ನವದೆಹಲಿ: ಶ್ರೇಷ್ಠ ಸಂಗೀತ ಸಾಧನೆಗೆ ನೀಡುವ ಗ್ರ್ಯಾಮಿ ಪ್ರಶಸ್ತಿ ಪಡೆದ ಇಂಡೋ-ಅಮೆರಿಕನ್ ಗಾಯಕಿ ಫಲ್ಗುಣಿ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ವಿಭಾಗದಲ್ಲಿ 'ಎ ಕಲರ್‌ಫುಲ್ ವರ್ಲ್ಡ್' ಪ್ರಶಸ್ತಿಗೆ ಆಯ್ಕೆಯಾಗಿತ್ತು.
-
Congratulations to Falguni Shah on winning the award for the Best Children’s Music Album at the Grammys. Wishing her the very best for her future endeavours. @FaluMusic
— Narendra Modi (@narendramodi) April 5, 2022 " class="align-text-top noRightClick twitterSection" data="
">Congratulations to Falguni Shah on winning the award for the Best Children’s Music Album at the Grammys. Wishing her the very best for her future endeavours. @FaluMusic
— Narendra Modi (@narendramodi) April 5, 2022Congratulations to Falguni Shah on winning the award for the Best Children’s Music Album at the Grammys. Wishing her the very best for her future endeavours. @FaluMusic
— Narendra Modi (@narendramodi) April 5, 2022
"ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಫಲ್ಗುಣಿ ಶಾ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಕಾರ್ಯಗಳಿಗೆ ಶುಭ ಹಾರೈಸುತ್ತೇನೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 40ರ ಹರೆಯದ ಶಾ ಅವರು ಜೈಪುರ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕೌಮುದಿ ಮುನ್ಷಿ ಅವರ ಮೂಲಕ ಬನಾರಸ್ ಶೈಲಿಯ 'ಠುಮ್ರಿ'(ಭಾರತದ ಅರೆ-ಶಾಸ್ತ್ರೀಯ ಸಂಗೀತದ ಒಂದು ಸಾಮಾನ್ಯ ಶೈಲಿ) ಮತ್ತು ಉದಯ್ ಮಜುಂದಾರ್ ಅವರಿಂದ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ.
2000ರಲ್ಲಿ ಅಮೆರಿಕಗೆ ತೆರಳಿದ್ದು, 2007ರಲ್ಲಿ ಸ್ವಯಂ-ಶೀರ್ಷಿಕೆಯ ಸೋಲೋ ಆಲ್ಬಂ ಬಿಡುಗಡೆ ಮಾಡಿದ್ದರು. ಇದರಲ್ಲಿ ಆಗ್ನೇಯ ಏಷ್ಯಾದ ಜಾನಪದ ಅಂಶಗಳನ್ನು ಪಾಶ್ಚಿಮಾತ್ಯ ಸಂಗೀತದೊಂದಿಗೆ ಸಂಯೋಜಿಸಿದ್ದರು. ಅಷ್ಟೇ ಅಲ್ಲ, ಫಲ್ಗುಣಿ ಶಾ ಅವರು ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರೊಂದಿಗೂ ಸಹ ಪ್ರದರ್ಶನ ನೀಡಿದ್ದಾರೆ. ಇವರು ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಮ್ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.
ಇದನ್ನೂ ಓದಿ: ಗ್ರ್ಯಾಮಿ ಪ್ರಶಸ್ತಿ ಪಡೆದ ಭಾರತೀಯ-ಅಮೆರಿಕನ್ ಗಾಯಕಿ ಫಲ್ಗುಣಿ ಶಾ