ETV Bharat / bharat

ಜಗತ್ತಿನ ಮೊದಲ ಕೋವಿಡ್ ವ್ಯಾಕ್ಸಿನ್ ಸಂಶೋಧಕ ಪ್ರಧಾನಿ ಮೋದಿ.. ಪೆಕ್ರು ಪೆಕ್ರನಂತೆ ಮಾತಾಡಿದ AIDMK ಮುಖಂಡ

ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವರಾಗಿರುವ ಉದಯ್​ಕುಮಾರ್ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ..

AIADMK candidate udaykumar
ಎಐಎಡಿಎಂಕೆ ಅಭ್ಯರ್ಥಿ ಮತ್ತು ಸಚಿವ ಆರ್​.ಬಿ.ಉದಯ್​ಕುಮಾರ್
author img

By

Published : Apr 2, 2021, 5:05 PM IST

Updated : Apr 2, 2021, 5:39 PM IST

ಮಧುರೈ,(ತಮಿಳುನಾಡು) : ಪ್ರಧಾನಿ ಮೋದಿ ಜಗತ್ತಿನ ಪ್ರಪ್ರಥಮ ಕೋವಿಡ್ ಲಸಿಕೆಯನ್ನು ಕಂಡುಹಿಡಿದಿದ್ದಾರೆ. ವಿಶ್ವದಲ್ಲಿ ಭಾರತ ಗೌರವ ಗಳಿಸಲು ಸಹಕರಿಸಿದ್ದಾರೆ ಎಂದು ತಮಿಳುನಾಡಿನ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವೇದಿಕೆಯಲ್ಲಿ ಆರ್​ಬಿ ಉದಯಕುಮಾರ್ ಭಾಷಣ

ಪ್ರಧಾನಿ ಮೋದಿ ತಮಿಳುನಾಡಿನ ಮಧುರೈ ವಿಧಾನಸಭಾ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಭಾಷಣದ ವೇಳೆ ವೇದಿಕೆ ಹಂಚಿಕೊಂಡಿದ್ದ ತಿರುಮಂಗಲಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಮತ್ತು ಸಚಿವ ಆರ್ ಬಿ ಉದಯ್​ಕುಮಾರ್ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Watch: ನಕ್ಕು ನಗಿಸುವ ಸಿನಿಮಾ ಕ್ರೇಜ್! 'ಯುವರತ್ನ' ಟಿಕೆಟ್‌ಗಾಗಿ ಅಭಿಮಾನಿಗಳ ಸರ್ಕಸ್!

ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವರಾಗಿರುವ ಉದಯ್​ಕುಮಾರ್ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ.

ಒಂದೇ ಹಂತದಲ್ಲಿ ಏಪ್ರಿಲ್ 6ಎಂದು ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದ್ದು, ಡಿಎಂಕೆ ಪಕ್ಷ ಕಾಂಗ್ರೆಸ್​ನೊಂದಿಗೆ ಕ್ಷೇತ್ರಗಳನ್ನ ಹಂಚಿಕೆ ಮಾಡಿಕೊಂಡಿದೆ.

Last Updated : Apr 2, 2021, 5:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.