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. 2 ಸಾವಿರ ವಿದ್ಯಾರ್ಥಿನಿಯರು ವಾಸಿಸಲು ಅನುಕೂಲವಾಗುವ ಕನ್ಯಾ ಛತ್ರಾಲಯವನ್ನು ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: RSS - BJPಯಿಂದ ಕಾಶ್ಮೀರದ ಸಂಯೋಜಿತ ಸಂಸ್ಕೃತಿ ಒಡೆಯಲು ಯತ್ನ: ರಾಹುಲ್ ಗಾಂಧಿ

ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಉಪಸ್ಥಿತರಿದ್ದರು.

Last Updated : Sep 11, 2021, 2:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.