ETV Bharat / bharat

ಪ್ರಧಾನಿ ಮೋದಿ ಫ್ರಾನ್ಸ್‌ ಭೇಟಿ: ಮ್ಯಾಕ್ರೋನ್‌ ಜೊತೆ ಉಕ್ರೇನ್​ ಸಂಘರ್ಷ, ಆಫ್ಘನ್​ ಬಿಕ್ಕಟ್ಟು ಚರ್ಚೆ

ಮೂರು ದಿನಗಳ ಯುರೋಪ್​ ಪ್ರವಾಸದ ಕೊನೆಯಲ್ಲಿ ಫ್ರಾನ್ಸ್​ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಎಮ್ಯಾನುಯೆಲ್​ ಮ್ಯಾಕ್ರಾನ್​ರನ್ನು ಭೇಟಿ ಮಾಡಿ ಜಾಗತಿಕ ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಿದರು.

pm-modi-discuss
ಫ್ರಾನ್ಸ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ
author img

By

Published : May 5, 2022, 8:14 AM IST

ನವದೆಹಲಿ: ಡೆನ್ಮಾರ್ಕ್​ನ ಕೋಪನ್‌ಹೇಗನ್‌ನಲ್ಲಿ ನಡೆದ ಭಾರತ-ನಾರ್ಡಿಕ್ ಎರಡನೇ ಶೃಂಗಸಭೆಯಿಂದ ಹಿಂದಿರುಗುವ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಫ್ರಾನ್ಸ್‌ಗೆ ಭೇಟಿ ನೀಡಿದರು. ಈ ವೇಳೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ನಿಯೋಗ ಮಟ್ಟದ ಸಭೆ ನಡೆಸಿದ ಅವರು, ಉಕ್ರೇನ್ ಹಾಗೂ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆಯೂ ಚರ್ಚಿಸಿದ್ದಾರೆ.

ಇದಲ್ಲದೇ, ರಕ್ಷಣಾ ಸಹಕಾರ, ಬಾಹ್ಯಾಕಾಶ, ಆರ್ಥಿಕತೆ, ನಾಗರಿಕ ಪರಮಾಣು ಮತ್ತು ಜನರ ನಡುವಿನ ಸಂಬಂಧ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಉಭಯ ನಾಯಕರು ಸಮಾಲೋಚಿಸಿದರು. ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯನ್ನಾಗಿ ಮಾಡುವಲ್ಲಿ ಒಟ್ಟಾಗಿ ಕೆಲಸ ಮಾಡುವ ಮಾರ್ಗಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು.

ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಫ್ರಾನ್ಸ್​ ಅಧ್ಯಕ್ಷ

ಉಕ್ರೇನ್​ ದಾಳಿಗೆ ಫ್ರಾನ್ಸ್​ ಖಂಡನೆ: ಉಭಯ ನಾಯಕರ ಮಾತುಕತೆಯ ವೇಳೆ ಉಕ್ರೇನ್​ ಸಂಘರ್ಷ, ಮಾನವ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತವಾಯಿತು. ರಷ್ಯಾ ಪಡೆಗಳಿಂದ ಉಕ್ರೇನ್ ವಿರುದ್ಧ ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣವನ್ನು ಫ್ರಾನ್ಸ್ ಬಲವಾಗಿ ಖಂಡಿಸಿತು. ಉಕ್ರೇನ್‌ನಲ್ಲಿ ನಾಗರಿಕರ ಸಾವು-ನೋವನ್ನು ತಡೆಯಬೇಕಿದೆ, ಜನರ ದುಃಖಕ್ಕೆ ತಕ್ಷಣದ ಅಂತ್ಯವನ್ನು ಕಂಡುಕೊಳ್ಳಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಮೆರೆಯಬೇಕಿದೆ. ಇದಕ್ಕಾಗಿ ಎಲ್ಲಾ ರಾಷ್ಟ್ರಗಳನ್ನು ಒಟ್ಟುಗೂಡಿಸಿ ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ಫ್ರಾನ್ಸ್​ ಅಧ್ಯಕ್ಷರು ಕರೆ ನೀಡಿದರು.

ಪ್ರಧಾನಿ ಮೋದಿ, ಫ್ರಾನ್ಸ್​ ಅಧ್ಯಕ್ಷರ ಸ್ನೇಹ ಸಮ್ಮಿಲನ

ಆಫ್ಘಾನ್​ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಕಳವಳ: ಆಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್​ ಸರ್ಕಾರ ಅಲ್ಲಿನ ಜನರ ವಿರುದ್ಧ ನಡೆಸುತ್ತಿರುವ ಕ್ರೌರ್ಯದ ಬಗ್ಗೆಯೂ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರಾನ್​ ಮತ್ತು ಮೋದಿ ಕಳವಳ ವ್ಯಕ್ತಪಡಿಸಿದರು. ಶಾಂತಿಯುತ, ಸುರಕ್ಷಿತ ಮತ್ತು ಸ್ಥಿರ ಅಫ್ಘಾನಿಸ್ತಾನಕ್ಕಾಗಿ ಉಭಯ ನಾಯಕರು ಬೆಂಬಲ ವ್ಯಕ್ತಪಡಿಸಿದರು.

ಆಫ್ಘಾನಿಸ್ತಾನದಲ್ಲಿ ಜನರನ್ನು ಒಳಗೊಂಡಿರುವ ಮತ್ತು ಪ್ರಾತಿನಿಧಿಕ ಸರ್ಕಾರ ರಚನೆಯಾಗಬೇಕು. ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಸರ್ಕಾರ ಗೌರವಿಸಬೇಕು. ಭಯೋತ್ಪಾದನೆಯನ್ನು ಪೋಷಿಸಲು ಆಫ್ಘನ್​ ನೆಲವನ್ನು ಬಳಕೆ ಮಾಡುತ್ತಿರುವುದು ನಿಲ್ಲಬೇಕು ಎಂಬ ನಿಲುವು ವ್ಯಕ್ತವಾಯಿತು. ಪ್ರಧಾನಿ ಮೋದಿ ಅವರ ಫ್ರಾನ್ಸ್​ ಭೇಟಿಯು ಉಭಯ ದೇಶಗಳ ನಡುವೆ ಮಾತ್ರವಲ್ಲದೇ, ಉಭಯ ನಾಯಕರ ನಡುವಿನ ಬಲವಾದ ಸ್ನೇಹ ಮತ್ತು ಸೌಹಾರ್ದತೆಯನ್ನು ಪ್ರದರ್ಶಿಸಿತು. ಈ ವೇಳೆ ಮೋದಿ ಅವರು ಅಧ್ಯಕ್ಷ ಮ್ಯಾಕ್ರಾನ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

ಇದನ್ನೂ ಓದಿ: ಮೇ 6ಕ್ಕೆ ಇನ್ವೆಸ್ಟರ್ಸ್​​​ ಉನ್ನತ ಮಟ್ಟದ ಸಭೆ: ಹೂಡಿಕೆದಾರರೊಂದಿಗೆ ಮಹತ್ವದ ಚರ್ಚೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.