ETV Bharat / bharat

6 ವರ್ಷಗಳ ಹಿಂದೆ ನಮ್ಮ ರೈಲ್ವೇ ನಿಲ್ದಾಣಕ್ಕೆ ಬರುತ್ತಿದ್ದವರು ಪರಿಸ್ಥಿತಿ ನೋಡಿ ಶಪಿಸುತ್ತಿದ್ದರು: ಮೋದಿ - ಪ್ರಧಾನಿ ನರೇಂದ್ರ ಮೋದಿ

ದೇಶದ ಮೊದಲ ISO - 9001 ಪ್ರಮಾಣೀಕೃತ (ISO certified Railway Station) ರೈಲು ನಿಲ್ದಾಣವಾಗಿರುವ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿ ಮಾತನಾಡಿದರು.

PM Modi
PM Modi
author img

By

Published : Nov 15, 2021, 5:21 PM IST

Updated : Nov 15, 2021, 5:51 PM IST

ಭೋಪಾಲ್​(ಮಧ್ಯಪ್ರದೇಶ): ಆಧುನಿಕ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ಭಾರತ ದಾಖಲೆಯ ಮಟ್ಟದಲ್ಲಿ ಹೂಡಿಕೆ ಹರಿದು ಮಾಡುತ್ತಿದ್ದು, ಯೋಜನೆಗಳು ಯಾವುದೇ ಕಾರಣಕ್ಕೂ ವಿಳಂಬವಾಗದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಿಳಿಸಿದರು.

ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಿದ ನಮೋ

ಭೋಪಾಲ್​ನಲ್ಲಿ ರಾಣಿ ಕಮಲಾಪತಿ ರೈಲು (Rani Kamalapati station Bhopal) ನಿಲ್ದಾಣ ಉದ್ಘಾಟನೆ ಮಾಡಿ ಮಾತನಾಡಿದ ಮೋದಿ, ಈ ಐತಿಹಾಸಿಕ ರೈಲ್ವೆ ನಿಲ್ದಾಣ ಪುನರ್​​ ಅಭಿವೃದ್ಧಿ ಮಾಡಿರುವುದು ಮಾತ್ರವಲ್ಲದೇ ಗಿನ್ನೋರ್​ಗಢದ (Gond Queen Rani Kamalapati) ರಾಣಿ ಕಮಲಾಪತಿ ಹೆಸರನ್ನು ನಿಲ್ದಾಣಕ್ಕೆ ಇಡುವ ಮೂಲಕ ಅವರ ಹೆಸರು ಮತ್ತಷ್ಟು ಅಜರಾಮರಗೊಳಿಸಲಾಗಿದೆ ಎಂದರು.

  • 6 yrs back those who had some work with Indian Railways used to be seen cursing it.Crowded stations, filth,hrs of tension while waiting for trains, inconvenience of seating-eating facilities,filth inside trains,tension of safety used to come to mind when Railway was spoken of: PM pic.twitter.com/rrJy8XoXI4

    — ANI (@ANI) November 15, 2021 " class="align-text-top noRightClick twitterSection" data=" ">

ಸ್ವತಂತ್ರ ಭಾರತದ ನಂತರ ಇದೇ ಮೊದಲ ಸಲ ಇಷ್ಟೊಂದು ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಪುನರ್​ ಅಭಿವೃದ್ಧಿ ಮಾಡಲಾಗಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಭಾರತೀಯ ರೈಲ್ವೆಯಲ್ಲಿ (Indian Railways) ಕೆಲಸ ಮಾಡುವ ಉದ್ಯೋಗಿಗಳು ಶಪಿಸುವಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಕಿಕ್ಕಿರಿದ ನಿಲ್ದಾಣಗಳು, ಕೊಳಕು ರೈಲು, ಆಸನ-ಊಟ ಮಾಡುವ ಸೌಲಭ್ಯಗಳ ಅನಾನುಕೂಲತೆ ಕಂಡು ಬರುತ್ತಿತ್ತು. ಆದರೆ ಇದೀಗ ಎಲ್ಲವೂ ಬದಲಾಗಿದೆ. ರೈಲಿನಲ್ಲಿ ಪ್ರಯಾಣ ಬೆಳೆಸಲು ಇದೀಗ ಎಲ್ಲರೂ ಉತ್ಸುಕರಾಗಿದ್ದು, ಎಲ್ಲವೂ ಬದಲಾಗಿದೆ ಎಂದರು.

  • Not only has this historic railway station been redeveloped but with the linking of the name of Rani Kamlapati of Ginnorgarh to this station,its importance has also increased.Railway's pride is now linked to pride of Gondwana: PM inaugurates Rani Kamlapati Railway Station, Bhopal pic.twitter.com/TF0yv2pnL9

ಇದನ್ನೂ ಓದಿ: ಟಾಲಿವುಡ್ ನಟಿ ಮೇಲೆ ಹಲ್ಲೆ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿಗಳು

ಭೋಪಾಲ್​ನಲ್ಲಿರುವ ರಾಣಿ ಕಮಲಾಪತಿ ರೈಲು ನಿಲ್ದಾಣ ಭಾರತದ ಮೊಟ್ಟಮೊದಲ ವಿಶ್ವದರ್ಜೆಯ ರೈಲು ನಿಲ್ದಾಣ (India's First world class railway station) ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದರ್ಜೆಯ ಸೌಕರ್ಯ (ISO certified Railway Station) ಹೊಂದಿರುವ ಈ ನಿಲ್ದಾಣದ ಅಭಿವೃದ್ಧಿಗೆ ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮತ್ತು ಕಾಯ್ದಿರಿಸದ ಟಿಕೆಟ್‌ಗಳನ್ನು ತೆಗೆದುಕೊಳ್ಳಲು ಪ್ರತ್ಯೇಕ ಕೌಂಟರ್‌ಗಳಿವೆ. ಮೆಟ್ರೋ ನಿಲ್ದಾಣಕ್ಕೂ ಈ ನಿಲ್ದಾಣ ಸಂಪರ್ಕ ಕಲ್ಪಿಸಲಿದೆ.

ನಿಲ್ದಾಣದಲ್ಲಿ ವಿಶೇಷಚೇತನ ಪ್ರಯಾಣಿಕರಿಗೆ ಮೆಟ್ಟಿಲುಗಳ ಬದಲಿಗೆ ರ‍್ಯಾಂಪ್‌ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶೇಷಚೇತನರಿಗೋಸ್ಕರ ಗಾಲಿಕುರ್ಚಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

Last Updated : Nov 15, 2021, 5:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.