ETV Bharat / bharat

ಬಾಂಗ್ಲಾದೇಶದ ಪ್ರಧಾನಿಯಾಗಿ ಮರುಆಯ್ಕೆಯಾದ ಶೇಖ್ ಹಸೀನಾ; ಪ್ರಧಾನಿ ಮೋದಿ ಅಭಿನಂದನೆ

ಬಾಂಗ್ಲಾದೇಶದ ಪ್ರಧಾನಿಯಾಗಿ 5ನೇ ಬಾರಿಗೆ ಆಯ್ಕೆಯಾದ ಶೇಖ್ ಹಸೀನಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದರು.

ಪ್ರಧಾನಿ ಮೋದಿ ಅಭಿನಂದನೆ
ಪ್ರಧಾನಿ ಮೋದಿ ಅಭಿನಂದನೆ
author img

By ETV Bharat Karnataka Team

Published : Jan 9, 2024, 11:43 AM IST

ನವದೆಹಲಿ: ಬಾಂಗ್ಲಾದೇಶ ಪ್ರಧಾನಿಯಾಗಿ 4ನೇ ಬಾರಿಗೆ ಆಯ್ಕೆಯಾದ ಶೇಕ್​ ಹಸೀನಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯಗಳು ತಿಳಿಸಿದ್ದಾರೆ. ಭಾರತದ ಹೈಕಮಿಷನರ್ ಪ್ರಣಯ್ ಕುಮಾರ್ ವರ್ಮಾ ಅವರು ಹಸೀನಾ ಅವರನ್ನು ಭೇಟಿ ಮಾಡಿ, ಅಭಿನಂದಿಸಿ ಪ್ರಧಾನಿ ಅವರ ಶುಭಾಶಯಗಳನ್ನು ತಲುಪಿಸಿದರು.

ಬಾಂಗ್ಲಾದೇಶದ ನಿರಂತರ ಪ್ರಗತಿ, ಶಾಂತಿ ಮತ್ತು ಸಮೃದ್ಧಿಗೆ ಸರ್ಕಾರ ಶ್ರಮಿಸಲಿ ಎಂದು ಪ್ರಧಾನಿ ಮೋದಿ ಶುಭಾಶಯ ಪತ್ರದಲ್ಲಿ ಕೋರಿದ್ದಾರೆ. ಹೊಸ ಸರ್ಕಾರಕ್ಕೆ ತಮ್ಮ ಬೆಂಬಲ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

ಹೈಕಮಿಷನರ್​ ಭೇಟಿ: ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನರ್ ಸೋಮವಾರ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡುವ ಮೂಲಕ ಅಭಿನಂದಿಸಿದರು. ಚುನಾವಣೆಯಲ್ಲಿ ಅವಾಮಿ ಲೀಗ್ ವಿಜಯ ಸಾಧಿಸಿ, ಸತತ ನಾಲ್ಕನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಹಸೀನಾ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಿದರು.

ಭಾರತೀಯ ರಾಯಭಾರಿಯೊಂದಿಗೆ ರಷ್ಯಾ, ಚೀನಾ, ಭೂತಾನ್, ಫಿಲಿಪೈನ್ಸ್, ಸಿಂಗಾಪುರ್ ಮತ್ತು ಶ್ರೀಲಂಕಾದ ರಾಯಭಾರಿಗಳು ಹೊಸದಾಗಿ ಚುನಾಯಿತರಾದ ಪ್ರಧಾನಿಯನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ತಮ್ಮ ದೇಶಗಳ ನಿರಂತರ ಬೆಂಬಲ ಮುಂದುವರಿಯಲಿದೆ ಎಂದು ಭರವಸೆ ನೀಡಿದರು. ಹಸೀನಾ ಅವರು ವಿವಿಧ ದೇಶಗಳ ರಾಜತಾಂತ್ರಿಕರಿಗೆ ಧನ್ಯವಾದ ಅರ್ಪಿಸಿದರು. ಬಾಂಗ್ಲಾದೇಶದ ಅಭಿವೃದ್ಧಿ ಮತ್ತು ಸಮೃದ್ಧಿಯ ಕಡೆಗೆ ಹೊಸ ಸರ್ಕಾರದ ಪ್ರಯಾಣದಲ್ಲಿ ಸಹಕಾರವನ್ನೂ ಕೋರಿದರು.

ಅತಿ ಹೆಚ್ಚು ಅವಧಿಯ ಪ್ರಧಾನಿ: ಶೇಖ್​ ಹಸೀನಾ ಅವರು ಸತತ ನಾಲ್ಕನೇ ಮತ್ತು ಒಟ್ಟಾರೆ ಐದನೇ ಬಾರಿ ಪ್ರಧಾನಿ ಹುದ್ದೆಗೇರಿದ್ದಾರೆ. ಈ ಮೂಲಕ ಬಾಂಗ್ಲಾದೇಶದ ಇತಿಹಾಸಲ್ಲಿ ಅತ್ಯಧಿಕ ಕಾಲ ಆಡಳಿತ ನಡೆಸಿದ ಪ್ರಧಾನಿಯಾಗಲಿದ್ದಾರೆ. ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಮತ್ತು ಅದರ ಮಿತ್ರಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಇದರ ನಡುವೆಯೂ ಅವಾಮಿ ಲೀಗ್ ಪ್ರಚಂಡ ಗೆಲುವು ಸಾಧಿಸಿದೆ.

ಅವಾಮಿ ಲೀಗ್‌ನ ಅಧ್ಯಕ್ಷೆಯೂ ಆಗಿರುವ 76 ವರ್ಷದ ಹಸೀನಾ ಅವರು ಗೋಪಾಲ್‌ಗಂಜ್-3 ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸುವ ಮೂಲಕ ಎಂಟನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. 1991 ರ ಬಳಿಕ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಎರಡನೇ ಅತಿ ಕಡಿಮೆ ಮತದಾನ ನಡೆದಿದೆ. 300 ಸದಸ್ಯ ಬಲದ ಸಂಸತ್ತಿನಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ 223 ಸ್ಥಾನಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ: 5ನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ಶೇಖ್ ಹಸೀನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.