ETV Bharat / bharat

ವಾರಾಣಸಿಯಲ್ಲಿ 870 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

author img

By

Published : Dec 23, 2021, 7:21 PM IST

ನಾವು ಹಸುಗಳನ್ನು ತಾಯಿಯಂತೆ ಪೂಜಿಸುತ್ತೇವೆ. ಆದರೆ, ಗೋವು ಮತ್ತು ಗೋವರ್ಧನನ ಬಗ್ಗೆ ಮಾತನಾಡುವುದನ್ನೇ ಕೆಲವರು ಅಪರಾಧವನ್ನಾಗಿ ಮಾಡಿದ್ದಾರೆ. ಹಸು ಮತ್ತು ಎಮ್ಮೆಗಳನ್ನು ಗೇಲಿ ಮಾಡುವ ಜನರು ಇಂತಹ ಜಾನುವಾರುಗಳಿಂದ ದೇಶದ 8 ಕೋಟಿ ಕುಟುಂಬಗಳು ಜೀವನ ನಡೆಸುತ್ತಿದೆ ಎಂಬುದನ್ನು ಮರೆತು ಬಿಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದರು.

pm modi in varansi
ಪ್ರಧಾನಿ ಮೋದಿ

ವಾರಣಾಸಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ 870 ಕೋಟಿ ರೂಪಾಯಿಗಳ 22 ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಉದ್ಘಾಟನೆಗೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಮೋದಿ ಪರಿಶೀಲಿಸಿದರು. 22 ಅಭಿವೃದ್ಧಿ ಯೋಜನೆಗಳ ಪೈಕಿ ವಾರಾಣಸಿಯ ಕರ್ಖಿಯಾನ್‌ನಲ್ಲಿರುವ ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಫುಡ್ ಪಾರ್ಕ್‌ನಲ್ಲಿ 'ಬನಾಸ್ ಡೈರಿ ಸಂಕುಲ್' ಮುಖ್ಯವಾಗಿದೆ. ಸುಮಾರು 475 ಕೋಟಿ ರೂಪಾಯಿ ವೆಚ್ಚದಲ್ಲಿ 30 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಡೈರಿ ದಿನಕ್ಕೆ 5 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸೌಲಭ್ಯವನ್ನು ಹೊಂದಲಿದೆ.

ಅಷ್ಟೇ ಅಲ್ಲ, ಬನಾಸ್ ಡೈರಿಗೆ ಸಂಬಂಧಿಸಿದ 1.7 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ಸುಮಾರು 35 ಕೋಟಿ ರೂಪಾಯಿ ಬೋನಸ್ ಅನ್ನು ಆನ್​ಲೈನ್​​ ಮೂಲಕ ಪಿಎಂ ವರ್ಗಾಯಿಸಿದ್ದಾರೆ.

ಗೋವನ್ನು ತಾಯಿಯಂತೆ ಪೂಜಿಸುತ್ತೇವೆ

ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ನಾವು ಹಸುಗಳನ್ನು ತಾಯಿಯಂತೆ ಪೂಜಿಸುತ್ತೇವೆ. ಆದರೆ, ಗೋವು ಮತ್ತು ಗೋವರ್ಧನನ ಬಗ್ಗೆ ಮಾತನಾಡುವುದನ್ನೇ ಕೆಲವರು ಅಪರಾಧವನ್ನಾಗಿ ಮಾಡಿದ್ದಾರೆ. ಹಸು ಮತ್ತು ಎಮ್ಮೆಗಳನ್ನು ಗೇಲಿ ಮಾಡುವ ಜನರು ಇಂತಹ ಜಾನುವಾರುಗಳಿಂದ ದೇಶದ 8 ಕೋಟಿ ಕುಟುಂಬಗಳು ಜೀವನ ನಡೆಸುತ್ತಿದೆ ಎಂಬುದನ್ನು ಮರೆತು ಬಿಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿಶೇಷ ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ: ಪ್ರಧಾನಿಗೆ ರಾಮೋಜಿ ರಾವ್ ವಿವರಣೆ

6-7 ವರ್ಷಗಳ ಹಿಂದಿಗೆ ಹೋಲಿಸಿದರೆ ದೇಶದಲ್ಲಿ ಹಾಲಿನ ಉತ್ಪಾದನೆ ಶೇ.45ರಷ್ಟು ಹೆಚ್ಚಾಗಿದೆ. ವಿಶ್ವದ ಹಾಲು ಉತ್ಪಾದನೆಯಲ್ಲಿ ಭಾರತದ ಪಾಲು ಶೇ.22 ರಷ್ಟಿದೆ. ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯ ಮಾತ್ರವಲ್ಲದೇ ಹೈನುಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯವಾಗಿದೆ ಎಂದು ಪಿಎಂ ಮೋದಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.