ETV Bharat / bharat

ಕೃಷಿ ಕ್ಷೇತ್ರದಲ್ಲಿ 100 ಕಿಸಾನ್ ಡ್ರೋನ್​ ಬಳಕೆಗೆ ಪ್ರಧಾನಿ ಮೋದಿ ಚಾಲನೆ - ಕೃಷಿ ಚಟುವಟಿಕೆಗೆ ಕಿಸಾನ್​ ಡ್ರೋನ್​ಗಳ ಬಳಕೆಗೆ ಹಸಿರುನಿಶಾನೆ

'ಗರುಡ್ ಏರೋಸ್ಪೇಸ್' ಮುಂದಿನ 2 ವರ್ಷಗಳಲ್ಲಿ ಮೇಕ್​ ಇನ್​ ಇಂಡಿಯಾದಡಿ 1 ಲಕ್ಷ ಡ್ರೋನ್​ಗಳನ್ನು ತಯಾರಿಸಲಿದೆ. ಇದರಿಂದ ಯುವಜನತೆಗೆ ಉದ್ಯೋಗಾವಕಾಶವು ದೊರಕಲಿದೆ ಎಂದು ಮೋದಿ ಹೇಳಿದರು.

pm-modi
ಪ್ರಧಾನಿ ಮೋದಿ
author img

By

Published : Feb 19, 2022, 12:09 PM IST

ನವದೆಹಲಿ: ಬಜೆಟ್​ನಲ್ಲಿ ಘೋಷಿಸಿದಂತೆ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಮತ್ತು ಮಾರುಕಟ್ಟೆಗೆ ಉತ್ಪನ್ನಗಳ ಸಾಗಣೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಕಿಸಾನ್​ ಡ್ರೋನ್​ಗಳ ಬಳಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.

ಮನೇಸರ್​ನಲ್ಲಿ ನಡೆದ ವರ್ಚುಯಲ್ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ವಿವಿಧ ಕ್ಷೇತ್ರಗಳಲ್ಲಿ ಡ್ರೋನ್​ಗಳ ಬಳಕೆಯ ಬಗ್ಗೆ ವಿವರಿಸಿ, ಬೀಟಿಂಗ್ ರಿಟ್ರೀಟ್ ವೇಳೆ (ಗಣರಾಜ್ಯೋತ್ಸವ ದಿನದಂದು) ಪ್ರದರ್ಶಿಸಲಾದ 1,000 ಡ್ರೋನ್‌ಗಳ ಉದಾಹರಣೆಗಳನ್ನು ಉಲ್ಲೇಖಿಸಿದರು.

ಕೃಷಿ ಕ್ಷೇತ್ರದಲ್ಲಿ 100 ಕಿಸಾನ್ ಡ್ರೋನ್​ ಬಳಕೆಗೆ ಪ್ರಧಾನಿ ಮೋದಿ ಚಾಲನೆ
ಕೃಷಿ ಕ್ಷೇತ್ರದಲ್ಲಿ 100 ಕಿಸಾನ್ ಡ್ರೋನ್​ ಬಳಕೆಗೆ ಪ್ರಧಾನಿ ಮೋದಿ ಚಾಲನೆ

ಸ್ವಾಮಿತ್ವ ಯೋಜನೆಯಡಿ ಭೂ ದಾಖಲೆಗಳ ಸಮೀಕ್ಷೆ ಮತ್ತು ಕಷ್ಟಕರವಾದ ಪ್ರದೇಶಗಳಿಗೆ ಔಷಧ, ಲಸಿಕೆ ಪೂರೈಸಲು ಡ್ರೋನ್​ ಸಹಾಯಕವಾಗುತ್ತದೆ. ಹೆಚ್ಚಿನ ಸಾಮರ್ಥ್ಯದ ಕಿಸಾನ್​ ಡ್ರೋನ್‌ಗಳು ರೈತರಿಗೆ ಲಭ್ಯವಾಗುವ ಮೂಲಕ ತಾಜಾ ತರಕಾರಿ, ಹಣ್ಣು ಮತ್ತು ಹೂವುಗಳನ್ನು ನೇರವಾಗಿ ಮಾರುಕಟ್ಟೆಗೆ ಕಳುಹಿಸಲು ಸಹಾಯ ಮಾಡುತ್ತವೆ. ಮೀನುಗಾರರು ನದಿ ಅಥವಾ ಸಮುದ್ರದಿಂದ ತಾಜಾ ಮೀನುಗಳನ್ನು ನೇರವಾಗಿ ಮಾರಾಟಕ್ಕೆ ಕಳುಹಿಸಬಹುದು ಎಂದು ಮೋದಿ ಹೇಳಿದರು.

ತಂತ್ರಜ್ಞಾನ ಬಳಕೆ ಹೆಚ್ಚಿನ ಅವಕಾಶಗಳನ್ನು ತೆರೆದಿಡುತ್ತದೆ. ದೇಶದ ಹಲವಾರು ಕಂಪನಿಗಳು ಈ ನಿಟ್ಟಿನಲ್ಲಿ ಸಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಭಾರತವು ಡ್ರೋನ್​ ಸ್ಟಾರ್ಟ್​ಅಪ್​ಗೆ ತನ್ನನ್ನು ತೆರೆದುಕೊಂಡಿರುವುದು, ಮುಂದಿನ ದಿನಗಳಲ್ಲಿ ಇದರ ಪ್ರಭಾವ ಹೆಚ್ಚಲಿದೆ ಎಂದರು.

'ಗರುಡ್ ಏರೋಸ್ಪೇಸ್' ಮುಂದಿನ 2 ವರ್ಷಗಳಲ್ಲಿ ಮೇಕ್​ ಇನ್​ ಇಂಡಿಯಾದಡಿ 1 ಲಕ್ಷ ಡ್ರೋನ್​ಗಳನ್ನು ತಯಾರಿಸಲಿದೆ. ಇದರಿಂದ ಯುವಜನತೆಗೆ ಉದ್ಯೋಗಾವಕಾಶವೂ ದೊರಕಲಿದೆ ಎಂದು ಮೋದಿ ಹೇಳಿದರು.

ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಡ್ರೋನ್​ಗಳ ಬಳಕೆಯ ಬಗ್ಗೆ ಬಜೆಟ್​ನಲ್ಲಿ ಘೋಷಿಸಲಾಗಿತ್ತು. ಅದರಂತೆ ರೈತರಿಗೆ ಡ್ರೋನ್​ಗಳ ಲಭ್ಯತೆಗಾಗಿ ದುಡಿಯುತ್ತಿರುವ ಯುವಜನತೆಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಪ್ರಧಾನಿ ಹೇಳಿದರು.

ಓದಿ: ಅಯೋಧ್ಯೆಯಲ್ಲಿ ರಾಜಕೀಯ ಸಂಘರ್ಷ: ಎಸ್‌ಪಿ - ಬಿಜೆಪಿ ಬೆಂಬಲಿಗರ ನಡುವೆ ಗುಂಡಿನ ಚಕಮಕಿ, ಕಲ್ಲು ತೂರಾಟ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.