ETV Bharat / bharat

ಅಯೋಧ್ಯೆ ರೈಲು, ವಿಮಾನ ನಿಲ್ದಾಣ ಉದ್ಘಾಟಿಸಿ, ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ - Vande Bharat

ಉತ್ತರಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ಮೋದಿ ಚಾಲನೆ
author img

By ETV Bharat Karnataka Team

Published : Dec 30, 2023, 12:47 PM IST

Updated : Dec 30, 2023, 3:00 PM IST

ಅಯೋಧ್ಯೆ (ಉತ್ತರ ಪ್ರದೇಶ): ವಿಶ್ವವಿಖ್ಯಾತ ಭವ್ಯ ರಾಮಮಂದಿರ ಉದ್ಘಾಟನೆಗೂ ಮೊದಲು ವಿಮಾನ ನಿಲ್ದಾಣದ ಮಾದರಿಯಲ್ಲಿ ನವೀಕರಿಸಲಾಗಿರುವ ಇಲ್ಲಿನ ಅಯೋಧ್ಯೆ ಧಾಮ ರೈಲ್ವೆ ಜಂಕ್ಷನ್​, ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.

  • #WATCH | Prime Minister Narendra Modi inaugurates the Ayodhya Dham Junction railway station, in Ayodhya, Uttar Pradesh

    Developed at a cost of more than Rs 240 crore, the three-storey modern railway station building is equipped with all modern features like lifts, escalators,… pic.twitter.com/oJMFLsjBnp

    — ANI (@ANI) December 30, 2023 " class="align-text-top noRightClick twitterSection" data=" ">

ವಿವಿಧ ಕಾರ್ಯಕ್ರಮಗಳಿಗಾಗಿ ಉತ್ತರಪ್ರದೇಶದ ಅಯೋಧ್ಯೆಗೆ ಬಂದಿರುವ ಪ್ರಧಾನಿ ಅವರಿಗೆ ಮೊದಲು ಭವ್ಯ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ರಾಜ್ಯಪಾಲೆ ಆನಂದಿ ಬೆನ್, ಸಿಎಂ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ ಅಯೋಧ್ಯೆಯಲ್ಲಿ ರೋಡ್​ ಶೋ ನಡೆಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಪ್ರಧಾನಿಗೆ ಪುಷ್ಟವೃಷ್ಟಿ ಸುರಿಸಿದರು.

ರೈಲು ನಿಲ್ದಾಣ ಲೋಕಾರ್ಪಣೆ: ವಿಮಾನ ನಿಲ್ದಾಣದ ಮಾದರಿಯಲ್ಲಿ ನವೀಕರಿಸಲಾಗಿರುವ ಅಯೋಧ್ಯೆ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ನಿಲ್ದಾಣದ ಕಟ್ಟಡವು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಸಾಮಗ್ರಿಗಳ ಅಂಗಡಿಗಳು, ಕ್ಲೋಕ್ ರೂಮ್‌ಗಳು, ಮಕ್ಕಳ ಆರೈಕೆ ಕೊಠಡಿಗಳು ಹಾಗೂ ವಿಶ್ರಾಂತಿ ಕೊಠಡಿಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಇದು ಹೊಂದಿದೆ.

ಉದ್ಘಾಟನೆಯ ಬಳಿಕ ನಿಲ್ದಾಣವನ್ನು ಸುತ್ತು ಹಾಕಿದ ಪ್ರಧಾನಿ ಮೋದಿ, ಅಲ್ಲಿನ ಸೊಬಗನ್ನು ಕಣ್ತುಂಬಿಕೊಂಡರು. ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವೇಳೆ ಜೊತೆಗಿದ್ದರು.

  • #WATCH | Prime Minister Narendra Modi inaugurates the Ayodhya Dham Junction railway station, in Ayodhya.

    Uttar Pradesh Governor Anandiben Patel, CM Yogi Adityanath, Railways Minister Ashwini Vaishnaw are also present. pic.twitter.com/ls97j4eKkE

ರೈಲುಗಳಿಗೆ ಚಾಲನೆ: ಇದೇ ವೇಳೆ ನಿಲ್ದಾಣದಿಂದಲೇ 2 ಅಮೃತ್​ ಭಾರತ್​, 6 ವಂದೇ ಭಾರತ್​ ರೈಲುಗಳಿಗೆ ಚಾಲನೆ ಕೂಡ ನೀಡಿದರು. ಅಮೃತ್ ಭಾರತ್ ರೈಲಿನಲ್ಲಿ ತೆರಳಿದ ಅವರು ಅಲ್ಲಿದ್ದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳನ್ನು ಮಾತನಾಡಿಸಿದರು.

ರೈಲುಗಳ ಸಂಚಾರದ ಹಾದಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಅಮೃತಸರ-ದೆಹಲಿ, ಮಂಗಳೂರು-ಮಡಗಾಂವ್​, ಅಯೋಧ್ಯೆ- ಆನಂದ್​ ವಿಹಾರ್ ಟರ್ಮಿನಲ್, ಶ್ರೀಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ, ಜಲ್ನಾ-ಮುಂಬೈ, ಕೊಯಮತ್ತೂರು-ಬೆಂಗಳೂರು ಕ್ಯಾಂಟ್ ಮಾರ್ಗಗಳಲ್ಲಿ ಇವು ಸಂಚಾರ ನಡೆಸುತ್ತವೆ.

  • #WATCH | IndiGo pilot captain Ashutosh Shekhar welcomes passengers as the first flight takes off from Delhi for the newly constructed Maharishi Valmiki International Airport, Ayodhya Dham, in Ayodhya, UP. pic.twitter.com/rWkLSUcPVF

ಎರಡು ಅಮೃತ್ ಭಾರತ್ ರೈಲುಗಳು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಮತ್ತು ಮಾಲ್ಡಾ ಟೌನ್- ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್​ಗೆ ಇವು ಸಂಪರ್ಕ ಕಲ್ಪಿಸುತ್ತವೆ. ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ನವೀಕರಣಗೊಂಡಿರುವ ಅಯೋಧ್ಯೆ ವಿಮಾನ ನಿಲ್ದಾಣವನ್ನು ಅವರು ಕೆಲವೇ ಸಮಯದಲ್ಲಿ ಅನಾವರಣಗೊಳಿಸಲಿದ್ದಾರೆ.

ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಉದ್ಘಾಟನೆ: ದಾಖಲೆಯ 20 ತಿಂಗಳಲ್ಲಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಇದೇ ವೇಳೆ ಇಂಡಿಗೋದ ಮೊದಲ ವಿಮಾನ ದೆಹಲಿಯಿಂದ ಅಯೋಧ್ಯೆಗೆ ಬಂದು ಇಳಿಯಿತು.

1450 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿಲ್ದಾಣದ ಮೊದಲ ಹಂತವನ್ನು ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು 6500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಿದ್ಧವಾಗಿದೆ. ಇಂಡಿಗೋ ಪೈಲಟ್ ಕ್ಯಾಪ್ಟನ್ ಅಶುತೋಷ್ ಶೇಖರ್ ಅವರು ದೆಹಲಿಯಿಂದ ಅಯೋಧ್ಯೆಗೆ ಬಂದ ಮೊದಲ ವಿಮಾನವನ್ನು ಸ್ವಾಗತಿಸಿದರು.

  • #WATCH | People shower flower petals on Prime Minister Narendra Modi as he holds a roadshow in Ayodhya, Uttar Pradesh

    PM Modi will inaugurate the Maharishi Valmiki International Airport Ayodhya Dham, redeveloped Ayodhya Dham Railway Station, and flag off new Amrit Bharat… pic.twitter.com/b53mxsHFml

ರೋಡ್​ ಶೋ: ಇದಕ್ಕೂ ಮುನ್ನ ಅಯೋಧ್ಯೆಯಲ್ಲಿ ರೋಡ್​ ಶೋ ನಡೆಸಲಾಯಿತು. ಇಕ್ಕೆಲಗಳಲ್ಲಿ ತುಂಬಿದ್ದ ಜನರು ಪುಷ್ಪವೃಷ್ಟಿ ಸುರಿಸಿ ಪ್ರಧಾನಿಗೆ ಭವ್ಯ ಸ್ವಾಗತ ಕೋರಿದರು.

ಇದನ್ನೂ ಓದಿ: ಅಯೋಧ್ಯೆಗಿಂದು ಪ್ರಧಾನಿ ಮೋದಿ ಭೇಟಿ: ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಲೋಕಾರ್ಪಣೆ

Last Updated : Dec 30, 2023, 3:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.